For Quick Alerts
  ALLOW NOTIFICATIONS  
  For Daily Alerts

  ಸಮಂತಾ ಕೊಟ್ಟ ಆಹ್ವಾನವನ್ನು ತಿರಸ್ಕರಿಸಿದರೇ ಪ್ರಭಾಸ್?

  |

  ನಟಿ ಸಮಂತಾ ತೆಲುಗು ಚಿತ್ರರಂಗದ ಪ್ರತಿಭಾವಂತ ಮತ್ತು ಪ್ರಭಾವಿ ನಟಿಯರಲ್ಲಿ ಒಬ್ಬರು. ಪ್ರಭಾವಿ ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾಗೆ ತೆಲುಗು ಸಿನಿರಂಗದಲ್ಲಿ ಹಲವು ಹಿರಿ-ಕಿರಿ ನಟ-ನಟಿಯರೊಂದಿಗೆ ಸ್ನೇಹವಿದೆ.

  ಸಿನಿಮಾಗಳ ಜೊತೆಗೆ ಶೋಗಳನ್ನು ಸಹ ನಡೆಸಿಕೊಡುವ ಸಮಂತಾ, ತಮ್ಮ ಟಾಕ್‌ ಶೋ 'ಸ್ಯಾಮ್-ಜ್ಯಾಮ್'ಗೆ ದೊಡ್ಡ-ದೊಡ್‌ಡ ಸೆಲೆಬ್ರಿಟಿಗಳನ್ನು ಕರೆಸಿ, ಅವರೊಟ್ಟಿಗೆ ಹರಟುತ್ತಾರೆ.

  ಸಮಂತಾ ಕೊಡುವ ಆಹ್ವಾನವನ್ನು ಸಾಮಾನ್ಯವಾಗಿ ಯಾರೂ ನಿರಾಕರಿಸುವುದಿಲ್ಲ, ಸ್ವತಃ ಮೆಗಾಸ್ಟಾರ್ ಚಿರಂಜೀವಿ ಅವರೇ ಸಮಂತಾ ಶೋ ಗೆ ಬಂದು ಟಾಕ್‌ ಶೋ ನಲ್ಲಿ ಭಾಗವಹಿಸಿದ್ದರು.

  ಈಗ ಹೊಸ ಸುದ್ದಿಯೆಂದರೆ ನಟಿ ಸಮಂತಾ, ತಮ್ಮ ಟಾಕ್ ಶೋ ಗೆ ಅತಿಥಿಯಾಗಿ ನಟ ಪ್ರಭಾಸ್ ಅನ್ನು ಆಹ್ವಾನಿಸಿದರಂತೆ. ಆದರೆ ನಟ ಪ್ರಭಾಸ್, ಟಾಕ್ ಶೋ ಗೆ ಬರಲು ಒಲ್ಲೆ ಎಂದಿದ್ದಾರಂತೆ.

  ಹೌದು, ಹೀಗೊಂದು ಸುದ್ದಿ ತುಸು ಜೊರಾಗಿಯೇ ಹರಿದಾಡುತ್ತಿದೆ, ಸಮಂತಾ ಟಾಕ್ ಶೋ ಗೆ ಪ್ರಭಾಸ್ ಅನ್ನು ಕರೆಸಲು ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ತಾನು ಟಾಕ್‌ ಶೋ ನಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರಂತೆ ಪ್ರಭಾಸ್.

  ತಮಗೆ ಟಾಕ್‌ ಶೋ ನಲ್ಲಿ ಭಾಗವಹಿಸುವುದು ಇಷ್ಟವಿಲ್ಲ ಎಂದು ಪ್ರಭಾಸ್ ಈ ಮೊದಲು ಹೇಳಿಕೊಂಡಿದ್ದರು. ರಾಜೀವ್ ಮಸಂದ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಭಾಸ್, ಗಂಭೀರ ಸಂದರ್ಶನಗಳಾದರೆ ಹಾಗೋ-ಹೀಗೋ ಮ್ಯಾನೇಜ್ ಮಾಡುತ್ತೇನೆ. ಆದರೆ ಟಾಕ್ ಶೋ ಗಳು ನನಗೆ ಆಗಿಬರುವುದಿಲ್ಲ ಎಂದಿದ್ದರು. ಇದೇ ಕಾರಣಕ್ಕೆ ಸ್ಯಾಮ್-ಜ್ಯಾಮ್ ಗೆ ಬರಲು ನಿರಾಕರಿಸಿದರಾ ಪ್ರಭಾಸ್? ಸ್ಪಷ್ಟಗೊಳ್ಳಬೇಕಿದೆ.

  ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ Rana Daggubati | Filmibeat Kannada

  ಆಹಾ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಸ್ಯಾಮ್-ಜ್ಯಾಮ್ ನಲ್ಲಿ ಈ ವರೆಗೆ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ನಾಗ್ ಅಶ್ವಿನ್, ಮೆಗಾಸ್ಟಾರ್ ಚಿರಂಜೀವಿ ಭಾಗವಹಿಸಿದ್ದಾರೆ.

  English summary
  Is Prabhas denied Samantha's invite to participate in her talk show 'Sam-Jam' telecasting in Aha OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X