'ರಾಮಾಯಣ'ಕ್ಕಾಗಿ ದೈವಶಕ್ತಿಯ ಮೊರೆ ಹೋದ್ರಾ ಯಶ್? ಹೀಗೊಂದು ಹೊಸ ಸುದ್ದಿ

ನಮಿತ್ ಮಲ್ಹೋತ್ರಾ ಹಾಗೂ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಅಧಿಕೃತವಾಗಿ ಸಿನಿಮಾ ಇನ್ನು ಘೋಷಣೆ ಆಗಿಲ್ಲ. ಆದರೆ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ ಎಂದು ವರದಿಯಾಗಿದೆ. ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ರಾಮಾಯಣ ಕಾವ್ಯ ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು, ಧಾರಾವಾಹಿಗಳು, ನಾಟಕಗಳು ಬಂದಿವೆ. ಆದರೆ ಮತ್ತೆ ಮತ್ತೆ ಆ ಅದ್ಭುತ ಕಾವ್ಯ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಅದೇ ಕಥೆಯನ್ನೇ ಆಧರಿಸಿ ಕಳೆದ ವರ್ಷ 'ಆದಿಪುರುಷ್' ಸಿನಿಮಾ ಕೂಡ ಮೂಡಿ ಬಂದಿತ್ತು. ನಿತೇಶ್ ತಿವಾರಿ ನಿರ್ದೇಶನದಲ್ಲಿ ಈ ಪೌರಾಣಿಕ ದೃಶ್ಯಕಾವ್ಯ ತೆರೆಗೆ ಬರಲಿದೆ.

Is This the title of Ranbir kapoor Yash sai pallavi s Ramayana

ಎರಡು ಭಾಗಗಳಾಗಿ 'ರಾಮಾಯಣ' ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೀತಿದೆ. 835 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡುವ ಮಾತುಗಳು ಕೇಳಿಬರ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರವನ್ನು ನಿರ್ಮಿಸುವ ಜೊತೆಗೆ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ.

ದಶರಥನಾಗಿ ಅರುಣ್ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್, ಕೈಕೇಯಿ ಆಗಿ ಲಾರಾದತ್ತ, ವಿಭಿಷಣ ಆಗಿ ವಿಜಯ್ ಸೇತುಪತಿ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಾರೆ ಎನ್ನುವ ಚರ್ಚೆ ಬಾಲಿವುಡ್‌ನಲ್ಲಿ ನಡೀತಿದೆ. ಸೆಟ್‌ಗಳನ್ನು ನಿರ್ಮಾಸಿ ಈಗಾಗಲೇ ಚಿತ್ರೀಕರಣ ಕೂಡ ಆರಂಭಿಸಿರುವುದಾಗಿ ಹೇಳಲಾಗುತ್ತಿದೆ. ಇದೆಲ್ಲರ ನಡುವೆ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ಇದೇ ಕಾರಣಕ್ಕೆ ಸಿನಿಮಾ ಚಿತ್ರೀಕರಣ ಕೂಡ ನಿಲ್ಲಿಸಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ಇತ್ತೀಚೆಗೆ ಅಲ್ಲು ಮಂಟೆನಾ ಮೀಡಿಯಾ ವೆಂಚರ್ಸ್ ಎಲ್ ಎಲ್ ಪಿ ಸಂಸ್ಥೆ ರಾಮಾಯಣ ಚಿತ್ರತಂಡಕ್ಕೆ ನೋಟಿಸ್ ಕಳುಹಿಸಿತ್ತು. ಅದರಂತೆ 'ರಾಮಾಯಣಂ' ನಿರ್ಮಾಪಕರು ಈ ಕಂಪನಿಯೊಂದಿಗಿನ ಒಪ್ಪಂದದ ಪ್ರಕಾರ ಕೆಲವು ಸ್ಕ್ರಿಪ್ಟ್ ಹಕ್ಕುಗಳನ್ನು ಖರೀದಿಸಿದ್ದಾರೆ. ಪ್ರಕ್ರಿಯೆ ಪೂರ್ಣಗೊಂಡಿಲ್ಲ. ನಮಗೆ ಪಾವತಿಸಬೇಕಾದ ಮೊತ್ತ ಪಾವತಿಸಿಲ್ಲ ಎಂದು ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ಬಂದ ಬಳಿಕ ಕೂಡ ಒಂದಷ್ಟು ಚಿತ್ರೀಕರಣ ನಡೆದಿತ್ತು. ಆದರೆ ಈಗ ನಿಂತು ಹೋಗಿದೆ ಎನ್ನಲಾಗ್ತಿದೆ.

Is This the title of Ranbir kapoor Yash sai pallavi s Ramayana

ನೋಟಿಸ್ ವಿಚಾರವಾಗಿ ಸಮಸ್ಯೆ ಬಗೆಹರಿಸಿಕೊಂಡು ಮುಂದುವರೆಯಲು 'ರಾಮಾಯಣ' ಚಿತ್ರತಂಡ ನಿರ್ಧರಿಸಿದೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಸಿನಿಮಾ ಟೈಟಲ್ ಏನು? ಎನ್ನುವ ಬಗ್ಗೆಯೂ ಗುಸುಗುಸು ಕೇಳಿಬರ್ತಿದೆ. ರಾಮಾಯಣ ಕಾವ್ಯವನ್ನು ಆಧರಿಸಿ ಸಿನಿಮಾ ಮಾಡಿದರೂ ಬೇರೆ ಟೈಟಲ್ ಫಿಕ್ಸ್ ಆಗುತ್ತದೆ ಎನ್ನಲಾಗ್ತಿದೆ. ಪ್ರಭಾಸ್ ನಟನೆಯ ಚಿತ್ರಕ್ಕೆ 'ಆದಿಪುರುಷ್' ಎನ್ನುವ ಟೈಟಲ್ ಫಿಕ್ಸ್ ಆಗಿತ್ತು. 'ಗಾಡ್‌ ಪವರ್' ಹೆಸರಿನಲ್ಲಿ ರಣ್‌ಬೀರ್- ಸಾಯಿ ಪಲ್ಲವಿ ನಟನೆಯ ಸಿನಿಮಾ ಮೂಡಿ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.

'ಗಾಡ್‌ ಪವರ್' ಎನ್ನುವ ಟೈಟಲ್ ಅಥವಾ ಸಬ್‌ಟೈಟಲ್ ಚಿತ್ರಕ್ಕೆ ಇರಲಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಮೊದಲ ಭಾಗದಲ್ಲಿ ಸೀತಾರಾಮ ಬಾಲ್ಯ, ಮದುವೆ ವನವಾಸದ ಆರಂಭ ಹಾಗೂ ಸೀತಾಪಹರಣದ ಕಥೆ ಇರುತ್ತದೆ. ಎರಡನೇ ಭಾಗದಲ್ಲಿ ಇನ್ನುಳಿದ ಕಥೆ ಹೇಳುತ್ತಾರೆ ಎನ್ನಲಾಗ್ತಿದೆ. ಈ ಸಿನಿಮಾಗಳ ಫಲಿತಾಂಶ ನೋಡಿಕೊಂಡು ಹನುಮಂತ ಪಾತ್ರ ಮುಂದುವರೆಸಿ ಮತ್ತೊಂದು ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

'ಗಾಡ್ ಪವರ್' ಎನ್ನುವುದು ನಿಜವಾಗಿಯೂ ಸಿನಿಮಾ ಟೈಟಲ್ಲಾ? ಅಥವಾ ಇದು ಬರೀ ವದಂತಿನಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಅಧಿಕೃತವಾಗಿ ಸಿನಿಮಾ ಘೋಷಣೆ ಆಗುವವರೆಗೂ ಯಾವುದನ್ನು ನಂಬಲು ಸಾಧ್ಯವಿಲ್ಲ. 2026ರಲ್ಲಿ ಸರಣಿಯ ಮೊದಲ ಸಿನಿಮಾ ಬರುತ್ತದೆ ಎನ್ನುವ ಊಹಾಪೋಹವೂ ಇದೆ.

More from Filmibeat

English summary
Nitesh Tiwari directional Ramayana based film gets interesting title
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X