ಸದ್ಗುರು ಸಲಹೆ ಕೇಳಿ 2ನೇ ಮದುವೆಗೆ ಸಮಂತಾ ಸಿದ್ದ?

ಸೋಶಿಯಲ್ ಮೀಡಿಯಾದಲ್ಲಿ ನಿಂತ್ರು ಕುಂತ್ರು ಸಮಂತಾ ಹೆಸರು ಕೇಳಿಬರ್ತಿದೆ. ಸ್ಯಾಮ್ ಈ ಸಿನಿಮಾದಲ್ಲಿ ನಟಿಸ್ತಾರಂತೆ, ಆ ಸಿನಿಮಾದಲ್ಲಿ ನಟಿಸ್ತಾರಂತೆ. ಆಕೆಗೆ ಚರ್ಮದ ಸಮಸ್ಯೆ ಅಂತೆ. ಟ್ರೀಟ್‌ಮೆಂಟ್‌ಗಾಗಿ ಅಮೆರಿಕಾಗೆ ಹೋಗ್ತಿದ್ದಾರಂತೆ. ಹೀಗೆ ದಿನಕ್ಕೊಂದು ಸುದ್ದಿ ಕೇಳಿ ಬರ್ತಾನೇ ಇದೆ. ಇದೀಗ ಸಮಂತಾ 2ನೇ ಮದುವೆ ಬಗ್ಗೆ ವದಂತಿಗಳು ಹರಿದಾಡಲು ಶುರುವಾಗಿದೆ.

ನಾಗ ಚೈತನ್ಯಾಗೆ ಡೈವೋರ್ಸ್ ಕೊಟ್ಟ ಬೆನ್ನಲ್ಲೇ ಸಮಂತಾ 'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ಅಲ್ಲಿಂದ ಅದೃಷ್ಟ ಖುಲಾಯಿಸಿಬಿಡ್ತು. ಅದೊಂದು ಸಾಂಗ್‌ನಿಂದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಬಾಲಿವುಡ್‌ ನಟಿಯರನ್ನು ಹಿಂದಿಕ್ಕಿ ಸಮಂತಾ ಕ್ರೇಜ್ ಧಕ್ಕಿಸಿಕೊಂಡಿದ್ದಾರೆ. ಸದ್ಯ ಹಾಲಿವುಡ್‌ ಪ್ರಾಜೆಕ್ಟ್‌ನಲ್ಲೂ ಸಮಂತಾ ನಟಿಸ್ತಿದ್ದು, ಸಮಂತಾ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ವೀವ್ ಆಗಿ ಇರ್ತಿದ್ದ ಸ್ಯಾಮ್ ಇತ್ತೀಚೆಗೆ ಯಾಕೋ ಸೈಲೆಂಟ್ ಆಗ್ಬಿಟ್ಟಿದ್ದಾರೆ. ಇದಕ್ಕೆ ಏನೇನೊ ಕಲ್ಪಿಸಿಕೊಂಡು ಗಾಳಿಸುದ್ದಿಗಳನ್ನು ತೇಲಿ ಬಿಡಲಾಗ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಷ್ಟೆಲ್ಲಾ ಗಾಳಿಸುದ್ದಿ ಹರಿದಾಡುತ್ತಿದ್ದರೂ ಸಮಂತಾ ಮಾತ್ರ ಮೌನ ವಹಿಸಿದ್ದಾರೆ. ಆಕೆ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದರಿಂದ ಗಾಳಿಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ಕಟ್ಟಿದಂತಾಗಿದೆ.

 ಸದ್ಗುರು ಸಲಹೆಯಂತೆ 2ನೇ ಮದುವೆ?

ಸದ್ಗುರು ಸಲಹೆಯಂತೆ 2ನೇ ಮದುವೆ?

ಡೈವೋರ್ಸ್, ಟ್ರೋಲ್, ಸಿನಿಮಾ, ಫೋಟೊಶೂಟ್, ಸರ್ಜರಿ, ಪಾಲಿಟಿಕ್ಸ್‌ ಅಂತೆಲ್ಲಾ ಸಮಂತಾ ಹೆಸರನಲ್ಲಿ 10 ಹಲವು ವಿಚಾರಗಳು ಸದ್ದು ಮಾಡ್ತಾನೆ ಇದೆ. ಇದೀಗ ಸಮಂತಾ ಎರಡನೇ ಮದುವೆ ಆಗುತ್ತಾರೆ ಅನ್ನುವ ಹೊಸದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಆಧ್ಯಾತ್ಮ ಗುರು ಸದ್ಗುರು ಸಲಹೆಯಂತೆ ಸಮಂತಾ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ ಎಂದು ಯಾರೋ ಹೊಸ ಸುದ್ದಿ ತೇಲಿಬಿಟ್ಟಿದ್ದಾರೆ.

 ಸದ್ಗುರು ಹೇಳಿದವನ ಜೊತೆ 2ನೇ ಮದುವೆ?

ಸದ್ಗುರು ಹೇಳಿದವನ ಜೊತೆ 2ನೇ ಮದುವೆ?

ಸಮಂತಾ ಡೈವೋರ್ಸ್ ನಂತರ ಹೆಚ್ಚು ಸದ್ಗುರು ಆಶ್ರಮಕ್ಕೆ ಭೇಟಿ ನೀಡುತ್ತಿದ್ದು, ಅವರ ಪ್ರವಚನ ಕೇಳುತ್ತಾ ಮಾನಸಿಕ ಒತ್ತಡದಿಂದ ಹೊರ ಬಂದಿದ್ದಾರೆ. ಈಗ ಸದ್ಗುರು ಸಮಂತಾಗೆ ಉಪದೇಶ ಮಾಡಿದ್ದು, ಒಂಟಿಯಾಗಿ ಇರಬಾರದು ಸಂಗಾತಿಯನ್ನು ಹುಡುಕಿಕೊಳ್ಳಬೇಕು ಎಂದಿದ್ದಾರಂತೆ. ಒಬ್ಬ ಹುಡುಗನನ್ನು ಕೂಡ ಸದ್ಗುರು ಹುಡುಕಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ಸಮಂತಾ 2ನೇ ಮದುವೆ ಎನ್ನುವ ಗಾಳಿಸುದ್ದಿ ಹರಿದಾಡ್ತಿದೆ.

 ಗಾಳಿಸುದ್ದಿಗೆ ಬ್ರೇಕ್ ಹಾಕಿದ ಫ್ಯಾನ್ಸ್

ಗಾಳಿಸುದ್ದಿಗೆ ಬ್ರೇಕ್ ಹಾಕಿದ ಫ್ಯಾನ್ಸ್

ಸದ್ಯ ಕೇಳಿಬರ್ತಿರೋ ಸಮಂತಾ 2ನೇ ಮದುವೆ ವಿಚಾರದ ಬಗ್ಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಂಬುವ ರೀತಿ ಇದ್ಯಾ? ಸದ್ಗುರು ಸಮಂತಾಗೆ ಮದುವೆ ಯಾಕೆ ಮಾಡ್ತಾರೆ? ತಳಬುಡ ಗೊತ್ತಿಲ್ಲದೇ ಏನೇನೊ ಮಾತನಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಸಿನಿಮಾ ಬಿಟ್ಟರೆ ಆಕೆಗೆ ಬೇರೆ ಆಲೋಚನೆ ಇಲ್ಲ ಎನ್ನುತ್ತಿದ್ದಾರೆ.

 ಚರ್ಮ ಸಮಸ್ಯೆಗೆ ಅಮೆರಿಕಾದಲ್ಲಿ ಚಿಕಿತ್ಸೆ?

ಚರ್ಮ ಸಮಸ್ಯೆಗೆ ಅಮೆರಿಕಾದಲ್ಲಿ ಚಿಕಿತ್ಸೆ?

ಸಮಂತಾ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ವೀವ್ ಆಗಿ ಇಲ್ಲದೇ ಇರಲು ಕಾರಣ ಚರ್ಮದ ಸಮಸ್ಯೆ ಎನ್ನುವ ಗುಸುಗುಸು ಕೂಡ ಕೇಳಿ ಬಂದಿತ್ತು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಆಕೆ ಬಳಲುತ್ತಿದ್ದಾಳೆ. ಅದಕ್ಕಾಗಿಯೇ ಅಮೆರಿಕಾಗೆ ಹೋಗಿ ಚಿಕಿತ್ಸೆ ಪಡೆದು ಬರಲು ಆಕೆ ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆಯೂ ಖಚಿತ ಮಾಹಿತಿ ಸಿಕ್ಕಿಲ್ಲ. ಎಲ್ಲಾ ಬರೀ ಗಾಳಿಸುದ್ದಿ ಅಷ್ಟೇ. ಸ್ಯಾಮ್ ಬಗ್ಗೆ ಇಂತಹ ಸಾಕಷ್ಟು ಸುದ್ದಿಗಳು ಕೇಳಿ ಬರ್ತಾನೇ ಇದೆ.

More from Filmibeat

English summary
Is Samantha getting married again after divorce from Naga Chaitanya. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X