ಸುಶಾಂತ್ ಸಿಂಗ್ ನಟಿಸಿದ್ದ ಸಿನಿಮಾ ರೀಮೆಕ್‌ನಲ್ಲಿ ರಜನಿಕಾಂತ್?

ಪಾಲಿಟಿಕ್ಸ್‌ಗೆ ಬರೋಕೆ ಹಿಂದೇಟು ಹಾಕಿದ ಸೂಪರ್ ಸ್ಟಾರ್ ರಜನಿಕಾಂತ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ಲೈಕಾ ಪ್ರೊಕಡ್ಷನ್ಸ್ ಸಂಸ್ಥೆ ಜೊತೆ 2 ಚಿತ್ರಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ ಸಿನಿಮಾ ರೀಮೇಕ್‌ನಲ್ಲಿ ತಲೈವಾ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಯಾವುದೇ ರೀಮೆಕ್ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಈ ಬಾರಿ ಅಂತಾದೊಂದು ಪ್ರಯತ್ನ ಮಾಡುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ತಲೈವಾ ಲೀಡ್ ರೋಲ್ ಪ್ಲೇ ಮಾಡ್ತಿಲ್ಲ. ಬದಲಿಗೆ ಒಂದು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರಂತೆ. ಲೈಕಾ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಟಿಸುತ್ತಿರುವ 2 ಸಿನಿಮಾಗಳಲ್ಲಿ ಒಂದು ಚಿತ್ರಕ್ಕೆ ಪುತ್ರಿ ಐಶ್ವರ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಕೂಡ ನಡೆದಿದ್ದು 'ಲಾಲ್‌ ಸಲಾಂ' ಎನ್ನುವ ಟೈಟಲ್ಕೂಡ ಫಿಕ್ಸ್ ಆಗಿದೆ. ವಿಷ್ಣು ವಿಶಾಲ್ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದಾರೆ.

ರಜನಿಕಾಂತ್ ಸದ್ಯ ನೆಲ್ಸನ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡ ನಟ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತಚೆಗೆ ಇವರಿಬ್ಬರ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡಿತ್ತು.

 'ಕಾಯ್ ಪೋ ಚೆ' ರೀಮೆಕ್‌ನಲ್ಲಿ ತಲೈವಾ

'ಕಾಯ್ ಪೋ ಚೆ' ರೀಮೆಕ್‌ನಲ್ಲಿ ತಲೈವಾ

ಐಶ್ವರ್ಯ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಬಾಲಿವುಡ್‌ನ 'ಕಾಯ್ ಪೋ ಚೆ' ರೀಮೆಕ್ ಎನ್ನಲಾಗುತ್ತಿದೆ. ಕತೆಯನ್ನು ಒಂದಷ್ಟು ಬದಲಾವಣೆ ಮಾಡಿಕೊಂಡು ತಮಿಳು ನೇಟಿವಿಟಿಗೆ ತಕ್ಕಂತೆ ಕಟ್ಟಿಕೊಡುವ ಪ್ರಯತ್ನ ನಡೀತಿದೆಯಂತೆ. ಈ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು ಪಾತ್ರಕ್ಕೆ ಬಹಳ ಮಹತ್ವ ಇದೆ ಎನ್ನಲಾಗುತ್ತದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

 ಸುಶಾಂತ್ ನಟಿಸಿದ್ದ 'ಕಾಯ್ ಪೋ ಚೆ'

ಸುಶಾಂತ್ ನಟಿಸಿದ್ದ 'ಕಾಯ್ ಪೋ ಚೆ'

2013ರಲ್ಲಿ ಸುಶಾಂತ್ ಸಿಂಗ್ ನಟನೆಯ 'ಕಾಯ್ ಪೋ ಚೆ' ಸಿನಿಮಾ ತೆರೆಗೆ ಬಂದಿತ್ತು. ಚೇತನ್ ಭಗತ್ ಬರೆದ 'ದಿ ಥ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ಕಾದಂಬರಿ ಆಧರಿಸಿ ಅಭಿಷೇಕ್ ಕಪೂರ್ ಈ ಸ್ಪೋರ್ಟ್ಸ್ ಡ್ರಾಮಾ ಚಿತ್ರ ಕಟ್ಟಿಕೊಟ್ಟಿದ್ದರು. ಸುಶಾಂತ್ ಜೊತೆಗೆ ಅಮಿತ್ ಸಾದ್ ಹಾಗೂ ರಾಜ್‌ಕುಮಾರ್ ರಾವ್ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದರು. ಕ್ರಿಕೆಟ್ ಜೊತೆಗೆ ಒಂದಷ್ಟು ರಾಜಕೀಯ ಅಂಶಗಳನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗಿತ್ತು. ಸುಶಾಂತ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

 ಸೂಪರ್ ಸ್ಟಾರ್ ಭೇಟಿ ಮಾಡಿದ್ದ ಸುಶಾಂತ್

ಸೂಪರ್ ಸ್ಟಾರ್ ಭೇಟಿ ಮಾಡಿದ್ದ ಸುಶಾಂತ್

6 ವರ್ಷಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ 'ಧೋನಿ' ಬಯೋಪಿಕ್‌ನಲ್ಲಿ ನಟಿಸಿದ್ದರು. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ಸುಶಾಂತ್ ಸಿಂಗ್ ಇಬ್ಬರು ಸಿನಿಮಾ ಪ್ರಮೋಷನ್‌ಗಾಗಿ ಊರೂರು ಸುತ್ತಿದ್ದರು. ಚೆನ್ನೈಗೆ ಹೋದ ವೇಳೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದರು. ತಲೈವಾ 'ಧೋನಿ' ಚಿತ್ರಕ್ಕೆ ಶುಭ ಹಾರೈಸಿದ್ದರು. ಮೂವರು ಜೊತೆಗಿರುವ ಫೋಟೊಗಳು ವೈರಲ್ ಆಗಿತ್ತು. ಆ ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ.

 ತಲೈವಾ ಅಭಿಮಾನಿಯಾಗಿ ಸುಶಾಂತ್

ತಲೈವಾ ಅಭಿಮಾನಿಯಾಗಿ ಸುಶಾಂತ್

ಇನ್ನು ಸುಶಾಂತ್ ಸಿಂಗ್ 'ದಿಲ್ ಬೆಚಾರ' ಚಿತ್ರದಲ್ಲಿ ರಜನಿಕಾಂತ್ ಅಭಿಮಾನಿಯಾಗಿ ನಟಿಸಿದ್ದರು. ತಲೈವಾನ ಇಮಿಟೇಟ್ ಮಾಡುವ ಪ್ರಯತ್ನ ಮಾಡಿದ್ದರು. ಸುಶಾಂತ್ ಸಿಂಗ ಅಗಲಿಕೆಯ ನಂತರ ಈ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಕೊರೋನಾ ಹಾವಳಿ ಹಿನ್ನೆಲೆ ಥಿಯೇಟರ್ ಬದಲು ನೇರವಾಗಿ ಸಿನಿಮಾ ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದಿತ್ತು.

More from Filmibeat

English summary
is Rajinikanth Starrer Lal Salaam movie Remake of Sushanth Singh's Kai po che. Aishwarya Rajinkanth Directed film is backed by Lyca Productions and has a special appearance by superstar Rajinikanth. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X