Prabhas: 'ಸಲಾರ್' ರಿಲೀಸ್ ಡೇಟ್ ಮುಂದೂಡಲು ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಜಾತಕ ಕಾರಣ?

By ಫಿಲ್ಮಿಬೀಟ್ ಡೆಸ್ಕ್

ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಡೇಟ್ ತಡವಾಗುತ್ತಲೇಯಿದೆ. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಆ ನಿರ್ಧಾರದಿಂದ ಚಿತ್ರತಂಡ ಹಿಂದೆ ಸರಿದಿದೆ. ಆದರೆ ಹೊಸ ರಿಲೀಸ್ ಡೇಟ್ ಕೂಡ ಹೇಳದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಕಳೆದ ವರ್ಷ ಏಪ್ರಿಲ್ 14ಕ್ಕೆ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಕೊರೊನಾ ಹಾವಳಿ ಹಿನ್ನೆಲೆ ಈ ವರ್ಷಕ್ಕೆ ಪೋಸ್ಟ್‌ಪೋನ್ ಆಗಿತ್ತು. ಆದರೆ ಈ ವರ್ಷವೂ ಸಿನಿಮಾ ರಿಲೀಸ್ ಆಗೋದು ಅನುಮಾ ಎನ್ನುವಂತಾಗಿದೆ. ಗ್ರಾಫಿಕ್ಸ್‌ ಅಂದುಕೊಂಡ ಮಟ್ಟದಲ್ಲಿ ಬಂದಿಲ್ಲ ಎನ್ನುವ ಕಾರಣಕ್ಕೆ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

Prabhas-Horoscope-salaar-postponed

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಸಲಾರ್' ಚಿತ್ರಕ್ಕೆ ಬಂಡವಾಳ ಹೂಡಿದೆ. 'KGF' ಸರಣಿಗೆ ಕೆಲಸ ಮಾಡಿದ ತಂಡ ಈ ಚಿತ್ರಕ್ಕೂ ಕೈ ಜೋಡಿಸಿದೆ. ಶ್ರುತಿ ಹಾಸನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರೆ ಪೃಥ್ವಿರಾಜ್ ಸುಕುಮಾರ್, ಜಗಪತಿ ಬಾಬು, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.

ಟೀಸರ್ ರಿಲೀಸ್ ಮಾಡಿ ಆಗಸ್ಟ್ ಕೊನೆ ವಾರ ಟ್ರೈಲರ್ ರಿಲೀಸ್ ಮಾಡ್ತೀನಿ ಎಂದು ಹೇಳಿದ್ದ ಚಿತ್ರತಂಡ ದಿಢೀರನೆ ರಿಲೀಸ್ ಡೇಟ್ ಮುಂದೂಡಿದ್ದು ಬೇಸರದ ಸಂಗತಿ. ಈ ಹೈವೊಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಗ್ಗೆ ಉತ್ತರ ಭಾರತದಲ್ಲೂ ಭಾರೀ ನಿರೀಕ್ಷೆಯಿದೆ. 5 ಭಾಷೆಗಳಲ್ಲಿ ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್ ಸೂಪರ್ ಹಿಟ್ ಆಗಿದೆ.

'ಸಲಾರ್' ಸಿನಿಮಾ ರಿಲೀಸ್ ಡೇಟ್ ಮುಂದೆ ಹೋಗಲು ಕಾರಣ ಏನು ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರೋ ಪ್ರಭಾಸ್ ಈ ಸಿನಿಮಾ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. KGF ಬಳಿಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುರಿಂದ ಹೆಚ್ಚಿನ ಒತ್ತಡ ಇದೆ. ಹಾಗಾಗಿ ಯಾರೊಬ್ಬರೂ ಕಂಟೆಂಟ್, ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗಲು ಸಿದ್ಧರಿಲ್ಲ. ಈ ಬಾರಿ ಪ್ರೇಕ್ಷಕರ ನಿರೀಕ್ಷೆ ತಲುಪುವಂತಹ ಸಿನಿಮಾ ಕೊಡಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.

Prabhas-Horoscope-salaar-postponed

ಗ್ರಾಫಿಕ್ಸ್ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ಮತ್ತೆ ರೀವರ್ಕ್ ಮಾಡಲು ಗ್ರಾಫಿಕ್ಸ್‌ ಕಂಪನಿಗೆ ಹೇಳಿದ್ದಾರಂತೆ. ಅದಕ್ಕೆ ಇನ್ನು 2 ತಿಂಗಳು ಸಮಯಾವಕಾಶ ಕೇಳಿದ್ದಾರಂತೆ. ಪ್ರಶಾಂತ್ ನೀಲ್ ಸಾಕಷ್ಟು ಸನ್ನಿವೇಶಗಳನ್ನು ರೀ-ಶೂಟ್ ಮಾಡುವ ಲೆಕ್ಕಾಚಾರದಲ್ಲಿದ್ದಾರಂತೆ ಎನ್ನುವ ಗುಸುಗುಸು ಶುರುವಾಗಿದೆ. ಇದೆಲ್ಲದರ ನಡುವೆ ಪ್ರಭಾಸ್ ಜಾತಕದ ವಿಚಾರವೂ ಚರ್ಚೆ ಆಗುತ್ತಿದೆ ಎನ್ನುವ ವದಂತಿ ಹರಡಿದೆ.

ನಟ ಪ್ರಭಾಸ್ ಜಾತಕದ ಬಗ್ಗೆ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಹೇಳಿಕೆಗಳು ಈ ಹಿಂದೆ ವೈರಲ್ ಆಗಿದ್ದು ಗೊತ್ತೇಯಿದೆ. ಇನ್ಮುಂದೆ ಪ್ರಭಾಸ್‌ ಸಕ್ಸಸ್ ಗ್ರಾಫ್ ಏರಲ್ಲ. ಬದಲಿಗೆ ಇಳಿಯುತ್ತಲೇ ಇರುತ್ತದೆ ಎಂದು ವೇಣುಸ್ವಾಮಿ ಹೇಳಿದ್ದರು. ಅದ್ಯಾಕೋ ಪ್ರಭಾಸ್ ಮಾಡಿದ ಸಿನಿಮಾಗಳೆಲ್ಲಾ ಕೈಗೂಡುತ್ತಿಲ್ಲ. ಈ ವರ್ಷ ಪ್ರಭಾಸ್‌ಗೆ ಟೈಮ್ ಸರಿಯಿಲ್ಲ, ಎಂದು ಯಾರೋ ಹೇಳಿದ್ದಾರಂತೆ. ಚಿತ್ರತಂಡ 'ಸಲಾರ್' ರಿಲೀಸ್ ಮುಂದೂಡಲು ಇದು ಕೂಡ ಒಂದು ಕಾರಣ ಎನ್ನುವ ಗುಸುಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ. ಪ್ರಭಾಸ್‌ ನೇತೃತ್ವದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಮಾಡುವ ಬಗ್ಗೆಯೂ ಗೊಂದಲ ಇದೆಯಂತೆ.

ಪ್ರಭಾಸ್ ಮಾತ್ರ ಜಾತಕ, ಜ್ಯೋತಿಷ್ಯ ಯಾವುದನ್ನು ನಂಬುವವರಲ್ಲ. ಆದರೂ ಇದು ನೂರಾರು ಕೋಟಿ ವ್ಯವಹಾರ. ಯಾರ ನಂಬಿಕೆ ಏನೇ ಇದ್ದರೂ ಕೊನೆಗೆ ಇಲ್ಲಿ ಲೆಕ್ಕಕ್ಕೆ ಬರುವುದು ದುಡ್ಡಿನ ವಿಚಾರ. 'ಸಲಾರ್‌' ರೀತಿಯ ದೊಡ್ಡ ಸಿನಿಮಾ ಬರುವಾಗ ಬೇರೆ ಸಿನಿಮಾಗಳನ್ನು ರಿಲೀಸ್ ಮಾಡಲು ಹಿಂದೆ ಮುಂದೆ ನೋಡುವಂತಾಗುತ್ತದೆ. ಹಾಗಾಗಿನೇ ಈ ಬಾರಿ ಫಸ್ಟ್ ಕಾಪಿ ಸಿದ್ಧವಾಗುವ ತನಕ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಬಾರದು ಎಂದು ಚಿತ್ರತಂಡ ತೀರ್ಮಾನಿಸಿದೆಯಂತೆ. ಈ ವರ್ಷವೇ 'ಸಲಾರ್' ಸಿನಿಮಾ ರಿಲೀಸ್ ಆಗುತ್ತಾ? ಇಲ್ಲ ಮುಂದಿನ ಸಮ್ಮರ್‌ವರೆಗೂ ಕಾಯಬೇಕಾ? ಅನ್ನೋದನ್ನು ಕಾದು ನೋಡಬೇಕಿದೆ.

More from Filmibeat

English summary
Prabhas Horoscope reason behind salaar release date postponed?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X