Jailer: ಸೂಪರ್ ಸ್ಟಾರ್ 'ಜೈಲರ್' ಆ ಹಾಲಿವುಡ್ ಸಿನಿಮಾ ನಕಲು?

ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ತಲೈವಾ ಅಬ್ಬರಿಸಿದ್ದಾರೆ. ಟ್ರೈಲರ್‌ನಲ್ಲಿ ಶಿವರಾಜ್‌ಕುಮಾರ್ ಹಾಗೂ ಮೋಹನ್ ಲಾಲ್ ದರ್ಶನ ಆಗಿಲ್ಲ. ಆದರೂ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಇಂತಾ ಹೊತ್ತಲ್ಲೇ ಈ ಸಿನಿಮಾ ಹಾಲಿವುಡ್ ಸಿನಿಮಾ ಕಾಪಿನಾ? ಎನ್ನುವ ಚರ್ಚೆ ಶುರುವಾಗಿದೆ.

ಸನ್‌ ಪಿಕ್ಚರ್ಸ್ ಸಂಸ್ಥೆ ಸಿಕ್ಕಾಪಟ್ಟೆ ಅದ್ಧೂರಿಯಾಗಿ 'ಜೈಲರ್' ಸಿನಿಮಾ ನಿರ್ಮಿಸಿದೆ. ತಮನ್ನಾ, ರಮ್ಯಾಕೃಷ್ಣ, ಸುನೀಲ್, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಚಿತ್ರಕ್ಕೆ ಪ್ಲಸ್ ಆಗಿದೆ. ಈಗಾಗಲೇ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 'ಕಾವಾಲ' ಸಾಂಗ್ ಆರ್ಭಟ ಜೋರಾಗಿಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಸಿನಿಮಾಗಳು ಬಝ್ ಕ್ರಿಯೇಟ್ ಮಾಡುವಲ್ಲಿ ಸೋಲುತ್ತಿವೆ. ಆದರೆ ಟ್ರೈಲರ್‌ನಿಂದ 'ಜೈಲರ್' ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ.

Is Rajinikanths Jailer copied Hollywood movie Nobody

ರಜನಿಕಾಂತ್ 2 ಶೇಡ್‌ಗಳಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೋಡೋದಕ್ಕೆ ಮುಗ್ಧನಂತೆ ಮಡದಿ ಮಕ್ಕಳ ಎದುರು ಪುಕ್ಕುಲನಂತೆ ಕಾಣುವ ಮುತ್ತುವೇಲ್ ಪಾಂಡಿಯನ್ ಅಸಲಿ ಕಥೆ ಬೇರೆನೆ ಇರುತ್ತದೆ ಅನ್ನೋದು ಟ್ರೈಲರ್ ನೋಡ್ತಾ ನೋಡ್ತಾ ಅರ್ಥವಾಗುತ್ತದೆ. ಕೊನೆ ಕೊನೆಗೆ ಮುತ್ತುವೇಲ್ ಪಾಂಡಿಯನ್ 'ಟೈಗರ್' ಆಗಿ ಅಬ್ಬರಿಸೋದನ್ನು ನೋಡಬಹುದು.

'ಜೈಲರ್' ಹಾಲಿವುಡ್ ಸಿನಿಮಾ ಕಾಪಿ?

ಹಾಲಿವುಡ್ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡೋದು ಹೊಸದೇನು ಅಲ್ಲ. ಈ ಹಿಂದೆ ಇದೇ ರೀತಿ ಸಾಕಷ್ಟು ಸಿನಿಮಾಗಳನ್ನು ತೆರೆಗೆ ತರಲಾಗಿದೆ. ಹಾಲಿವುಡ್ ಕಥೆಯನ್ನು ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಂಡು ಸಿನಿಮಾ ಮಾಡಿ ಗೆಲ್ಲುವ ಕೆಲಸ ನಡೆಯುತ್ತಲೇ ಇದೆ. 'ಜೈಲರ್' ಟ್ರೈಲರ್ ನೋಡ್ತಿದ್ದಂತೆ ಇದು 'ನೋಬಡಿ' ಎನ್ನುವ ಹಾಲಿವುಡ್ ಸಿನಿಮಾ ಕಾಪಿ ಎಂದು ಕೆಲವರು ಹೇಳುತ್ತಿದ್ದಾರೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದೆ.

'ಬಾಷಾ' ಅಲ್ಲ 'ನೋಬಡಿ' ಛಾಯೆ

'ಜೈಲರ್' ಸಿನಿಮಾ ಟ್ರೈಲರ್ ನೋಡುತ್ತಿದ್ದರೆ ಸ್ವತಃ ರಜನಿಕಾಂತ್ ನಟನೆಯ 'ಬಾಷಾ' ಸಿನಿಮಾ ಪ್ರೇರಣೆ ಇದ್ದಂತೆ ಕಾಣುತ್ತದೆ. ಆದರೆ 'ಬಾಷಾ'ಗಿಂತಲೂ 'ನೋಬಡಿ' ಸಿನಿಮಾ ಛಾಯೆ ಎದ್ದು ಕಾಣುತ್ತಿದೆ. ಜೈಲರ್ ಶೋಕೇಸ್ ಅಲ್ಲ ಇದು ನೊಬಡಿ ಶೋಕೇಸ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 2021ರಲ್ಲಿ ಬಂದಿದ್ದ 'ನೊಬಡಿ' ಸಿನಿಮಾ ಸಕ್ಸಸ್ ಕಂಡಿತ್ತು. ಚಿತ್ರದಲ್ಲಿ ಬಾಬ್ ಒಡೆನ್‌ಕಿರ್ಕ್ ಹೀರೊ ಆಗಿ ನಟಿಸಿದ್ದರು. ಅದೇ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ ಎನ್ನಲಾಗ್ತಿದೆ.

Is Rajinikanths Jailer copied Hollywood movie Nobody

'ಜೈಲರ್' ಕಥೆ ಏನು?

ಇನ್ನು 'ಜೈಲರ್' ಶೋಕೇಸ್ ವೀಡಿಯೋ ನೋಡಿದವರು ಕಥೆ ಏನು ಎನ್ನುವುದನ್ನು ಊಹಿಸಲು ಆರಂಭಿಸಿದ್ದಾರೆ. ವೃತ್ತಿಯಲ್ಲಿ ಮುತ್ತುವೇಲ್ ಪಾಂಡಿಯನ್ 'ಜೈಲರ್' ಆಗಿರುತ್ತಾನೆ. ತನಗಿರುವ ಕಾಯಿಲೆಯಿಂದ ಕೆಲಸ ಕಳೆದುಕೊಳ್ಳುವಂತಾಗುತ್ತದೆ. ಆದರೆ ಪೊಲೀಸ್ ಅಧಿಕಾರಿ ಆಗಿರುವ ಸಹೋದರನ ಕಾರಣದಿಂದ ಸಮಸ್ಯೆ ಒಂದು ಎದುರಾಗುತ್ತದೆ. ಮುತ್ತುವೇಲ್ 'ಜೈಲರ್' ಆಗಿದ್ದಾಗ ಇದ್ದ ಕ್ರಿಮಿನಲ್‌ಗಳ ಲಿಂಕ್ ಸಹಾಯದಿಂದ ಆ ಸಮಸ್ಯೆ ಹೇಗೆ ಬಗೆಹರಿಸುತ್ತಾನೆ ಅನ್ನೋದೇ ಸಿನಿಮಾ ಕಥೆ ಎಂದು ಚರ್ಚೆ ಆಗುತ್ತಿದೆ.

'ನೊಬಡಿ' ಕಥೆ

ಅಂದಹಾಗೆ 'ನೊಬಡಿ' ಸಿನಿಮಾ ಏನು ಎನ್ನುವುದನ್ನು ನೋಡುವುದಾದರೆ ಅಲ್ಲೂ ಒಬ್ಬ ವಯಸ್ಸಾದ ವ್ಯಕ್ತಿ, ಮಡದಿ ಮಕ್ಕಳ ಜೊತೆ ಜೀವಿಸುತ್ತಿರುತ್ತಾನೆ. ಆದರೆ ಅಚಾನಕ್‌ ಆಗಿ ರಷ್ಯನ್ ಮಾಫಿಯಾನ ಎದುರಾಕಿಕೊಳ್ಳುವಂತಾಗುತ್ತದೆ. ಆತ ಯಾರು ಅಲ್ಲ ಎಂದುಕೊಂಡವರಿಗೆ ಶಾಕ್ ಕೊಡುವಂತೆ ಕಥೆಗೆ ಟ್ವಿಸ್ಟ್ ಸಿಗುತ್ತದೆ. ಭರ್ಜರಿ ಆಕ್ಷನ್ ಬೆರಸಿ ಸಿನಿಮಾ ಕಟ್ಟಿಕೊಡಲಾಗಿದೆ. ಇದೇ ಕಥೆಯನ್ನು ಕೊಂಚ ಬದಲಿಸಿ ನೆಲ್ಸನ್ 'ಜೈಲರ್' ಸಿನಿಮಾ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಆಗಸ್ಟ್ 10ಕ್ಕೆ ತೆರೆಮೇಲೆ 'ಜೈಲರ್' ಎಂಟ್ರಿ ಆಗಲಿದೆ.

More from Filmibeat

English summary
Jailer trailer Released, Rajinikanth starrer Jailer copied hollywood movie Nobody. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X