Sai Pallavi: ಚಿತ್ರರಂಗ ತೊರೆದರೇ 'ಪ್ರೇಮಂ' ಸುಂದರಿ ಸಾಯಿ ಪಲ್ಲವಿ!

ಸಾಯಿ ಪಲ್ಲವಿ ಸೌತ್ ಚಿತ್ರರಂಗದಲ್ಲಿ ಬೇಡಿಕೆ ಇರುವ ನಟಿ. ಮಲಯಾಳಂ ಚಿತ್ರದಿಂದ ಸಿನಿಮಾ ಜರ್ನಿ ಶುರು ಮಾಡಿದ ನಟಿ ಸಾಯಿ ಪಲ್ಲವಿ ಬಳಿಕ ತಮಿಳು, ತೆಲುಗಿನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಾಯಿ ಪಲ್ಲವಿ ಕೊನೆಯದಾಗಿ ನಟಿಸಿರುವ ಸಿನಿಮಾ ತೆಲುಗಿನ 'ಶ್ಯಾಮ ಸಿಂಗ ರಾಯ್'. ಈ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿಯ ಪಾತ್ರವನ್ನು ಸಿನಿಮಾ ಪ್ರೇಕ್ಷಕರು ಮೆಚ್ಚಿ ಕೊಂಡಿದ್ದಾರೆ.

ಈ ಚಿತ್ರದ ಬಳಿಕ ಸಾಯಿ ಪಲ್ಲವಿ ಯಾವ ಚಿತ್ರದ ಮೂಲಕ, ಯಾವ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಸಾಯಿ ಪಲ್ಲವಿ ಎಲ್ಲರಂತೆ ಅಲ್ಲ. ಆಕೆ ಎಲ್ಲರಿಗಿಂತಲೂ ಕೊಂಚ ಡಿಫ್ರೆಂಟ್. ಹಾಗಾಗಿ ಸಾಯಿ ಪಲ್ಲವಿ ಸಿನಿಮಾಗಳು ವಿಭಿನ್ನವಾಗಿ ಇರುತ್ತವೆ. ಅವರ ಪಾತ್ರಗಳು ಕೂಡ ವಿಭಿನ್ನವಾಗಿ ಇರುತ್ತವೆ.

ಸಾಯಿ ಪಲ್ಲವಿ ಬಗ್ಗೆ ಹೊಸದೊಂದು ಸುದ್ದಿ ಹಬ್ಬಿದೆ. ನಟಿ ಸಾಯಿ ಪಲ್ಲವಿ ಸದ್ಯ ಯಾವುದೇ ಸಿನಿಮಾಗಳನ್ನು ಒಪ್ಪುತ್ತಿಲ್ಲವಂತೆ. 'ಶ್ಯಾಮ್ ಸಿಂಗ ರಾಯ್' ಸಿನಿಮಾ ನಂತರ ಸಾಯಿ ಪಲ್ಲವಿ ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ. ಈ ಸುದ್ದಿ ನಟಿ ಸಾಯಿ ಪಲ್ಲವಿ ಸಿನಿಮಾ ಬಿಟ್ಟು ಬಿಟ್ಟಿದ್ದಾರೆ ಎನ್ನುವ ಗಾಸಿಪ್ ಹುಟ್ಟು ಹಾಕಿದೆ.

ಚಿತ್ರರಂಗ ತೊರೆದರೇ ಸಾಯಿ ಪಲ್ಲವಿ?

ಚಿತ್ರರಂಗ ತೊರೆದರೇ ಸಾಯಿ ಪಲ್ಲವಿ?

ನಟಿ ಸಾಯಿ ಪಲ್ಲವಿ ಸದ್ಯ ಯಾವುದೇ ಸಿನಿಮಾಕ್ಕೆ ಸಹಿ ಮಾಡುತ್ತಿಲ್ಲ ಎನ್ನುವ ಸುದ್ದಿ ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹಬ್ಬಿದೆ. ಇದಕ್ಕೆ ಕಾರಣ ಸ್ವತಃ ಸಾಯಿ ಪಲ್ಲವಿ. 'ಶ್ಯಾಮ ಸಿಂಗ ರಾಯ್' ಸಿನಿಮಾದ ಬಳಿಕ ಸಾಯಿ ಪಲ್ಲವಿ ಯಾವುದೆ ಸಿನಿಮಾ ಒಪ್ಪಿಕೊಳ್ಳುತ್ತಾ ಇಲ್ಲವಂತೆ. ಹಾಗಾಗಿ ಸಾಯಿ ಪಲ್ಲವಿ ಸಿನಿಮಾರಂಗವನ್ನು ತೊರೆಯುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ನಿಜವೇ ಆದರೆ ಆಕೆಯ ಅಭಿಮಾನಿಗಳಿಗೆ ಬೇರ ಆಗುವುದು ಖಚಿತ.

ಸಿನಿಮಾ ತಿರಸ್ಕರಿಸುತ್ತಿರುವ ನಟಿ!

ಸಿನಿಮಾ ತಿರಸ್ಕರಿಸುತ್ತಿರುವ ನಟಿ!

ನಟಿ ಸಾಯಿ ಪಲ್ಲವಿ ಹೇಳಿ, ಕೇಳಿ ಬೇಡಿಕೆ ಇರುವ ನಟಿ. ಅದರಲ್ಲೂ 'ಶ್ಯಾಮ ಸಿಂಗ ರಾಯ್' ಸಿನಿಮಾ ಹಿಟ್ ಆದ ಚಿತ್ರ. ಹಾಗಾಗಿ ಆಕೆಗೆ ಈ ಚಿತ್ರದ ಬಳಿಕ ಒಂದಷ್ಟು ಚಿತ್ರಗಳ ಆಫರ್ ಬಂದಿವೆಯಂತೆ. ಆದರೆ ಸಾಯಿ ಪಲ್ಲವಿ ಮಾತ್ರ ಸಿನಿಮಾಗಳಿಗೆ ಸಹಿ ಹಾಕದೆ. ಆ ಚಿತ್ರಗಳನ್ನು ತಿರಸ್ಕರಿಸಿದ್ದಾರಂತೆ. ಹಾಗಾಗಿ ಸಾಯಿ ಪಲ್ಲವಿ ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ ಎನ್ನುವ ಗುಸು ಗುಸು ಹಬ್ಬಿದೆ.

ಸಾಯಿ ಪಲ್ಲವಿ ಮೌನಕ್ಕೆ ಕಾರಣವೇನು?

ಸಾಯಿ ಪಲ್ಲವಿ ಮೌನಕ್ಕೆ ಕಾರಣವೇನು?

ನಟಿ ಸಾಯಿ ಯಾಕೆ ಸಿನಿಮಾಗಳನ್ನು ಒಪ್ಪುತ್ತಿಲ್ಲ ಎನ್ನುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಹಿಂದೆ ಆಕೆ ರಶ್ಮಿಕಾ ಮಂದಣ್ಣ ಮತ್ತು ಶರ್ವಾನಂದ್ ಅಭಿನಯದ 'ಆಡವಾಳ್ಳು ಮೀಕು ಜೋಹಾರ್ಲು' ಚಿತ್ರದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಯಾವುದೇ ಕಾರ್ಯಕ್ರಮ, ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಸಾಯಿ ಪಲ್ಲವಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲು ಮುಂದಾಗಿದ್ದಾರಾ? ಅಥವಾ ಆಕೆಯ ನೆಚ್ಚಿನ ಕಥೆಗಳು ಸಿಗುತ್ತಿಲ್ಲವಾ ಎನ್ನುವ ಗೊಂದಲ ಚಿತ್ರರಂಗದಲ್ಲಿ ಸೃಷ್ಟಿ ಆಗಿದೆ. ಇದಕ್ಕೆಲ್ಲಾ ನಟಿ ಸಾಯಿ ಪಲ್ಲವಿ ಉತ್ತರ ನೀಡಬೇಕು.

'ಪ್ರೇಮಂ' ಚಿತ್ರದಿಂದ ಜರ್ನಿ ಶುರು ಮಾಡಿದ ಸಾಯಿ ಪಲ್ಲವಿ!

'ಪ್ರೇಮಂ' ಚಿತ್ರದಿಂದ ಜರ್ನಿ ಶುರು ಮಾಡಿದ ಸಾಯಿ ಪಲ್ಲವಿ!

ನಟಿ ಸಾಯಿ ಪಲ್ಲವಿ ನಾಯಕಿಯಾಗಿ 'ಪ್ರೇಮಂ' ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದಾರೆ. ಬಳಿಕ ಸಾಯಿ ಪಲ್ಲವಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಸಾಕಷ್ಟು ಖ್ಯಾತಿ ಪಡೆದರು. ಸಾಯಿ ಪಲ್ಲವಿ ತಮ್ಮ ಡ್ಯಾನ್ಸ್‌ನಿಂದಲೇ ಹೆಚ್ಚು ಫೇಮಸ್. ತಮಿಳಿನಲ್ಲಿ ರೌಡಿ ಬೇಬಿ ಆದರೆ, ತೆಲುಗಿನಲ್ಲಿ ಫಿದಾ ಚಿತ್ರದ ಡ್ಯಾನ್ಸ್ ಮೂಲಕ ಗುರುತಿಸಿಕೊಂಡಿದ್ದಾರೆ. ಸದ್ಯ ಈಕೆ ಅಭಿನಯದ 'ವಿರಾಟ ಪರ್ವಂ' ಚಿತ್ರ ರಿಲೀಸ್ ಆಗಬೇಕಿದೆ. ಈ ಬಗ್ಗೆ ನಟಿ ಸಾಯಿ ಪಲ್ಲವಿ ಸ್ಪಷ್ಟನೆ ಕೊಡಬೇಕು ಅಥವಾ ಮುಂದಿನ ಚಿತ್ರವನ್ನು ಪ್ರಕಟ ಮಾಡಬೇಕು.

More from Filmibeat

English summary
Is Sai Pallavi Quitting The Film Industry, She Is Not Singing Any New Film Know About it
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X