ಸಂಗೀತ ನಿರ್ದೇಶಕನ ಜೊತೆ SRH ಟೀಂ ಮಾಲಕಿ ಕಾವ್ಯ ಮಾರನ್ ಲವ್ವಿ ಡವ್ವಿ?

ಐಪಿಎಲ್ ಸೀಸನ್ 18 ಕಳೆ ಕಟ್ಟಿದೆ. ಕಳೆದೊಂದು ವಾರದಿಂದ ಮತ್ತೆ ಕ್ರಿಕೆಟ್ ಕ್ರೇಜ್ ಶುರುವಾಗಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕವಾಗಿದ್ದು ನೋಡುಗರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಂದು ಪಂದ್ಯ ಗೆದ್ದು ಮತ್ತೊಂದರಲ್ಲಿ ಸೋತಿದೆ.

ತಮ್ಮ ತಂಡವನ್ನು ಹುರಿದುಂಬಿಸಲು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಸದಾ ಮುಂದೆ ಇರುತ್ತಾರೆ. ತಂಡ ಗೆದ್ದಾಗ ಹಿಗ್ಗುವ ಸೋತಾಗ ಕುಗ್ಗುವ ಆಕೆಯ ಎಕ್ಸ್‌ಪ್ರೆಷನ್ ವೈರಲ್ ಆಗುತ್ತಿರುತ್ತದೆ. SRH ತಂಡ ಆಡುವ ಪಂದ್ಯಗಳಲ್ಲಿ ಗ್ಯಾಲರಿಯಲ್ಲಿ ಕುಳಿತ ಕಾವ್ಯಾ ಕಡೆ ಆಗಾಗ್ಗೆ ಕ್ಯಾಮರಾ ಫೋಕಸ್ ಆಗುತ್ತಿರುತ್ತದೆ. ತಮಿಳುನಾಡಿನ ಖ್ಯಾತ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ ಈಕೆ.

Is IPL Sunrisers Hyderabad Co-owner Kavya Maran dating star musician

ಸನ್ ನೆಟ್‌ವರ್ಕ್‌ ಮಾಲೀಕ ಕಲಾನಿಧಿ ಮಾರನ್ ಮಗಳು ಕಾವ್ಯಾ ಮಾರನ್ ತಂದೆ ಹಾದಿಯಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸನ್‌ ರೈಸರ್ಸ್ ಹೈದರಾಬಾದ್‌ ಫ್ರಾಂಚೆಸಿಯ ಸಹ ಮಾಲೀಕರಾಗಿದ್ದಾರೆ. 'ಜೈಲರ್' ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾವ್ಯಾ ಬಗ್ಗೆ ರಜನಿಕಾಂತ್ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. SRH ತಂಡಕ್ಕೆ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿ, ಐಪಿಎಲ್ ಪಂದ್ಯದ ವೇಳೆ ನಮ್ಮ ಕಾವ್ಯಾ ಅವರನ್ನು ಟಿವಿಯಲ್ಲಿ ನೋಡಿದಾಗ ನನಗೆ ಬೇಸರವಾಗುತ್ತದೆ" ಎಂದು ತಲೈವಾ ಹೇಳಿದ್ದರು.

ಕಾವ್ಯಾ ಮಾರನ್ ಅಂದಾಜು 400 ಕೋಟಿ ರೂ. ಆಸ್ತಿಯ ಒಡತಿ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಆಕೆ ಖ್ಯಾತ ಸಂಗೀತ ನಿರ್ದೇಶಕನ ಜೊತೆ ಪ್ರೀತಿಲಿ ಬಿದ್ದಿದ್ದಾರೆ, ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಐಪಿಎಲ್ ಸೀಸನ್ 18ರ ಸಮಯದಲ್ಲಿ ಈ ಸುದ್ದಿ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ. ಆದರೆ ಬಹುತೇಕರು ಇದನ್ನು ನಂಬಲು ಸಿದ್ಧರಿಲ್ಲ.

ಕಾವ್ಯಾ ಮಾರನ್ ಹಾಗೂ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹರಿದಾಡ್ತಿದೆ. ಈ ಹಿಂದೆ ಕೀರ್ತಿ ಸುರೇಶ್ ಸೇರಿ ಕೆಲ ನಟಿಯರ ಜೊತೆ ಅನಿರುದ್ಧ್ ಹೆಸರು ತಳುಕು ಹಾಕಿಕೊಂಡಿತ್ತು. ತಮ್ಮ ಸೂಪರ್ ಹಿಟ್ ಸಂಗೀತದಿಂದ ಸೌತ್ ಸಿನಿದುನಿಯಾದಲ್ಲಿ ರಾಕ್‌ಸ್ಟರ್ ಅಂತ್ಲೇ ಅನಿರುದ್ಧ್ ಜನಪ್ರಿಯರಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಿಗೆ ಟ್ಯೂನ್ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ.

Is IPL Sunrisers Hyderabad Co-owner Kavya Maran dating star musician

ಇತ್ತೀಚೆಗೆ ಸನ್‌ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ತಿರುಚಿತ್ರಾಂಬಲಂ', 'ಬೀಸ್ಟ್', 'ಜೈಲರ್' ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ಅನಿರುದ್ದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯ ಸಂಸ್ಥೆ ನಿರ್ಮಿಸುತ್ತಿರುವ 'ಕೂಲಿ' ಹಾಗೂ 'ಜೈಲರ್'-2 ಚಿತ್ರದಲ್ಲಿ ಕೂಡ ರಾಕ್‌ಸ್ಟರ್ ಮ್ಯೂಸಿಕ್ ಸೌಂಡ್ ಮಾಡಲಿದೆ. ಇದೆಲ್ಲದರ ನಡುವೆ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ನಡುವೆ ಲವ್ವಿ ಡವ್ವಿ ನಡೀತಿದೆ ಎನ್ನುವ ಊಹಾಪೋಹ ಭಾರೀ ಸದ್ದು ಮಾಡ್ತಿದೆ. ರಿಷಬ್ ಪಂತ್ ಹಾಗೂ ಅಭಿಷೇಕ್ ಶರ್ಮಾ ಜೊತೆಗೂ ಕಾವ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗುಲ್ಲಾಗಿತ್ತು.

ಚೆನ್ನೈನಲ್ಲಿ ಹುಟ್ಟಿಬೆಳೆದ ಅನಿರುದ್ಧ್ ರವಿಚಂದರ್ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ರಜನಿಕಾಂತ್ ಪತ್ನಿ ಲತಾ ಅವರ ಸೋದರ ಸಂಬಂಧಿ ಈತ. ಹಾಗಾಗಿ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಧನುಷ್ ನಟಿಸಿದ '3' ಚಿತ್ರಕ್ಕೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆ ಚಿತ್ರದ 'ಕೊಲವೆರಿ ಡಿ' ಸಾಂಗ್ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ.

ವಿಶ್ವದಾದ್ಯಂತ 'ಕೊಲವೆರಿ ಡಿ' ಸಾಂಗ್ ಸದ್ದು ಮಾಡಿತ್ತು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳಿಗೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದರು. ನೋಡ ನೋಡುತ್ತಲೇ ಸೌತ್ ಸಿನಿದುನಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಪಟ್ಟಕ್ಕೇರಿದರು. ಬಾಲಿವುಡ್ ಸಿನಿಮಾ ಗೀತೆಗಳಿಗೂ ಟ್ಯೂನ್ ಹಾಕಿದ್ದಾರೆ.

More from Filmibeat

English summary
Speculation surrounds IPL Sunrisers Hyderabad's CEO Kavya Maran regarding her relationship with a popular music director
Read more about: ipl 2025 kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X