For Quick Alerts
  ALLOW NOTIFICATIONS  
  For Daily Alerts

  ಫಿಜಿಯೋಥೆರಪಿಸ್ಟ್ ಜೊತೆ ರಹಸ್ಯವಾಗಿ ಮದುವೆ ಆಗಿಬಿಟ್ರಾ ಪ್ರಭುದೇವಾ?

  |

  ನಟ-ನಿರ್ದೇಶಕ-ನೃತ್ಯ ಸಂಯೋಜಕ ಪ್ರಭುದೇವ ಖಾಸಗಿ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪತ್ನಿ ರಾಮಲತಾಗೆ ವಿಚ್ಛೇದನ ನೀಡಿದ ಬಳಿಕ ಒಂಟಿಯಾಗಿದ್ದ ಪ್ರಭುದೇವ ಈಗ ಎರಡನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಮತ್ತೆ ಮದುವೆ ಆಗಲಿದ್ದಾರೆ ಪ್ರಭುದೇವಾ: ಹುಡುಗಿ ಯಾರು?ಮತ್ತೆ ಮದುವೆ ಆಗಲಿದ್ದಾರೆ ಪ್ರಭುದೇವಾ: ಹುಡುಗಿ ಯಾರು?

  ಸಂಬಂಧಿಕರೊಬ್ಬರ ಜೊತೆ ಪ್ರಭುದೇವ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. ಆದ್ರೆ, ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ ಪ್ರಕಾರ ಸಿಕ್ಕಿರುವ ಮಾಹಿತಿ ಏನಪ್ಪಾ ಅಂದ್ರೆ ಫಿಜಿಯೋಥೆರಪಿಸ್ಟ್ ಜೊತೆ ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

  ಸೆಪ್ಟೆಂಬರ್‌ನಲ್ಲಿ ಮದುವೆ

  ಸೆಪ್ಟೆಂಬರ್‌ನಲ್ಲಿ ಮದುವೆ

  ಫಿಜಿಯೋಥೆರಪಿಸ್ಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಪ್ರಭುದೇ ಸೆಪ್ಟೆಂಬರ್ ತಿಂಗಳಿನಲ್ಲಿ ಮದುವೆ ಆಗಿದ್ದಾರಂತೆ. ಮುಂಬೈನಲ್ಲಿ ವಿವಾಹವಾದ ಪ್ರಭುದೇವ ಸದ್ಯ ಗ್ರೀನ್ ಎಕರ್ಸ್‌ನಲ್ಲಿದ್ದು, ಸದ್ಯದಲ್ಲೇ ಚೆನ್ನೈಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.

  ಮೊದಲ ಪತ್ನಿಯಿಂದ ಡಿವೋರ್ಸ್

  ಮೊದಲ ಪತ್ನಿಯಿಂದ ಡಿವೋರ್ಸ್

  1995ರಲ್ಲಿ ರಾಮಲತಾ ಜೊತೆ ಮದುವೆ ಆಗಿದ್ದ ಪ್ರಭುದೇವ ಅವರಿಗೆ ಮೂವರು ಮಕ್ಕಳು. ಅದರಲ್ಲಿ ಒಬ್ಬ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದ. ಆದರೆ, ದಾಂಪತ್ಯ ಕಲಹ ಹಿನ್ನೆಲೆ 2011ರಲ್ಲಿ ರಾಮಲತಾ ಅವರಿಂದ ಪ್ರಭುದೇವ ಡಿವೋರ್ಸ್ ಪಡೆದುಕೊಂಡರು.

  'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ

  ನಯನತಾರ ಜೊತೆ ಡೇಟಿಂಗ್

  ನಯನತಾರ ಜೊತೆ ಡೇಟಿಂಗ್

  ಖ್ಯಾತ ನಟಿ ನಯನತಾರ ಜೊತೆ ಪ್ರಭುದೇವ ಪ್ರೀತಿಯಲ್ಲಿದ್ದರು. ಹಲವು ವರ್ಷಗಳ ಕಾಲ ಇಬ್ಬರು ಲಿವ್ ಇನ್ ರಿಲೇಶನ್‌ಷಿಪ್ ಸಂಬಂಧ ಹೊಂದಿದ್ದರು. ಈ ಸಂಬಂಧದಿಂದಲೇ ರಾಮಲತಾ ದಾಂಪತ್ಯ ಮುರಿದು ಬಿತ್ತು ಎಂದು ಹೇಳಲಾಗಿದೆ. ನಯನತಾರ ವಿರುದ್ಧ ಮಹಿಳಾ ಸಂಘಟನೆಗಳು ತಿರುಗಿ ಬಿದ್ದಿದ್ದವು. ತದನಂತರ ಪ್ರಭುದೇವ ಅವರಿಂದ ನಯನತಾರ ದೂರವಾದರು.

  ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು | Dhruva Sarja | Filmibeat Kannada
  ಪ್ರಭುದೇವ ಸಿನಿಮಾಗಳು

  ಪ್ರಭುದೇವ ಸಿನಿಮಾಗಳು

  ಇನ್ನು ಪ್ರಭುದೇವಾ ನಿರ್ದೇಶಿಸಿರುವ ಸಲ್ಮಾನ್ ನಟನೆಯ 'ರಾಧೆ' ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಹೊರತಾಗಿ ತಮಿಳಿನ ಪೊನ್ ಮಾಣಿಕ್‌ವೇಲ್, ತೀಲ್, ಯಂಗ್ ಮಂಗ್ ಸಂಗ್, ಭಗೀರಾ, ಒಮೈ ವಿಜಿಗೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆಗೆ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ.

  English summary
  Is Prabhudheva got married to his physiotherapist in Mumbai in September?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X