'ಕೆ ಜಿ ಎಫ್' ನವೆಂಬರ್ ನಲ್ಲಿ ರಿಲೀಸ್ ಆಗೋದು ಡೌಟಂತೆ!
Recommended Video

ಈ ವರ್ಷದ ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ 'ಕೆ ಜಿ ಎಫ್' ಕೂಡ ಒಂದಾಗಿದೆ. ಅನೇಕ ದಿನಗಳಿಂದ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಕಳೆದ ತಿಂಗಳು ಸಿಹಿ ಸುದ್ದಿ ನೀಡಿತ್ತು.
ಒಂದು ಕಡೆ 'ದಿ ವಿಲನ್' ಸಿನಿಮಾ ಅಕ್ಟೋಬರ್ 18ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಮತ್ತೊಂದು ಕಡೆ 'ಕೆ ಜಿ ಎಫ್' ಸಿನಿಮಾ ನವೆಂಬರ್ ತಿಂಗಳಿನಲ್ಲಿ ತೆರೆಗೆ ಬರಬೇಕಾಗಿದೆ. ಸಿನಿಮಾದ ಬಿಡುಗಡೆಯ ದಿನಾಂಕವನ್ನು ನವೆಂಬರ್ 16 ಫಿಕ್ಸ್ ಆಗಿದೆ. ಆದರೆ, ಸದ್ಯದ ಸುದ್ದಿಯ ಪ್ರಕಾರ ಸಿನಿಮಾ ಬಿಡುಗಡೆಯ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆಯಂತೆ.
ಹಾಗಾದರೆ, 'ಕೆ ಜಿ ಎಫ್' ಸಿನಿಮಾ ಬಿಡುಗಡೆಯಾಗುವುದು ಯಾವಾಗ?, ಸಿನಿಮಾ ಮತ್ತೆ ಮುಂದೆ ಹೋಗಲು ಕಾರಣವೇನು? ಎಂಬ ಕುತೂಹಲವಿದ್ದರೆ ಮುಂದೆ ಓದಿ...

ಡಿಸೆಂಬರ್ ನಲ್ಲಿ ಬಿಡುಗಡೆ?
ರಾಕಿಂಗ್ ಸ್ಟಾರ್ ಅಭಿನಯದ ಮಹತ್ವಾಕಾಂಕ್ಷೆಯ ಸಿನಿಮಾ 'ಕೆ ಜಿ ಎಫ್' ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ನವೆಂಬರ್ ನಿಂದ ಡಿಸೆಂಬರ್ ಗೆ ಚಿತ್ರದ ರಿಲೀಸ್ ಪೋಸ್ಟ್ ಪೋನ್ ಆಗಿದ್ದು, ಡಿಸೆಂಬರ್ 21 ಅಥವಾ 28 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ.

ಕಾರಣ ಏನು?
ಸಿನಿಮಾ ನಿಜವಾಗಿಯೂ ಮುಂದಕ್ಕೆ ಹೋಗಿದ್ದೆಯೇ?, ಬಿಡುಗಡೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ಈಗ ಮತ್ತೆ ಪೋಸ್ಟ್ ಪೋನ್ ಮಾಡಲು ಏನು ಕಾರಣ? ಎನ್ನುವ ಪ್ರಶ್ನೆಗಳಿಗೆ ಉತ್ತರ ಇನ್ನು ಸಿಕ್ಕಿಲ್ಲ. ಚಿತ್ರತಂಡ ಕೂಡ ಈ ಬಗ್ಗೆ ಎಲ್ಲಿಯೂ ತಿಳಿಸಿಲ್ಲ.

ಯಶ್ ಗೆ ಡಿಸೆಂಬರ್ ಲಕ್ಕಿ
ಒಂದು ರೀತಿ ಯೋಚನೆ ಮಾಡಿದರೆ ಯಶ್ ಗೆ ಡಿಸೆಂಬರ್ ಲಕ್ಕಿ. ಅವರ ಕೆಲವು ಸಿನಿಮಾಗಳು ಡಿಸೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಯಾಗಿವೆ. ಹಾಗೆ ರಿಲೀಸ್ ಆದ ಪೈಕಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ದೊಡ್ಡ ದಾಖಲೆ ಬರೆದಿದೆ. ಈಗ 'ಕೆ ಜಿ ಎಫ್' ಕೂಡ ಅದೇ ತಿಂಗಳು ಬರಬಹುದು.

ಈ ಭಾನುವಾರ ಟ್ರೇಲರ್
'ಕೆ ಜಿ ಎಫ್' ಚಿತ್ರದ ಒಂದು ಟೀಸರ್ ಈಗಾಗಲೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿತ್ತು. ಈಗ ಟ್ರೇಲರ್ ಸಮಯ ಬಂದಿದೆ. ಸಿನಿಮಾದ ಟ್ರೇಲರ್ ಗೆ ಇನ್ನು 5 ದಿನ ಬಾಕಿ ಇದ್ದು, ಅಕ್ಟೋಬರ್ 14 ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಟ್ರೇಲರ್ ಮೇಲೆ ದೊಡ್ಡ ನಿರೀಕ್ಷೆ ಇದೆ.

ಐದು ಭಾಷೆಗಳಲ್ಲಿ ಬಿಡುಗಡೆ
'ಕೆ ಜಿ ಎಫ್' ಬಿಡುಗಡೆ ದಿನಾಂಕ ಬಗ್ಗೆ ಸದ್ಯ ಗೊಂದಲ ಶುರುವಾಗಿದೆ. ಆದರೆ, ಈ ಸಿನಿಮಾ ಯಾವಾಗ ಬಿಡುಗಡೆಯಾದರೂ ಕೂಡ ಚಿತ್ರ ಪ್ರೇಮಿಗಳ ಕ್ರೇಜ್ ಕಡಿಮೆಯಾಗುವುದಿಲ್ಲ. ಬೇರೆ ಭಾಷೆಯ ದೊಡ್ಡ ಚಿತ್ರಗಳಿಗೆ ಸವಾಲಾಕುವ ಮಟ್ಟಿಗೆ ಈ ಸಿನಿಮಾ ಬರುತ್ತಿದೆ. ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.


Click it and Unblock the Notifications











