Jyothi Rai: ಗಂಡನಿಂದ ದೂರಾದ್ರಾ ಜ್ಯೋತಿ ರೈ? ಯುವ ನಿರ್ದೇಶಕನ ಜೊತೆ ಲವ್ವಿ ಡವ್ವಿ?

ಕಿರುತೆರೆ ನಟಿ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಒಂದ್ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಮೆರೆದ ಚೆಲುವೆ ಇದೀಗ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದಾರೆ. ವಯಸ್ಸಾದರೂ ಹೊಸ ನಟಿಯರನ್ನು ನಾಚಿಸುವಂತೆ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುತ್ತಾರೆ. ಯೋಗ ನನ್ನ ಬ್ಯೂಟಿ ಸೀಕ್ರೆಟ್ ಎನ್ನುವ ಚೆಲುವೆ ಬಗ್ಗೆ ಹೊಸದೊಂದು ಸುದ್ದಿ ಹರಿದಾಡ್ತಿದೆ.

ಕೊಡಗಿನಲ್ಲಿ ಹುಟ್ಟಿ ಬೆಳೆದ ನಟಿ ಜ್ಯೋತಿ ರೈ ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಆಕೆ ವಿನು ಬಳಂಜ ಕಣ್ಣಿಗೆ ಬಿದ್ದು 'ಬಂದೇ ಬರತಾವ ಕಾಲ' ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು. 8ನೇ ತರಗತಿ ಓದುವಾಗಲೇ ಆಕೆ ಅಪ್ಪನನ್ನು ಕಳೆದುಕೊಂಡರು. ಬಳಿಕ ಪದವಿ ಮುಗಿಸಿ ಕೇವಲ 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು. ಆದರೂ ಬಣ್ಣದ ಲೋಕದಲ್ಲಿ ಮಿಂಚಿದರು.

Is Tv Actress Jyothi Rai dating Director Suku Purvaj/ suresh kumar

ಕನ್ನಡದಲ್ಲಿ 'ಜೋಗುಳ', 'ಕನ್ಯಾದಾನ', 'ಅನುರಾಗ ಸಂಗಮ, 'ಗೆಜ್ಜೆಪೂಜೆ', 'ಲವಲವಿಕೆ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಇನ್ನು 'ಸೀತಾರಾಮ ಕಲ್ಯಾಣ' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕನ್ಯಾದಾನಂ' ಧಾರಾವಾಹಿ ಮೂಲಕ ಆಕೆ ತೆಲುಗು ಕಿರುತೆರೆಗೆ ಪರಿಚಿತರಾಗಿದ್ದರು. 'ಗುಪ್ಪೆಡಂತ ಮನಸು' ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದುಕೊಂಡಿತ್ತು.

ಸದ್ಯ ನಟಿ ಜ್ಯೋತಿ ರೈ ವೈಯಕ್ತಿಕ ಜೀವನದ ಬಗ್ಗೆ ಟಾಲಿವುಡ್‌ನಲ್ಲಿ ಅಂಗಳದಲ್ಲಿ ಬಿಸಿಬಿಸಿ ಚರ್ಚೆ ಆಗುತ್ತದೆ. ತೆಲುಗಿನ ಯುವ ನಿರ್ದೇಶಕನ ಜೊತೆ ಆಕೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. 'ಶುಕ್ರ', 'ಮಾತರಾನಿ ಮೌನಮಿದಿ', 'ಎ ಮಾಸ್ಟರ್ ಪೀಸ್' ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಆತನ ಜೊತೆಗಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಗಿಂದಾಗ್ಗೆ ಶೇರ್ ಮಾಡುತ್ತಿರುತ್ತಾರೆ.

Is Tv Actress Jyothi Rai dating Director Suku Purvaj/ suresh kumar

ಜ್ಯೋತಿ ರೈ ಹಾಗೂ ಸುರೇಶ್ ಕುಮಾರ್ ಆತ್ಮೀಯವಾಗಿರುವ ಫೋಟೊಗಳಿಗೆ ನೆಟ್ಟಿಗರು ಕಾಮೆಂಟ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಕೆಲವರು ನೀವಿಬ್ಬರು ರಿಲೇಶನ್‌ಶಿಪ್‌ನಲ್ಲಿದ್ದೀರಾ? ಎಂದು ಕೇಳುತ್ತಿರುತ್ತಾರೆ. ಇತ್ತೀಚೆಗೆ ಇಬ್ಬರು ಜೊತೆಗಿರುವ ಫೋಟೊವೊಂದಕ್ಕೆ ತೆಲುಗು ಕಿರಿತೆರೆ ನಟಿ ಸುಜಾತ ಕ್ಷಯ ಮಾಡಿದ ಕಾಮೆಂಟ್ ಗಮನ ಸೆಳೆದಿತ್ತು. 'ಲವ್ ಲವ್ ಅಂಡ್ ಲವ್ ಯೂ ಬೋತ್.. ಕೀಪ್ ರಾಕಿಂಗ್ ಆಲ್ವೇಸ್' ಎಂದು ಕಾಮೆಂಟ್ ಹಾಕಿದ್ದರು.. ಅದಕ್ಕೆ 'ಥಾಂಕ್ಯೂ ಡಿಯರ್' ಎಂದು ಜ್ಯೋತಿ ರೈ ರಿಪ್ಲೈ ಮಾಡಿದ್ದರು. ಅದನ್ನು ನೋಡಿದ ಅಭಿಮಾನಿಗಳು ಇಬ್ಬರು ಡೇಟಿಂಗ್ ನಡೆಸುತ್ತಿರುವುದು ಕನ್ಫರ್ಮ್ ಎಂದು ಫಿಕ್ಸ್ ಆಗಿಬಿಟ್ಟಿದ್ದಾರೆ.

ಜ್ಯೋತಿ ರೈ 20ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು. ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಇದೇ ವಿಚಾರ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇನ್ನು ಜ್ಯೋತಿ ರೈ ಈಗ 'ಪ್ರೆಟಿ ಗರ್ಲ್' ಎನ್ನುವ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ. ಅದರ ಪೋಸ್ಟರ್ ಇತ್ತೀಚಿಗೆ ರಿಲೀಸ್ ಆಗಿತ್ತು. ಶೀಘ್ರದಲ್ಲೇ ಆ ವೆಬ್‌ ಸೀರಿಸ್ ರಿಲೀಸ್ ಆಗಲಿದೆ.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಚಿಟ್‌ಚಾಟ್ ಮಾಡಿದ್ದರು. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು ನೀವು ಸಿಂಗಲ್ಲಾ? ಎಂದು ಕೇಳಿದ್ದರು. ಅದಕ್ಕೆ ಸುಕುಪೂರ್ವಜ್ ಅವರನ್ನು ಕೇಳಿ ಎಂದಿದ್ದರಂತೆ. ಸುಕುಪುರ್ವಜ್ ನಿರ್ದೇಶನದ 'ಎ ಮಾಸ್ಟರ್ ಪೀಸ್' ಚಿತ್ರದಲ್ಲಿ ಜ್ಯೋತಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಜ್ಯೋತಿಪುರ್ವಜ್ ಹ್ಯಾಷ್‌ಟ್ಯಾಗ್ (#Jyothipurvaj)ಹಾಕುತ್ತಾ ಬರ್ತಿದ್ದಾರೆ. ಇದನ್ನೆಲ್ಲಾ ನೋಡಿ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇರೋದು ನಿಜ ಎಂದು ತೆಲುಗು ವೆಬ್‌ಸೈಟ್‌ಗಳಲ್ಲಿ ಸುದ್ದಿ ಆಗುತ್ತಿದೆ.

More from Filmibeat

English summary
Is Tv Actress Jyothi Rai dating Director Suku Purvaj/ suresh kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X