For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಗೆ ನಿರ್ದೇಶನ ಮಾಡಿ ಎಂದು ಸ್ಟಾರ್ ನಿರ್ದೇಶಕನಿಗೆ 13 ಕೋಟಿ ಆಫರ್

  |

  ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಸಿನಿಮಾ ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಸ್ಥಗಿತವಾಗಿದೆ. ಆದರೂ ಫೋನ್ ಮೂಲಕ ಒಂದಿಷ್ಟು ಕೆಲಸಗಳು ನಡೆಯುತ್ತಿವೆ.

  ಮುಂದಿನ ಸಿನಿಮಾ, ಕಲಾವಿದ ಆಯ್ಕೆ ಹೀಗೆ ಸಾಕಷ್ಟು ಕೆಲಸಗಳು ಫೋನ್ ಮೂಲಕವೇ ಆಗುತ್ತಿದೆ. ಸದ್ಯ ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಸಿನಿಮಾ ವಿಚಾರವೊಂದು ಸದ್ದು ಮಾಡುತ್ತಿದೆ. ಅಲ್ಲು ಅರ್ಜುನ್ ಗೆ ಸಿನಿಮಾ ಮಾಡುವಂತೆ ಖ್ಯಾತ ನಿರ್ದೇಶಕರಿಗೆ ಕೋಟಿ ಕೋಟಿ ಆಫರ್ ಮಾಡಿರುವ ವಿಚಾರ ಟಾಲಿವುಡ್ ನಲ್ಲಿ ವೈರಲ್ ಆಗಿದೆ. ಯಾರು ಆ ನಿರ್ದೇಶಕ? ಕೋಟಿ ಆಫರ್ ಮಾಡಿದ್ಯಾರು? ಮುಂದೆ ಓದಿ..

  'ಗೀತಾ ಗೋವಿಂದಂ' ಸಿನಿಮಾ ರಿಜೆಕ್ಟ್ ಮಾಡಿದ್ದ ಅಲ್ಲು ಅರ್ಜುನ್: ಕಾರಣ ಇದೆ'ಗೀತಾ ಗೋವಿಂದಂ' ಸಿನಿಮಾ ರಿಜೆಕ್ಟ್ ಮಾಡಿದ್ದ ಅಲ್ಲು ಅರ್ಜುನ್: ಕಾರಣ ಇದೆ

  ನಿರ್ದೇಶಕ ಕೊರಲಾಟ ಶಿವಗೆ 13 ಕೋಟಿ ಆಫರ್

  ನಿರ್ದೇಶಕ ಕೊರಲಾಟ ಶಿವಗೆ 13 ಕೋಟಿ ಆಫರ್

  ಕೊರಟಾಲ ಶಿವ ಟಾಲಿವುಡ್ ನ ಟ್ರೆಂಡಿಂಗ್ ನಿರ್ದೇಶಕರಲ್ಲಿ ಒಬ್ಬರು. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕೊರಟಾಲ ಶಿವಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಿನಿಮಾ ಮಾಡಲು ಕೋಟಿ ಕೋಟಿ ಆಫರ್ ಮಾಡಿದ್ದಾರಂತೆ. ಅಲ್ಲು ಅರ್ಜುನ್ ಗೆ ನಿರ್ದೇಶನ ಮಾಡಿ ಎಂದು 13 ಕೋಟಿ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ವೈರಲ್ ಆಗಿದೆ.

  ದಿಶಾ ಪಟಾನಿ ನಂತರ ಅಲ್ಲು ಡ್ಯಾನ್ ಗೆ ಫಿದಾ ಆದ ಮತ್ತೋರ್ವ ಬಾಲಿವುಡ್ ಸ್ಟಾರ್ ನಟದಿಶಾ ಪಟಾನಿ ನಂತರ ಅಲ್ಲು ಡ್ಯಾನ್ ಗೆ ಫಿದಾ ಆದ ಮತ್ತೋರ್ವ ಬಾಲಿವುಡ್ ಸ್ಟಾರ್ ನಟ

  ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ

  ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ

  ಅಲ್ಲು ಅರವಿಂದ್ ಪುತ್ರನಿಗೆ ಸಿನಿಮಾ ಮಾಡುವಂತೆ ಕೇಳಿಕೊಳ್ಳಲು ಕಾರಣ ಶಿವ ನಿರ್ದೇಶನದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿವೆ. ಮಿರ್ಚಿ, ಶ್ರೀಮಂತಡು, ಜನತಾ ಗ್ಯಾರೇಜ್, ಭರತ್ ಅನೇ ನೇನು ಅಂತಹ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕಾರಣ ಅಲ್ಲು ಅರ್ಜುನ್ ಗೂ ಸಿನಿಮಾ ಮಾಡಲಿ ಎನ್ನುವುದು ಅಲ್ಲು ಅರವಿಂದ್ ಬಯಕೆ. ಹಾಗಾಗಿ 13ಕೋಟಿಗೆ ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಆಚಾರ್ಯ ಸಿನಿಮಾದಲ್ಲಿ ಕೊರಟಾಲ ಶಿವ

  ಆಚಾರ್ಯ ಸಿನಿಮಾದಲ್ಲಿ ಕೊರಟಾಲ ಶಿವ

  ಕೊರಟಾಲ ಶಿವ ಸದ್ಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಸಿನಮಾಗೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಟಾಲಿವುಡ್ ನ ಭಾರಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ನಡುವೆಯೂ ಅಲ್ಲು ಅರ್ಜುನ್ ಗೆ ಕಥೆ ರೆಡಿ ಮಾಡಿ ವಿವರಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಆರು ನಿಮಿಷದ ಫೈಟ್ ದೃಶ್ಯಕ್ಕೆ ಇಷ್ಟೊಂದು ವೆಚ್ಚ?ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಆರು ನಿಮಿಷದ ಫೈಟ್ ದೃಶ್ಯಕ್ಕೆ ಇಷ್ಟೊಂದು ವೆಚ್ಚ?

  ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್

  ಪುಷ್ಪಾ ಸಿನಿಮಾದಲ್ಲಿ ಅಲ್ಲು ಅರ್ಜುನ್

  ಅಲ್ಲು ಅರ್ಜುನ್ ಸದ್ಯ ಪುಷ್ಪಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ಅಲ್ಲು ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಒಂದು ವೇಳೆ ಕೊರಟಾಲ ಶಿವು ಮತ್ತು ಅಲ್ಲು ಅರ್ಜುನ್ ಸಿನಿಮಾ ಮಾಹಿತಿ ನಿಜವೇ ಆಗಿದ್ದರೆ ಪುಷ್ಪ ಸಿನಿಮಾ ಮುಗಿದ ಬಳಿಕ ಈ ಕ್ರೇಜಿ ಕಾಂಬಿನೇಷನ್ ಒಂದಾಗುವ ಸಾಧ್ಯತೆ ಇದೆ.

  English summary
  Is Tollywood Producer Allu Aravind 13 crore offer to Director Koratala siva for allu Arjun movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X