For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಭಿಮಾನಿಗಳಿಗೆ ಬೇಸರದ ಸುದ್ದಿ: ನಟನೆಗೆ ಗುಡ್ ಬೈ ಹೇಳ್ತಾರಂತೆ ನಾಗಚೈತನ್ಯ ಪತ್ನಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ. ತೆಲುಗು ಚಿತ್ರರಂಗದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಸದ್ಯ ಸಮಂತಾ ಬಳಿ ಎರಡು ದೊಡ್ಡ ಸಿನಿಮಾಗಳಿವೆ. ಈ ಸಿನಿಮಾಗಳ ನಂತರ ಸಮಂತಾ ಅವರ ಹೊಸ ಸಿನಿಮಾದ ಬಗ್ಗೆ ತಿಳಿದು ಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದರು. ಆದರೆ ಸಮಂತಾ ಕಡೆಯಿಂದ ಶಾಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ.

  ಬಹುಬೇಡಿಕೆಯ ನಟಿ ಸಮಂತಾ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಸಮಂತಾ ನಟನೆಯನ್ನು ತ್ಯಜಿಸಲು ನಿರ್ಧಾರ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಮದುವೆ ಬಳಿಕವೂ ಹೆಚ್ಚು ಬೇಡಿಕೆ ಹೊಂದಿರುವ ನಟಿ ಸಮಂತಾ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಸಮಂತಾ ಅಭಿನಯ ಮಾಡುವುದಿಲ್ಲ ಎನ್ನುವ ಸುದ್ದಿ ಅಭಿಮಾನಿಗಳಿಗೆ ಆಘಾತವೊಂಟುಮಾಡಿದೆ. ಮುಂದೆ ಓದಿ..

  ನಟಿ ಸಮಂತಾ ಹಾಕಿದ ಸವಾಲು ಸ್ವೀಕರಿಸಿದ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣನಟಿ ಸಮಂತಾ ಹಾಕಿದ ಸವಾಲು ಸ್ವೀಕರಿಸಿದ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ

  ನಟನೆ ತ್ಯಜಿಸಿ ನಿರ್ಮಾಣದಲ್ಲಿ ಸಮಂತಾ ಬ್ಯುಸಿ?

  ನಟನೆ ತ್ಯಜಿಸಿ ನಿರ್ಮಾಣದಲ್ಲಿ ಸಮಂತಾ ಬ್ಯುಸಿ?

  ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ನಟನೆ ನಿಲ್ಲಿಸುತ್ತಾರಾ ಎನ್ನುವ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ. ಜೊತೆಗೆ ಸಮಂತಾ ಅಭಿನಯಕ್ಕೆ ಗುಡ್ ಬೈ ಹೇಳಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಅಂದ್ಹಾಗೆ ಸಮಂತಾ ನಟನೆಯಿಂದ ದೂರ ಇರುತ್ತಾರೆ, ಅದರೆ ಸಿನಿಮಾರಂಗದಲ್ಲಿಯೇ ಸಕ್ರೀಯರಾಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದರೆ ಸಮಂತಾ ನಿರ್ಮಾಣದ ಕಡೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರಂತೆ.

  ತಮ್ಮದೆ ನಿರ್ಮಾಣ ಸಂಸ್ಥೆ ಲಾಂಚ್ ಮಾಡುವ ಸಾಧ್ಯತೆ

  ತಮ್ಮದೆ ನಿರ್ಮಾಣ ಸಂಸ್ಥೆ ಲಾಂಚ್ ಮಾಡುವ ಸಾಧ್ಯತೆ

  ಈಗಾಗಲೆ ಅಕ್ಕಿನೇನಿ ಕುಂಟುಂಬ ಅನ್ನಪೂರ್ಣ ಬ್ಯಾನರ್ ಇದೆ. ಇದನ್ನೆ ಸಮಂತಾ ನೋಡಿಕೊಳ್ಳುತ್ತಾರಾ ಅಥವಾ ಹೊಸ ಬ್ಯಾನರ್ ಲಾಂಚ್ ಮಾಡುತ್ತಾರಾ ಎನ್ನುವುದು ಅಧಿಕೃತಾವಾಗಿಲ್ಲ. ಆದರೆ ಮೂಲಗಳ ಪ್ರಕಾರ ಸಮಂತಾ ಮತ್ತು ನಾಗಚೈತನ್ಯ ಹೊಸ ಬ್ಯಾನರ್ ಲಾಂಚ್ ಮಾಡುವ ಪ್ಲಾನ್ ಮಾಡಿದ್ದಾರಂತೆ. ಬಳಿಕ ಸಮಂತಾ ಸಂಪೂರ್ಣವಾಗಿ ನಿರ್ಮಾಣದ ಕಡೆ ಗಮನ ಹರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಸಮಂತಾ ಕಡೆಯಿಂದ ಸ್ಪಷ್ಟನೆ ಇಲ್ಲ

  ಸಮಂತಾ ಕಡೆಯಿಂದ ಸ್ಪಷ್ಟನೆ ಇಲ್ಲ

  ಮದುವೆ ನಂತರ ಸಮಂತಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮಿಳಿನ ಎರಡು ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಬಳಿಕ ಸಮಂತಾ ಮುಂದಿನ ಸಿನಿಮಾಗಳು ಅನೌನ್ಸ್ ಆಗಿಲ್ಲ. ಈ ಎರಡೂ ಸಿನಿಮಾಗಳು ಪೂರ್ಣಗೊಂಡ ಬಳಿಕ ಮತ್ತೆ ಬಣ್ಣ ಹಚ್ಚುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿಂದೆಯೂ ಸಮಂತಾ ಅಭಿನಯ ತ್ಯಜಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಸಮಂತಾ ಅದನ್ನು ತಳ್ಳಿ ಹಾಕಿದ್ದರು. ಇದೀಗ ಮತ್ತೆ ಸಮಂತಾ ನಟನೆ ಗುಡ್ ಬೈ ಹೇಳುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಮಂತಾ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.

  ಚಿತ್ರರಂಗದಲ್ಲಿ 10 ಪೂರೈಸಿದ ಸಮಂತಾ

  ಚಿತ್ರರಂಗದಲ್ಲಿ 10 ಪೂರೈಸಿದ ಸಮಂತಾ

  ಸಮಂತಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿವೆ. ಪತಿ ನಾಗಚೈತನ್ಯ ಜೊತೆ ಯೆ ಮಾಯಾ ಚೆಸವೆ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಸಮಂತಾ ದೊಡ್ಡ ನಟಿಯಾಗಿ ಗುರುತಿಸಿಸಿಕೊಂಡಿದ್ದಾರೆ. ಸಮಂತಾ ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜಾನು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿದೆ. ಸಮಂತಾ ಸದ್ಯ ತಮಿಳು ಸಿನಿಮಾಗಳ ಜೊತೆ ವೆಬ್ ಸೀರಿಸ್ ನಲ್ಲಿಯೂ ನಟಿಸುತ್ತಿದ್ದಾರೆ. ಆದರೆ ಸದ್ಯ ಹರಿದಾಡುತ್ತಿರುವ ಸುದ್ದಿ ನಿಜನಾ ಅಥವಾ ಗಾಳಿಸುದ್ದಿನಾ ಎನ್ನುವುದನ್ನು ಸಮಂತಾ ಅವರೇ ಸ್ಪಷ್ಟಪಡಿಸಬೇಕು.

  English summary
  Tollywood famous Actress Samantha Akkineni decide to quit Acting goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X