ಧನುಷ್- ಐಶ್ವರ್ಯ ದಾಂಪತ್ಯಕ್ಕೆ ಹುಳಿ ಹಿಂಡಿದ್ದು ಗಾಯಕಿ ಸುಚಿತ್ರಾ ವಿವಾದ!

ಗಾಯಕಿ ಸುಚಿತ್ರಾ ಕಾರ್ತಿಕ್‌ ಹೆಸರು ನಿಮಗೆಲ್ಲಾ ನೆನಪಿರಬೇಕು. ಇಲ್ಲವಾದರೆ ಒಮ್ಮೆ 2017ನ್ನು ನೆನಪಿಸಿ ಕೊಳ್ಳಿ. 2017ರ ಫೆಬ್ರವರಿಯಲ್ಲಿ ಇದ್ದಕ್ಕಿದ್ದ ಹಾಗೆ ತಮಿಳು ಚಿತ್ರ ರಂಗದಲ್ಲಿ ದೊಡ್ಡ ಬಿರುಗಾಳಿ ಸೃಷ್ಟಿ ಆಗಿತ್ತು. ಸ್ಟಾರ್‌ ನಟ, ನಟಿಯರ ಹೆಸರು ದೊಡ್ಡ ವಿವಾದದಲ್ಲಿ ಸಿಲುಕಿ ಹಾಕಿ ಕೊಂಡಿದ್ದವು.

ನಟ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್‌ನಲ್ಲಿ ಇಬ್ಬರೂ ಬೇರೆಯಾಗುತ್ತಿರುವ ವಿಷಯವನ್ನು ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆಯಾಗುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಜೊತೆಯಾಗಿ ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ.

ಆದರೆ, ದಿಢೀರನೇ ಈ ನಿರ್ಧಾರಕ್ಕೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಸಹಜವಾಗಿಯೇ ಈ ವಿಚ್ಛೇದನ ಸುದ್ದಿ ಶಾಕಿಂಗ್ ಆಗಿದೆ. ಆದರೆ ಈಗ ಇವರ ಈ ವಿಚ್ಛೇದನ ವಿಚಾರಕ್ಕೆ ಗಾಯಕಿ ಸುಚಿತ್ರಾ ಹೆಸರು ಸೇರಿ ಕೊಂಡಿದೆ. ಅಂದು ಸುಚಿತ್ರಾ ಅವರು ಧನುಷ್ ವಿರುದ್ಧ ಮಾಡಿದ ಆರೋಪಗಳೇ ಇಂದಿನ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ.

ಚಿತ್ರರಂಗದ ಹಲವರ ವಿರುದ್ಧ ಆರೋಪ ಮಾಡಿದ್ದ ಗಾಯಕಿ!

ಚಿತ್ರರಂಗದ ಹಲವರ ವಿರುದ್ಧ ಆರೋಪ ಮಾಡಿದ್ದ ಗಾಯಕಿ!

ಧನುಷ್, ತ್ರಿಶಾ, ಅಮಲಾ ಪೌಲ್, ಸಂಗೀತ ನಿರ್ದೇಶಕ ಅನಿರುಧ್ ರವಿಚಂದ್ರನ್, ಶಂಕರ್ ಹೀಗೆ ಹಲವರ ಹೆಸರುಗಳನ್ನು ಗಾಯಕಿ ಸುಚಿತ್ರಾ ಬಹಿರಂಗ ಪಡಿಸಿದರು. ಅದು ಕೂಡ ಸೆಕ್ಸ್ ಸ್ಕ್ಯಾಂಡಲ್ ವಿಚಾರದಲ್ಲಿ. ಕೆಲವು ನಟ, ನಟಿಯರ ಅಶ್ಲೀಲ ಫೋಟೊಗಳನ್ನು ಹರಿ ಬಿಡುವ ಮೂಲಕ ಅವರು ಉತ್ತಮರಲ್ಲ ಎನ್ನುವುದನ್ನು ಸುಚಿತ್ರಾ ಹೇಳಿ ಕೊಂಡಿದ್ದರು.

ಸುಚಿತ್ರಾ ಹೇಳಿಕೆ ಬಳಿಕ ಧನುಷ್ ದಾಂಪತ್ಯದಲ್ಲಿ ಬಿರುಕು!

ಸುಚಿತ್ರಾ ಹೇಳಿಕೆ ಬಳಿಕ ಧನುಷ್ ದಾಂಪತ್ಯದಲ್ಲಿ ಬಿರುಕು!

ಆದರೆ ಸುಚಿತ್ರಾ ಅವರು ಈ ರೀತಿಯ ವಿಚಾರಗಳನ್ನು ಹೊರ ಹಾಕಿದಾಗಿನಿಂದ ನಟ ಧನುಷ್ ಮತ್ತು ಪತ್ನಿ ಐಶ್ವರ್ಯ ನಡುವೆ ಸಣ್ಣದಾಗಿ ಬಿರುಕು ಉಂಟಾಗಿತ್ತು ಎನ್ನಲಾಗಿದೆ. ಅಲ್ಲಿಂದ ಇಬ್ಬರ ನಡುವೆ ಎಲ್ಲವೂ ಸರಿ ಇರಲಿಲ್ಲವಂತೆ. 2017 ರಿಂದಲೇ ಈ ದಂಪತಿಗಳ ನಡುವೆ ವೈಮನಸ್ಸು ಉಂಟಾಗಿದೆ ಎನ್ನಲಾಗಿದೆ. ಆದರೆ ಈಗ ಇಬ್ಬರು ದೂರ ಆಗಲೂ ನಿರ್ಧರಿಸಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಕಾಲಿವುಡ್‌ನಲ್ಲಿ ಗುಸು ಗುಸು ಕೇಳಿ ಬರುತ್ತಿದೆ.

ಧನುಷ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸುಚಿತ್ರಾ!

ಧನುಷ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಸುಚಿತ್ರಾ!

ಇದೆಲ್ಲವನ್ನೂ ಸುಚಿತ್ರಾ ಅವರು ಟ್ವಿಟ್ಟರ್‌ ಖಾತೆಯ ಮೂಲಕ ಹೊರ ಹಾಕಿದ್ದರು. ಇದೇ ವೇಳೆ ಧನುಷ್ ಮತ್ತು ಅನಿರುಧ್ ರವಿಚಂದ್ರನ್ ತನ್ನನ್ನು ಲೈಂಗಿಕವಾಗಿ ಬಳಸಿ ಕೊಂಡಿದ್ದಾರೆ. ಎಂದು ಆರೋಪ ಮಾಡಿದ್ದರು. ಬಳಿಕ ಸುಚಿತ್ರಾ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎನ್ನಲಾಯಿತು. ಜೊತೆಗೆ ಸುಚಿತ್ರಾ ಅವರ ಮಾನಸಿಕ ಸ್ಥಿತಿ ಸರಿ ಇಲ್ಲ ಎನ್ನಲಾಯಿತು. ನಂತರ ಸುಚಿತ್ರಾ ಅವರ ಸರಣಿ ಟ್ವೀಟ್ ಅಲ್ಲಿಗೆ ನಿಂತು ಹೋಯಿತು.

ಹೆಚ್ಚು ಸದ್ದು ಮಾಡಿತ್ತು ಅಮಲಾ ಪೌಲ್, ಧನುಷ್ ಲವ್ ಗಾಸಿಪ್!

ಹೆಚ್ಚು ಸದ್ದು ಮಾಡಿತ್ತು ಅಮಲಾ ಪೌಲ್, ಧನುಷ್ ಲವ್ ಗಾಸಿಪ್!

ಇನ್ನು ನಟ ಧನುಷ್ ಜೊತೆಗೆ ನಟಿ ಅಮಲಾ ಪೌಲ್ ಹೆಸರು ಕೂಡ ತಳುಕು ಹಾಕಿ ಕೊಂಡಿತ್ತು. ಅಮಲಾ ಪೌಲ್ ಮತ್ತು ಧನುಷ್ ಜೊತೆಗೆ ಲವ್ವ-ಡವ್ವಿ ಇದೆ ಎನ್ನುವುದು ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು. ಇದು ಎಲ್ಲಿ ತನಕ ಹೋಗಿತ್ತು ಎಂದರೆ. ನಟಿ ಅಮಲಾ ಪೌಲ್ ಮತ್ತು ನಿರ್ದೇಶಕ ವಿಜಯ್ ಇಬ್ಬರು ವಿಚ್ಛೇದನ ಪಡೆಯಲು ಧನುಷ್ ಕಾರಣ ಎನ್ನಲಾಗಿತ್ತು. ಇದರ ಜೊತೆಗೆ ಧನುಷ್ ಜೊತೆಗೆ ತ್ರಿಶಾ, ಶೃತಿ ಹಾಸನ್ ಹೆಸರು ಕೂಡ ಕೇಳಿ ಬಂದಿತ್ತು.

More from Filmibeat

English summary
Is Singer Suchitra Allegations On Dash Lead To Aishwarya Dhanush Divorce: Know More what Was The Allegations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X