ರಹಸ್ಯವಾಗಿ ನಡೆಯಿತಾ ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ನಿಶ್ಚಿತಾರ್ಥ?

ಕೊರೊನಾ ಲಾಕ್ ಡೌನ್ ನಲ್ಲಿ ತೆಲುಗು ನಟ ಮನೆಘಾ ಸ್ಟಾರ್ ಚಿರಂಜೀವಿ ಕುಟುಂಬದಿಂದ ಸಂತಸದ ಸುದ್ದಿಯೊಂದು ಕೇಳಿ ಬರುತ್ತಿದೆ. ಚಿರಂಜೀವಿ ತಮ್ಮ ನಾಗಬಾಬು ಪುತ್ರಿ, ನಟಿ ನಿಹಾರಿಕಾ ನಿಶ್ಚಿತಾರ್ಥ ಸಮಾರಂಭವನ್ನು ಕುಟುಂಬದವರು ರಹಸ್ಯವಾಗಿ ಮಾಡಿ ಮುಗಿಸಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ.

Recommended Video

ಶ್ರುತಿ ಹಾಸನ್ ಬೇಡಿಕೆ ಕೇಳಿ ಬೆಚ್ಚಿಬಿದ್ದ ನಿರ್ಮಾಪಕ | Shruthi Hassan

ನಿಹಾರಿಕಾ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿತ್ತು. ನಿಹಾರಿಕಾ ಹೆಸರು ಕೆಲವು ನಟರ ಜೊತೆ ಥಳುಕು ಹಾಕಿಕೊಂಡಿತ್ತು. ನಟ ನಾಗ ಶೌರ್ಯ ಜೊತೆ ನಿಹಾರಿಕಾ ಮದುವೆ ನಡೆಯುತ್ತಿದೆ ಎನ್ನುವ ಸುದ್ದಿ ವರ್ಷದಿಂದ ಕೇಳಿ ಬರುತ್ತಿತ್ತು. ನಾಗ ಶೌರ್ಯ ಮತ್ತು ನಿಹಾರಿಕಾ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ ನಂತರ ಇಬ್ಬರು ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬಂದಿತ್ತು.

Is Telugu Actress Niharika Konidela Got Engaged With Businessman

ಇತ್ತೀಚಿಗೆ ನಿಹಾರಿಕಾ ಟಾಲಿವುಡ್ ನಟ ಪ್ರಭಾಸ್ ಅವರನ್ನು ಮದುವೆ ಆಗಲಿದ್ದಾರೆ, ಪ್ರಭಾಸ್ ಕುಟುಂಬದ ಜೊತೆ ಈಗಾಗಲೆ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಸಹ ಕೇಳಿ ಬಂದಿತ್ತು. ಆದರೆ ಇತ್ತೀಚಿಗೆ ನಿಹಾರಿಕಾ ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದರು.

ಆದರೀಗ ಉದ್ಯಮಿ ಜೊತೆ ನಿಹಾರಿಕಾ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ತೀರಾ ಖಾಸಗಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮಾತ್ರ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥ ಸಮಾರಂಭದ ಯಾವುದೆ ಫೋಟೋಗಳನ್ನು ಲೀಕ್ ಮಾಡದಂತೆ ಕಟ್ಟುನಿಟ್ಟು ಮಾಡಲಾಗಿತ್ತಂತೆ.

ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ನಾಗಬಾಬು ಕುಟುಂಬಕ್ಕೆ ಆಪ್ತರಾಗಿರುವ ಉದ್ಯಮಿ ಪುತ್ರ ಎನ್ನುವುದು ಮಾತ್ರ ಗೊತ್ತಾಗಿದೆ. ಆದರೆ ಯಾರು ಎನ್ನುವ ಮಾಹಿತಿ ಬಹಿರಂಗವಾಗಿಲ್ಲ. ಇತ್ತೀಚಿಗೆ ನಿಹಾರಿಕಾ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ನಿಹಾರಿಕಾ ಪೋಸ್ಟ್ ನಿಶ್ಚಿತಾರ್ಥದ ಸುಳಿವನ್ನು ಬಿಟ್ಟುಕೊಟ್ಟಿತ್ತು. ಅಲ್ಲದೆ ನೆಟ್ಟಿಗರು ಶುಭಹಾರೈಸಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಎಂಗೇಜ್ ಆಗಿರುವ ಸುದ್ದಿ ವೈರಲ್ ಆಗಿದೆ. ಇದು ನಿಜನಾ ಎನ್ನುವ ಬಗ್ಗೆ ಕುಟುಂಬದವರು ಅಧಿಕೃತ ಮಾಹಿತಿ ಬಹಿರಂಗ ಪಡಿಸಬೇಕಿದೆ.

More from Filmibeat

English summary
Telugu Actress Niharika Konidela got engaged with busiinessman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X