ನಿತಿನ್ ಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕರಿಂದ ಟಬು ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?

2008ರಲ್ಲಿ ತೆರೆಗೆ ಬಂದ 'ಪಾಂಡುರಂಗಾಡು' ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ಬಾಲಿವುಡ್ ಬೆಡಗಿ ಟಬು ಮುಖ ಮಾಡಿರಲಿಲ್ಲ. ಹನ್ನೊಂದು ವರ್ಷಗಳ ಬಳಿಕ ತೆಲುಗು ಸಿನಿ ಅಂಗಳಕ್ಕೆ ನಟಿ ಟಬು ವಾಪಸ್ ಆಗಿದ್ದು ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಚಿತ್ರದಿಂದ.

ನಿಮಗೆಲ್ಲ ಗೊತ್ತಿರುವ ಹಾಗೆ, 'ಅಲಾ ವೈಕುಂಠಪುರಮುಲೋ' ಸೂಪರ್ ಡ್ಯೂಪರ್ ಹಿಟ್ ಆಗಿದೆ. ಹಾಗೇ, ನಟಿ ಟಬುಗೂ ಟಾಲಿವುಡ್ ನಲ್ಲಿ ಮತ್ತೆ ಬೇಡಿಕೆ ಕಂಡು ಬಂದಿದೆ.

ತೆಲುಗು ನಟ ನಿತಿನ್ ಅಭಿನಯದ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಆಫರ್ ನಟಿ ಟಬುಗೆ ಸಿಕ್ಕಿದೆ. ನಿತಿನ್ ಚಿತ್ರದಲ್ಲಿ ನಟಿಸಲು ಟಬು ದೊಡ್ಡ ಮೊತ್ತವನ್ನ ಸಂಭಾವನೆಯಾಗಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ ಎಂಬ ಅಂತೆ-ಕಂತೆ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಮುಂದೆ ಓದಿರಿ...

ನಟ ನಿತಿನ್ ಅಭಿನಯದ ಹೊಸ ಚಿತ್ರ ಯಾವುದು.?

ನಟ ನಿತಿನ್ ಅಭಿನಯದ ಹೊಸ ಚಿತ್ರ ಯಾವುದು.?

ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಭೀಷ್ಮ' ಸೂಪರ್ ಹಿಟ್ ಆಗಿದೆ. 'ಭೀಷ್ಮ' ಯಶಸ್ಸಿನ ಬೆನ್ನಲ್ಲೇ ಹೊಸ ಚಿತ್ರಕ್ಕೆ ನಿತಿನ್ ಚಾಲನೆ ಕೊಟ್ಟಿದ್ದಾರೆ. ಹಿಂದಿಯ 'ಅಂಧಾಧುನ್' ಚಿತ್ರದ ತೆಲುಗು ರೀಮೇಕ್ ನಲ್ಲಿ ನಿತಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಈಗಾಗಲೇ ನೆರವೇರಿದೆ.

'ಅಂಧಾಧುನ್'ನಲ್ಲಿ ಟಬು

'ಅಂಧಾಧುನ್'ನಲ್ಲಿ ಟಬು

'ಅಂಧಾಧುನ್' ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ ನಟಿಸಿದ್ದರು. ಇದೇ ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿ ಟಬು ಅಭಿನಯಿಸಿದ್ದರು. ರಾಧಿಕಾ ಆಪ್ಟೆ, ಅನಿಲ್ ಧವನ್ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿದ್ದ 'ಅಂಧಾಧುನ್' ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಇದೀಗ ಇದೇ ಸಿನಿಮಾ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ. ಆಯುಷ್ಮಾನ್ ಖುರಾನಾ ನಿರ್ವಹಿಸಿದ್ದ ಪಾತ್ರವನ್ನ ನಿತಿನ್ ನಿಭಾಯಿಸಲಿದ್ದಾರೆ.

1 ಕೋಟಿ ಸಂಭಾವನೆ ಕೇಳಿದ ಟಬು

1 ಕೋಟಿ ಸಂಭಾವನೆ ಕೇಳಿದ ಟಬು

ಹಿಂದಿಯಲ್ಲಿ ಟಬು ಮಾಡಿದ್ದ ಪಾತ್ರವನ್ನೇ ತೆಲುಗಿನಲ್ಲೂ ನಿಭಾಯಿಸುವ ಆಫರ್ ನ ನಿರ್ಮಾಪಕರು ಟಬು ಮುಂದಿಟ್ಟಿದ್ದಾರೆ. ಆದ್ರೆ, ಅದಕ್ಕೆ ದೊಡ್ಡ ಸಂಭಾವನೆಯನ್ನ ಟಬು ಕೇಳುತ್ತಿದ್ದಾರಂತೆ. 'ಅಂಧಾಧುನ್' ತೆಲುಗು ವರ್ಷನ್ ನಲ್ಲಿ ನಟಿಸಲು ಬರೋಬ್ಬರಿ 1 ಕೋಟಿ ರೂಪಾಯಿಯನ್ನ ಸಂಭಾವನೆಯಾಗಿ ನೀಡುವಂತೆ ನಟಿ ಟಬು ನಿರ್ಮಾಪಕರ ಬಳಿ ಕೇಳಿದ್ದಾರಂತೆ.

ಹೆಚ್ಚು ಸಂಭಾವನೆ ಪಡೆದಿದ್ದ ಟಬು

ಹೆಚ್ಚು ಸಂಭಾವನೆ ಪಡೆದಿದ್ದ ಟಬು

'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ನಟಿಸಲು ನಟಿ ಟಬು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಈ ಹಿಂದೆ ಸುದ್ದಿ ಆಗಿತ್ತು. ಇದೀಗ ನಿತಿನ್ ಜೊತೆಗೆ ನಟಿಸಲು ಟಬು 1 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಗ್ರೀನ್ ಸಿಗ್ನಲ್ ಕೊಡುತ್ತಾರಾ ಟಬು.?

ಗ್ರೀನ್ ಸಿಗ್ನಲ್ ಕೊಡುತ್ತಾರಾ ಟಬು.?

ಹಾಗ್ನೋಡಿದ್ರೆ, ನಟಿ ಟಬು ಹುಟ್ಟಿ ಬೆಳೆದಿದ್ದೆಲ್ಲ ಹೈದರಾಬಾದ್ ನಲ್ಲಿ. ಬಣ್ಣದ ಬದುಕಿಗೆ ಕಾಲಿಟ್ಟ ಟಬು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಎರಡು ಚಿತ್ರರಂಗಗಳಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಸದ್ಯ ಹಿಂದಿಯ 'ಭೂಲ್ ಭುಲೈಯಾ-2' ಚಿತ್ರದಲ್ಲಿ ಟಬು ಬಿಜಿಯಾಗಿದ್ದಾರೆ. ಈ ನಡುವೆ 'ಅಂಧಾಧುನ್' ತೆಲುಗು ರೀಮೇಕ್ ನಲ್ಲಿ ನಟಿಸಲು ಟಬು ಗ್ರೀನ್ ಸಿಗ್ನಲ್ ಕೊಡುತ್ತಾರಾ.? ನೋಡೋಣ.

More from Filmibeat

English summary
Is Tabu quoting Rs.1 crore for Nithin Film.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X