Samantha: ಪೋಷಕರನ್ನು ವಿರೋಧಿಸಿ ಮದ್ವೆ? ಸ್ಯಾಮ್‌ಗೆ ಗರ್ಭಪಾತ? 'ಖುಷಿ' ಸಿನಿಮಾ ಆಕೆಯ ರಿಯಲ್ ಲೈಫ್‌ ಸ್ಟೋರಿನಾ?

ವಿಜಯ್ ದೇವರಕೊಂಡ - ಸಮಂತಾ ನಟನೆಯ 'ಖುಷಿ' ಮಿಶ್ರಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವ ನಿರ್ವಾಣ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ಸಿನಿರಸಿಕರು ಮನಗೆಲ್ಲುವಲ್ಲಿ ಭಾಗಶಃ ಸಕ್ಸಸ್ ಕಂಡಿದೆ. ವಿಜಯ್- ಸ್ಯಾಮ್ ಇಬ್ಬರಿಗೂ ಇದು ಕಂಬ್ಯಾಕ್ ಸಿನಿಮಾ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ. ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ಚಿತ್ರತಂಡ ತೆರೆಗೆ ತಂದಿದೆ.

'ಖುಷಿ' ಚಿತ್ರದಲ್ಲಿ ಪ್ರೀತಿಲೀ ಬೀಳುವ ನಾಯಕ- ನಾಯಕಿ ಪೋಷಕರ ವಿರೋಧ ಕಟ್ಟಿಕೊಂಡು ಮದುವೆ ಆಗುತ್ತಾರೆ. ಪ್ರಪಂಚದಲ್ಲೇ ನಮ್ಮಂತ ದಂಪತಿ ಇಲ್ಲ ಎಂದು ಸಾಬೀತು ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಮದುವೆ ನಂತರ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿ ಸಮಸ್ಯೆಗಳು ಎದುರಾಗುತ್ತದೆ. ಕೊನೆಗೆ ಇವರಿಬ್ಬರ ಲವ್ ಸ್ಟೋರಿ ಸುಖಾಂತ್ಯ ಕಾಣುತ್ತಾ? ಇಲ್ವಾ? ಅನ್ನೋದು 'ಖುಷಿ' ಚಿತ್ರದ ಒನ್‌ಲೈನ್ ಸ್ಟೋರಿ. ಆದರೆ 'ಖುಷಿ' ಸಿನಿಮಾ ಸ್ಟೋರಿ ಸಮಂತಾ ರಿಯಲ್ ಲೈಫ್‌ ಸ್ಟೋರಿನಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

is Kushi movie story based on Samanthas real-life incidents?

ನಟ ನಾಗಚೈತನ್ಯಾ ಹಾಗೂ ನಟಿ ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಬಳಿಕ ಇಬ್ಬರೂ ಡಿವೋರ್ಸ್ ಪಡೆದು ದೂರಾದರು. 'ಖುಷಿ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಹ್ಯಾಪಿ ಎಂಡಿಂಗ್ ಇದೆ. ತಮ್ಮ ತಮ್ಮ ತಪ್ಪುಗಳ ಅರಿವಾಗಿ ನಾಯಕ-ನಾಯಕಿ ಒಂದಾಗುತ್ತಾರೆ. ಆದರೆ ಚೈಸ್ಯಾಮ್ ಜೀವನದಲ್ಲಿ ಆ ರೀತಿ ಆಗಲಿಲ್ಲ. ಇನ್ನುಳಿದಂತೆ ಚಿತ್ರದಲ್ಲಿನ ಕೆಲ ಸನ್ನಿವೇಶಗಳು ಚೈತು-ಸಮಂತಾ ಲೈಫ್‌ಸ್ಟೋರಿ ಹತ್ತಿರವಾಗಿದೆ ಎನ್ನುವ ಚರ್ಚೆ ಶುರುವಾಗಿದೆ.

'ಖುಷಿ' ಚಿತ್ರದಲ್ಲಿ ನಾಯಕ ವಿಪ್ಲವ್(ವಿಜಯ್ ದೇವರಕೊಂಡ) ಹಾಗೂ ಆರಾಧ್ಯ(ಸಮಂತಾ) ಕಾಶ್ಮೀರದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಸಮಂತಾದು ಬ್ರಾಹ್ಮಣರ ಕುಟುಂಬ ಮಹಾನ್ ದೈವಭಕ್ತರು. ವಿಜಯ್‌ದು ನಾಸ್ತಿಕರ ಕುಟುಂಬ. ತಾಯಿ ಬಿಟ್ಟರೆ ಮನೆಯಲ್ಲಿ ಯಾರು ಕೂಡ ದೇವರು, ಜಾತಕ ಯಾವುದನ್ನು ನಂಬುವುದಿಲ್ಲ. ತಮ್ಮ ಮದುವೆಗೆ ಪೋಷಕರನ್ನು ಒಪ್ಪಿಸುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಇಬ್ಬರು ಮನೆ ಬಿಟ್ಟು ಬಂದು ರಿಜಿಸ್ಟರ್ ಮ್ಯಾರೇಜ್ ಆಗುತ್ತಾರೆ. ಒಂದು ವರ್ಷ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಸಮಂತಾಗೆ ಗರ್ಭಪಾತವಾಗಿ ಇಬ್ಬರ ನಡುವೆ ಕಿರಿಕಿರಿ ಶುರುವಾಗುತ್ತದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ದೂರಾಗುತ್ತಾರೆ.

is Kushi movie story based on Samanthas real-life incidents?

ಈ ಕಥೆಗೆ ಸಮಂತಾಗೆ ಹೇಗೆ ಹತ್ತಿರ ಅನ್ನುವುದನ್ನು ನೋಡಿದರೆ 'ಏ ಮಾಯಾ ಚೇಸಾವೆ' ಸಿನಿಮಾ ಶೂಟಿಂಗ್ ವೇಳೆ ವಿದೇಶದಲ್ಲಿ ಚೈತು-ಸ್ಯಾಮ್ ನಡುವೆ ಪ್ರೀತಿ ಹುಟ್ಟಿತ್ತು. ಮದುವೆ ಬಗ್ಗೆ ಸಾಕಷ್ಟು ದಿನ ಚರ್ಚೆ ನಡೀತು. ಸಮಂತಾ ಕ್ರಿಶ್ಚಿಯನ್. ಚೈತು ಹಿಂದೂ. ನಾಗಾರ್ಜುನ ಫ್ಯಾಮಿಲಿ ಮದುವೆಗೆ ಒಪ್ಪಲಿಲ್ಲ ಎನ್ನುವ ಗುಸುಗುಸು ಕೇಳಿಬಂದಿತ್ತು. ಇಬ್ಬರೂ ಧೈರ್ಯವಾಗಿ ಮದುವೆ ವಿಚಾರ ಮನೆಯಲ್ಲಿ ಹೇಳಿದ್ದರಿಂದ ಯಾವುದೇ ಸಮಸ್ಯೆ ಆಗುವುದು ಬೇಡವೆಂದು ಒಲ್ಲದ ಮನಸ್ಸಿನಿಂದಲೇ ನಾಗಾರ್ಜುನ ಮದುವೆಗೆ ಒಪ್ಪಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದು ಎಷ್ಟು ನಿಜ? ಎಷ್ಟು ಸುಳ್ಳು? ಅನ್ನೋದು ಗೊತ್ತಿಲ್ಲ.

ಮದುವೆ ಬಳಿಕ ಎಲ್ಲವೂ ಚೆನ್ನಾಗಿತ್ತು. ಟಾಲಿವುಡ್ ಕ್ಯೂಟ್ ಕಪಲ್ ಎನಿಸಿಕೊಂಡಿದ್ದರು. ಆದರೆ ಇದ್ದಕ್ಕಿಂದಂತೆ ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತು. ಸಮಂತಾಗೆ ಗರ್ಭಪಾತವಾಗಿತ್ತು ಎನ್ನುವ ವದಂತಿ ಕೂಡ ಹರಿದಾಡಿತ್ತು. ಇದೇ ಇಬ್ಬರು ದೂರಾಗಲೂ ಕಾರಣ ಎನ್ನುವ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು.

ನಿಜಜೀವನದಲ್ಲಿ ಚೈಸ್ಯಾಮ್ ದೂರಾದರು. ತಮ್ಮಿಬ್ಬರ ಡಿವೋರ್ಸ್ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಇದಕ್ಕೆ ಅಸಲಿ ಕಾರಣ ಏನು ಎನ್ನುವುದನ್ನು ಇಬ್ಬರೂ ರಿವೀಲ್ ಮಾಡಲಿಲ್ಲ. ಆದರೆ 'ಖುಷಿ' ಚಿತ್ರದಲ್ಲಿ ವಿಪ್ಲವ್ ಹಾಗೂ ಆರಾಧ್ಯ ಡಿವೋರ್ಸ್ ಪಡೆಯಲಿಲ್ಲ. ಕೋಪ ಮಾಡಿಕೊಂಡು ತವರು ಮನೆಗೆ ಹೋಗುತ್ತಾಳೆ. ಕೊನೆಗೆ ಒಂದಾಗುತ್ತಾರೆ. ಹಾಗಂತ ಇದು ಸಮಂತಾ ಲೈಫ್‌ ಸ್ಟೋರಿ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದರೆ 3 ವರ್ಷಗಳ ಹಿಂದೆಯೇ ಈ ಕತೆಯನ್ನು ನಿರ್ದೇಶಕ ವಿಜಯ್ ಹಾಗೂ ಸ್ಯಾಮ್‌ಗೆ ಹೇಳಿ ಒಪ್ಪಿಸಿದ್ದರಂತೆ. ಬಳಿಕ ಚೈಸ್ಯಾಮ್ ದೂರಾದರು. ಕೆಲ ವಿಚಾರಗಳಲ್ಲಿ ಹೋಲಿಕೆ ಇದ್ದ ಮಾತ್ರಕ್ಕೆ ಇದು ಆಕೆಯ ರಿಯಲ್ ಲೈಫ್ ಸ್ಟೋರಿ ಎನ್ನಲು ಸಾಧ್ಯವಿಲ್ಲ.

'ಖುಷಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಫಸ್ಟ್ ವೀಕೆಂಡ್ ಸಿನಿಮಾ ಕಲೆಕ್ಷನ್ 70 ಕೋಟಿ ರೂ. ದಾಟಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ವಿಜಯ್- ಸ್ಯಾಮ್‌ಗೆ ಇಬ್ಬರಿಗೂ ಕೊಂಚ ಮಟ್ಟಿಗೆ ಸಕ್ಸಸ್ ಖುಷಿ ತಂದಿದೆ.

More from Filmibeat

English summary
is Kushi movie about Naga chaitanya and Samantha Real life story?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X