For Quick Alerts
  ALLOW NOTIFICATIONS  
  For Daily Alerts

  ಆ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಟು ನಿಂತ ಸಮಂತಾ?

  |

  ಸಮಂತಾ ರುತ್‌ಪ್ರಭ್ ಕುರಿತು ದಿನಕ್ಕೊಂದು ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇತ್ತೀಚೆಗೆ ಆಕೆ ಗರ್ಭಕೋಶವನ್ನೇ ತೆಗೆಸಿಕೊಂಡಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಆ ಬಗ್ಗೆ ಸ್ಯಾಮ್ ಮ್ಯಾನೇಜರ್ ಪ್ರತಿಕ್ರಿಯಿಸಿ ಅದೆಲ್ಲಾ ಸುಳ್ಳು, ವದಂತಿಗಳನ್ನು ನಂಬಬೇಡಿ ಎಂದು ಹೇಳಿದ್ದರು. ಇದೀಗ ಸಮಂತಾ ಆರೋಗ್ಯದ ಬಗ್ಗೆ ಮತ್ತೊಮ್ಮೆ ಗಾಳಿಸುದ್ದಿ ಹರಿದಾಡ್ತಿದೆ. ಚಿಕಿತ್ಸೆಗಾಗಿ ಆಕೆ ಅಮೆರಿಕಾಗೆ ಹೊರಟು ನಿಂತಿದ್ದಾರೆ ಎನ್ನಲಾಗ್ತಿದೆ.

  ಡೈವೋರ್ಸ್ ನಂತರ ಸಮಂತಾ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತೆಲುಗು ಮಾತ್ರವಲ್ಲದೇ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲೂ ಕೆಲಸ ಮಾಡ್ತಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರ್ತಿದ್ದ ಸ್ಯಾಮ್ ಇದ್ದಕ್ಕಿದಂತೆ ಸೈಲೆಂಟ್ ಆಗ್ಬಿಟ್ಟಿದ್ದಾರೆ.

  ಇದೇ ಕಾರಣಕ್ಕೆ ಏನೇನೊ ಗಾಳಿಸುದ್ದಿ ಹರಿದಾಡಲು ಶುರುವಾಗಿದೆ. ಸದ್ಯ 'ಯಶೋಧ' ಹಾಗೂ 'ಶಾಕುಂತಲಂ' ಎನ್ನುವ 2 ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ವಿಜಯ್ ದೇವರಕೊಂಡ ಜೋಡಿಯಾಗಿ 'ಖುಷಿ' ಚಿತ್ರದಲ್ಲೂ ಚೆನ್ನೈ ಚೆಲುವೆ ಬಣ್ಣ ಹಚ್ಚಿದ್ದಾರೆ.

  ಫಿಲ್ಮ್‌ನಗರ್‌ನಲ್ಲಿ ಚಕ್ಕರ್ ಹೊಡೀತಿರುವ ಸುದ್ದಿ ಪ್ರಕಾರ ಸಮಂತಾ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿಲ್ಲವಂತೆ. ಬದಲಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಿದೆಯಂತೆ. ಅದಕ್ಕಾಗಿಯೇ ಅಮೆರಿಕಾಗೆ ಹೋಗಿ ಚಿಕಿತ್ಸೆ ಪಡೆದು ಬರಲು ಆಕೆ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

  ಅಮೆರಿಕಾಗೆ ಹೋಗಿ ಹೈಪ್ರೊಫೈಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಬರುತ್ತಾರೆ ಅನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಯಾವಾಗ ಫಾರಿನ್ ಫ್ಲೈಟ್ ಏರ್ತಾರೆ? ಎಲ್ಲಿ ಚಿಕಿತ್ಸೆ ಪಡೀತಾರೆ? ಯಾವಾಗ ವಾಪಸ್ ಬರ್ತಾರೆ? ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

  ಈ ಹಿಂದೆ ಸಮಂತಾ ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ದರು ಅನ್ನುವ ಮಾತುಗಳು ಕೇಳಿಬಂದಿತ್ತು. ಈಗ ಯಾವ ಚಿಕಿತ್ಸೆ ಪಡೆಯಲಿದ್ದಾರೆ ಎಂದು ನೆಟ್ಟಿಗರು ಯೋಚಿಸ್ತಿದ್ದಾರೆ. ಮತ್ತೆ ಕೆಲವರ ಪ್ರಕಾರ ಈಗಾಗಲೇ ಸಮಂತಾ ಚಿಕಿತ್ಸೆ ಪಡೆದಿದ್ದು, ವಿಶ್ರಾಂತಿ ಪಡೀತಿದ್ದಾರೆ. ಅದೇ ಕಾರಣಕ್ಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ.

  Is samantha ruth prabhu Planning To Go To america for skin treatment

  ಸಮಂತಾ ಖುದ್ದು ಮಾತನಾಡುವವರೆಗೂ ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗುವುದಿಲ್ಲ. ಇನ್ನು ಸೌತ್ ಸಿನಿದುನಿಯಾದಲ್ಲಿ ಸಮಂತಾ ಹವಾ ಜೋರಾಗಿದೆ. ಜನಪ್ರಿಯತೆ ವಿಚಾರದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. 'ಅರೇಂಜ್‌ಮೆಂಟ್ಸ್ ಆಫ್ ಲವ್' ಅನ್ನುವ ಮತ್ತೊಂದು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

  English summary
  Is samantha ruth prabhu Planning To Go To america for skin treatment. Know More.
  Sunday, September 18, 2022, 21:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X