ತಮ್ಮ ನೆಚ್ಚಿನ ಹೀರೊ ಜೊತೆ ತೆರೆ ಹಂಚಿಕೊಳ್ಳುತ್ತಾರಾ ಯಶ್? ಬೊಂಬಾಟ್ ನ್ಯೂಸ್ ವೈರಲ್
ರಾಕಿಂಗ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಟೈಟಲ್ ಸಮೇತ ಸಿನಿಮಾ ಘೋಷಣೆ ಆಗಿದೆ. ಮುಂದಿನ ವರ್ಷ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಸದ್ಯಕ್ಕೆ ಚಿತ್ರೀಕರಣ ಆರಂಭವಾಗಿಲ್ಲ. ಸೆಟ್ಟೇರುವುದಕ್ಕು ಮೊದ್ಲೆ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿರುವುದು ಸುಳ್ಳಲ್ಲ.
'ಟಾಕ್ಸಿಕ್' ಜೊತೆಗೆ ಬಾಲಿವುಡ್‌ನಲ್ಲಿ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಸಹ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕಾರಣ ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನಲಾಗುತ್ತಿದೆ. ಈಗಾಗಲೇ ಲುಕ್ ಟೆಸ್ಟ್ ನಡೆಸಿರುವ ಬಗ್ಗೆಯೂ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಾನು ಎಲ್ಲೂ ಹೋಗಲ್ಲ, ಎಲ್ಲರನ್ನು ಇಲ್ಲಿಗೆ ಕರೆಯಿಸುತ್ತೇನೆ ಎನ್ನುವ ಯಶ್ ಬಾಲಿವುಡ್ ಎಂಟ್ರಿ ಸುಳ್ಳು ಎನ್ನುವವರು ಇದ್ದಾರೆ.

ಯಶ್ ಬಾಲಿವುಡ್ ಅಂಗಳದಲ್ಲಿ ಹೋಗುವ ಬಗ್ಗೆ ಅಷ್ಟೇನು ಉತ್ಸುಕರಾಗಿಲ್ಲ. 'KGF' ಸರಣಿ ಬಳಿಕ ಬಾಲಿವುಡ್‌ನಲ್ಲಿ ಯಶ್ ಕ್ರೇಜ್ ಜೋರಾಗಿದೆ. ಬಿಟೌನ್ ಫಿಲ್ಮ್ ಮೇಕರ್ಸ್ ಕೂಡ ಯಶ್ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ನಡೆದ ಬಾಲಿವುಡ್ ಫಿಲ್ಮ್ ಫೇರ್ ಅವಾರ್ಡ್ ವೇದಕೆಯಲ್ಲೂ ಯಶ್ ಹೆಸರು ಮಾರ್ದನಿಸಿದೆ. ಇದೆಲ್ಲದರ ನಡುವೆ ಶಾರುಖ್ ಖಾನ್ ಜೊತೆ ಯಶ್ ಕೈ ಜೋಡಿಸುತ್ತಾರೆ ಎನ್ನುವ ಚರ್ಚೆ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ.
ರಾಕಿಂಗ್ ಸ್ಟಾರ್ ಯಶ್ ನೆಚ್ಚಿನ ನಟ ಶಾರುಖ್ ಖಾನ್. ಈ ಬಗ್ಗೆ ಯಶ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಇದೀಗ ಕಿಂಗ್ ಖಾನ್ ಜೊತೆ ಸಿನಿಮಾ ಮಾಡಲು ಖುದ್ದು ಯಶ್ ಉತ್ಸುಕರಾಗಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಶಾರುಖ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಒಳ್ಳೆ ಕಥೆ ಸಿಕ್ಕರೆ ಮಾಡೋಣ ಎಂದಿದ್ದಾರಂತೆ. ತಮ್ಮ ರೆಡ್ ಚಿಲ್ಲೀಸ್ ಸಂಸ್ಥೆಯಲ್ಲೇ ಸಿನಿಮಾ ನಿರ್ಮಾಣಕ್ಕೂ ಕಿಂಗ್ ಖಾನ್ ಮನಸ್ಸಿ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ಸದ್ಯ ಯಶ್ 'ಟಾಕ್ಸಿಕ್' ಸಿನಿಮಾ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. 'KGF'-2 ಸಿನಿಮಾ ಬಂದು ಒಂದೂವರೆ ವರ್ಷದ ಬಳಿಕ ಈ ಸಿನಿಮಾ ಘೋಷಣೆ ಮಾಡಿದ್ದಾರೆ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಇನ್ನು ಕಾಯಿಸುವುದು ತಪ್ಪು ಎಂದು ರಾಕಿಂಗ್ ಸ್ಟಾರ್ ಅಂದುಕೊಂಡಿದ್ದಾರೆ. ಹಾಗಾಗಿ ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ನಟಿಸುವ ಬಗ್ಗೆಯೂ ಯಾವುದೇ ತೀರ್ಮಾಣ ಕೈಗೊಂಡಿಲ್ಲವಂತೆ. ಇದೆಲ್ಲದರ ನಡುವೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ಬಾಲಿವುಡ್‌ನಲ್ಲಿ ಚರ್ಚೆ ಶುರುವಾಗಿದೆ.

ಶಾರುಖ್ ಖಾನ್ ನನ್ನ ದೊಡ್ಡ ಇನ್ಸ್‌ಪಿರೇಷನ್ ಎಂದು ಯಶ್ ಈ ಹಿಂದೆ ಹೇಳಿದ್ದರು. ಹಾಗಾಗಿ ಅಂತಾದೊಂದು ಆಫರ್ ಬಂದರೆ ಖಂಡಿತ ನಟಿಸುವ ಸಾಧ್ಯತೆಯಿದೆ. ಆದರೆ ರಾಕಿಂಗ್ ಸ್ಟಾರ್ ಬಾಲಿವುಡ್‌ಗೆ ಅಂಗಳಕ್ಕೆ ಹೋಗುತ್ತಾರಾ? ಎನ್ನುವುದೇ ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದೆ ಕೆಲ ಸಂದರ್ಶನಗಳಲ್ಲಿ ಕೂಡ ಪರೋಕ್ಷವಾಗಿ ಇದನ್ನೇ ಯಶ್ ಹೇಳಿದ್ದರು.
'KGF' ಸಿನಿಮಾ ಮಾಡಿ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತೆ ಮಾಡಿದವರು ಯಶ್. ಪರಭಾಷಾ ತಂತ್ರಜ್ಞರು, ಕಲಾವಿದರು ಎಲ್ಲರನ್ನು ಕನ್ನಡಕ್ಕೆ ಬರುವಂತೆ ಮಾಡಿದರು. 'ಟಾಕ್ಸಿಕ್' ಚಿತ್ರದ ಮೂಲಕ ಅದನ್ನು ಪುನಾರಾವರ್ತನೆ ಮಾಡಲು ಮುಂದಾಗಿದ್ದಾರೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಯಿದೆ. ಮುಂದಿನ ವರ್ಷ ಏಪ್ರಿ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











