ಆ ಸಮಸ್ಯೆಯಿಂದ ಬಳಲುತ್ತಿದ್ದಾರಾ ರಶ್ಮಿಕಾ? ಯಾಮಾರಿ ಮ್ಯಾಟರ್ ಲೀಕ್ ಆಯ್ತಾ?
ನಟ- ನಟಿಯರು ಕೂಡ ಮನುಷ್ಯರೇ ಅಲ್ಲವೇ? ಅವರಿಗೂ ಕಾಯಿಲೆ ಕಸಾಲೆ ಎಲ್ಲಾ ಮಾಮೂಲು. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಲಾವಿದರು ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾದವರು, ಅದರ ವಿರುದ್ಧ ಹೋರಾಡುತ್ತಿರುವವರು, ಹೋರಾಡಿ ಗೆದ್ದವರು ಚಿತ್ರರಂಗದಲ್ಲಿದ್ದಾರೆ. ನಟಿ ಸಮಂತಾ ಮಯೋಸೈಟಿಸ್ ಸಮಸ್ಯೆ ಎದುರಿಸಿದ್ದು ಗೊತ್ತೇಯಿದೆ. ಈಗ ಆಕೆ ಅದರಿಂದ ಬಹುತೇಕ ಚೇತರಿಸಿಕೊಂಡಿದ್ದಾರೆ. ಮಲಯಾಳಂ ನಟಿ ಮಮತಾ ಮೋಹನ್ ದಾಸ್ ಚರ್ಮ ಸಮಸ್ಯೆ ಎದುರಿಸುತ್ತಿದ್ದರೆ, ಮತ್ತೊಬ್ಬ ನಟಿ ಕಲ್ಪಿತಾ ಗಣೇಶ್ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಎನ್ನುವ ಗುಸುಗುಸು ಶುರುವಾಗಿದೆ.
ರಶ್ಮಿಕಾ ಮಂದಣ್ಣ ಮಾಡಿದ ಅದೊಂದು ಪೋಸ್ಟ್ ಇಂತಾದೊಂದು ಚರ್ಚೆ ಹುಟ್ಟಾಕ್ಕಿದೆ. ಹಾಗಂತ ಕೊಡಗಿನ ಕುವರಿ ನೇರವಾಗಿ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿಲ್ಲ. ಆಕೆಯ ಇನ್‌ಸ್ಟಾ ಸ್ಟೋರಿಯಿಂದ ಪರೋಕ್ಷವಾಗಿ ಸುಳಿವು ಸಿಕ್ಕಿದೆ.

ಡೈರಿಯಲ್ಲಿ ರಶ್ಮಿಕಾ ದಿನಚರಿ
ಕೊಡಗಿನ ಚೆಲುವೆಗೆ ಪ್ರತಿದಿನ ಡೈರಿ ಬರೆಯುವ ಅಭ್ಯಾಸ ಇರುವಂತೆ ಕಾಣುತ್ತಿದೆ. ಅದೇ ರೀತಿ ತಮ್ಮ ಪ್ರತಿದಿನದ ದಿನಚರಿಯನ್ನು ಕೂಡ ಕೆಲವೊಮ್ಮೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ "ಡಿಯರ್ ಡೈರಿ.. ಈ ದಿನ ಬಹಳ ಇಂಟ್ರೆಸ್ಟಿಂಗ್ ಆಗಿ ಇತ್ತು. ಬೆಳಗ್ಗೆ ಏಳುತ್ತಿದ್ದಂತೆ ಕಾರ್ಡಿಯೋ ವರ್ಕ್‌ಔಟ್ ಮಾಡಿದೆ. ಆ ನಂತರ ತಿಂಡಿ ಸೇವಿಸಿದೆ. ನಾಳಿನ ಶೆಡ್ಯೂಲ್‌ಗಾಗಿ ಬ್ಯಾಗ್ ಸಿದ್ಧಪಡಿಸಿಕೊಂಡೆ. ಆದರೆ ಎಂದಿನಂತೆ ನನ್ನ ಸುತ್ತಲಿನ ವಾತಾವರಣ, ಮಂಜು ನಾನು ಹೊರಗೆ ಹೋಗದಂತೆ ಡ್ರಾಮಾ ಮಾಡಿತು"

ರಶ್ಮಿಕಾಗೆ ಚರ್ಮದ ಸಮಸ್ಯೆ?
"ಬ್ಯಾಗ್ ಎಲ್ಲಾ ಸಿದ್ಧಪಡಿಸಿದ ನಂತರ ಮತ್ತೆ ವರ್ಕೌಟ್ ಮಾಡಿದೆ. ನಂತರ ಡಿನ್ನರ್ ಮುಗಿಸಿದೆ. ಇನ್ನು ಡೆರ್ಮಟ್ (ಡೆರ್ಮಟಾಲಜಿ) ಅಪಾಯಿಂಟ್‌ಮೆಂಟ್ ತೆಗೆದುಕೊಂಡೆ. ಮುಖ್ಯವಾದ ಮೀಟಿಂಗ್ ಇದೆ. ಆದರೆ ಅದು ಕ್ಯಾನ್ಸಲ್ ಆಗಿದೆ. ಮತ್ತೆ ಮನೆಗೆ ವಾಪಸ್ ಬಂದುಬಿಟ್ಟೆ. ಇನ್ನು ಗುಡ್‌ನೈಟ್" ಎಂದು ಲವ್ ಸಿಂಬಲ್ ಹಾಕಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಡೆರ್ಮಟ್ ಅಂದರೆ ಡೆರ್ಮಟಾಲಜಿಸ್ಟ್ ಎನ್ನುವ ಅರ್ಥ ಬರುತ್ತದೆ. ಇದನ್ನು ನೋಡಿ ಅಭಿಮಾನಿಗಳು ರಶ್ಮಿಕಾಗೆ ಏನಾಯಿತು. ಡೆರ್ಮಟಾಲಜಿಸ್ಟ್ ಅಪಾಯಿಂಟ್‌ಮೆಂಟ್ ಯಾಕೆ? ಆಕೆಗೆ ಚರ್ಮದ ಸಮಸ್ಯೆ ಎದುರಾಗಿದ್ಯಾ? ಅದಕ್ಕೆ ವೈದ್ಯರ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿರಬಹುದು ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸ್ತಿದ್ದಾರೆ.

ಚಿತ್ರರಂಗದಲ್ಲಿ ರಶ್ಮಿಕಾ ಹವಾ
ರಶ್ಮಿಕಾ ನಟನೆಯ ತಮಿಳಿನ 'ವಾರಿಸು' ಸಿನಿಮಾ ಬರೋಬ್ಬರಿ 300 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇನ್ನು ತೆಲುಗಿನ 'ಪುಷ್ಪ'- 2 ಸಿನಿಮಾದಲ್ಲಿ ಶ್ರೀವಲ್ಲಿ ಆಗಿ ರಶ್ಮಿಕಾ ಮತ್ತೆ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇವೆರಡು ಸಿನಿಮಾ ಬಿಟ್ಟರೆ ಸದ್ಯಕ್ಕೆ ಕೊಡಗಿನ ಕುವರಿ ಹೊಸ ಸಿನಿಮಾ ಯಾವುದು ಒಪ್ಪಿಕೊಂಡಿಲ್ಲ.

ಗಾಳಿಸುದ್ದಿಗಳಿಗೆ ರಶ್ಮಿಕಾ ಸ್ಪಷ್ಟನೆ
ಬಹಳ ದಿನಗಳಿಂದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಹರಿದಾಡುತ್ತಲೇ ಇದೆ. ಇದಕ್ಕೆಲ್ಲಾ ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ರಶ್ಮಿಕಾ ಸ್ಪಷ್ಟನೆ ನೀಡಿದ್ದರು. ಹೊಸ ವರ್ಷಕ್ಕೆ ಮಾಲ್ಡೀವ್ಸ್‌ಗೆ ವಿಜಯ್ ಜೊತೆ ಪ್ರವಾಸ ಹೋಗಿದ್ದಾಗಿ ಹೇಳಿದ್ದರು. ಫ್ರೆಂಡ್ಸ್ ಜೊತೆ ಪ್ರವಾಸಕ್ಕೆ ಹೋದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಅದೇ ರೀತಿ ಇತ್ತೀಚೆಗೆ ವಿಜಯ್ ದೇವರಕೊಂಡ ಫ್ಯಾಮಿಲಿ ಸಮೇತ ದುಬೈಗೆ ಹೋಗಿದ್ದರು. ಆಗ ಕೂಡ ರಶ್ಮಿಕಾ ಜೊತೆಗೆ ಹೋಗಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು.


Click it and Unblock the Notifications











