»   » ಕನ್ನಡತಿ ಪೂಜಾ ಪ್ರೇಮ ಪಾಶದಲ್ಲಿ ಹೃತಿಕ್?

ಕನ್ನಡತಿ ಪೂಜಾ ಪ್ರೇಮ ಪಾಶದಲ್ಲಿ ಹೃತಿಕ್?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಸ್ಪುರದ್ರೂಪಿ ನಟ ಹೃತಿಕ್ ರೋಷನ್ ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಬಂದಿದೆ. ಹೃತಿಕ್ ಗೆ ಬಿಡಿ ಯಾರಾದರೂ ಬೀಳುತ್ತಾರೆ ಬಿಡಿ ಎನ್ನುವ ಮಾತಿದೆ. ಅದರೆ, ಈ ಬಾರಿ ಹೃತಿಕ್ ಅವರ ಬೆಕ್ಕಿನ ಕಂಗಳು ಕನ್ನಡತಿ ಪೂಜಾ ಹೆಗ್ಡೆ ಮೇಲೆ ಬಿದ್ದಿದೆಯಂತೆ..

ಇನ್ನು ಒಂದು ಕನ್ನಡ ಚಿತ್ರದಲ್ಲೂ ನಟಿಸದ ಪೂಜಾ ಹೆಗ್ಡೆ ಹಾಗೂ ಹೃತಿಕ್ ರೋಷನ್ ನಡುವೆ ಏನೋ ಕುಚ್ ಕುಚ್ ಆಗಿದೆ ಎಂದು ಸುದ್ದಿ ಹಬ್ಬಿದೆ. ಅಶುತೋಷ್ ಗೌವರಿಕರ್ ಅವರ ನಿರ್ದೇಶನದ ಮೊಹೆಂಜೋ ದಾರೋ ಚಿತ್ರದಲ್ಲಿ ಹೃತಿಕ್ ಜೋಡಿಯಾಗಿ ಮಂಗಳೂರು ಮೂಲದ ಬಾಲೆ ಪೂಜಾ ನಟಿಸಿದ್ದಾರೆ.

OMG! Hrithik Roshan Is Dating A Kannadati Pooja Hegde?

ಬಾಲ್ಯದ ಗೆಳತಿ ಸೂಸನ್ ಕೈ ಹಿಡಿದು ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದ ಹೃತಿಕ್ ರೋಷನ್ ಅವರು ಹಲವು ವರ್ಷಗಳ ದಾಂಪತ್ಯದ ನಂತರ ಪತ್ನಿಗೆ ಇತ್ತೀಚೆಗೆ ವಿವಾಹ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ಮೆದುಳಿನ ಶಸ್ತ್ರಚಿಕಿತ್ಸೆ, ಎಡಬಿಡದೆ ಶೂಟಿಂಗ್ ನಲ್ಲಿ ಪಾಲ್ಗೊಂಡಿರುವ ಹೃತಿಕ್ ಗೆ ಹೊಸ ಸಂಗಾತಿ ಸಿಕ್ಕಿದ್ದಾಳೆ ಎಂಬ ಸುದ್ದಿ ಹಬ್ಬುತ್ತಿದೆ.

ಭುಜ್ ನಲ್ಲಿ ಶೂಟಿಂಗ್ ನಡೆಸಿದ ನಂತರ ಮುಂಬೈನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಸುಮಾರು 101 ದಿನಗಳ ಕಾಲ ಶೂಟಿಂಗ್ ಮುಗಿಸಿದ ಖುಷಿ ನನ್ನದಾಗಿದೆ ಎಂದು ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ. ಅದರೆ, ಹೃತಿಕ್ ಆಗಲಿ, ಪೂಜಾ ಆಗಲಿ ಗಾಸಿಪ್ ಬಗ್ಗೆ ಯಾವುದೇ ಉತ್ತರ ನೀಡಿಲ್ಲ, ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಅದರೆ, ಲವ್ವಲ್ಲಿ ಬಿದ್ದಿಲ್ಲ ಎಂಬ ಗಾಳಿ ಮಾತು ಓಡಾಡುತ್ತಿದೆ.

ಮಾಡೆಲ್ ಕಮ್ ನಟಿ ಪೂಜಾ ಹೆಗ್ಡೆ ಅವರು ತೆಲುಗಿನಲ್ಲಿ ನಾಗಾ ಚೈತನ್ಯ ಜೊತೆ ನಟಿಸಿದ ಲವ್ ಸ್ಟೋರಿ 'ಒಕ ಲೈಲಾ ಕೋಸಂ' ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದಲ್ಲದೆ ತೆಲುಗಿನಲ್ಲಿ ಮುಕುಂದ ಹಾಗೂ ತಮಿಳಿನಲ್ಲಿ 'ಮುಗಮೂಡಿ' ಚಿತ್ರದಲ್ಲಿ ನಟಿಸಿದ್ದಾರೆ.

English summary
OMG! Look who is in a secret affair with hot and handsome actor Hrithik Roshan! This time the single and ready to mingle Hrithik Roshan has fell for a Kannadati Yes, if the reports are to be believed, Hrithik Roshan and his co-star Pooja Hegde are in love.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada