ವಿಜಯ್ ಕೊನೆಯ ಚಿತ್ರ ದಳಪತಿ 69 ಶ್ರೀಲೀಲಾ ನಟಿಸಿದ ಸಿನಿಮಾ ರೀಮೆಕ್?

ತಮಿಳು ನಟ ವಿಜಯ್ 'ತಮಿಳಗ ವೆಟ್ರಿ ಕಳಗಂ' ಪಕ್ಷ ಸ್ಥಾಪಿಸಿದ್ದಾರೆ. 2026ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆ ಕಡೆ ದಳಪತಿ ಮುಖ ಮಾಡಿದ್ದಾರೆ. ಅದಕ್ಕೂ ಮುನ್ನ ಒಂದೇ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.

ಇದು ವಿಜಯ್ ನಟನೆಯ 69ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ ದಳಪತಿ69 ಎನ್ನುವ ವರ್ಕಿಂಗ್ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಹೆಚ್. ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Is Vijay starrer Thalapathy 69 remake of this telugu film

ತಮ್ಮ ಮಾಸ್ ಆಕ್ಷನ್ ಸಿನಿಮಾಗಳಿಂದ ವಿಜಯ್ ತಮಿಳು ಸಿನಿರಸಿಕರ ಮನಗೆದ್ದಿದ್ದಾರೆ. ನೆಗೆಟಿವ್ ಟಾಕ್ ಬಂದರೂ ದಳಪತಿ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತವೆ. ತಮಿಳಿನಲ್ಲಿ ರಜನಿಕಾಂತ್ ಬಳಿಕ ಆ ಮಟ್ಟಿಗೆ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಟ ವಿಜಯ್. ಇನ್ನು ಸಕ್ರಿಯ ರಾಜಕೀಯಕ್ಕೆ ಧುಮುಕಿದ ಮೇಲೆ ವಿಜಯ್ ಸಿನಿಮಾಗಳಲ್ಲಿ ನಟಿಸೋದು ಅನುಮಾನ ಎನ್ನಲಾಗ್ತಿದೆ.

ಈಗಾಗಲೇ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಸಮಾವೇಶ ಯಶಸ್ವಿಯಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡುವ ಲೆಕ್ಕಾಚಾರ ಶುರುವಾಗಿದೆ. ಕೆಲವರಂತೂ ದಳಪತಿ ತಮಿಳುನಾಡಿದ ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಹಾಕುತ್ತಿದ್ದಾರೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ವಿಜಯ್ ನಟನೆಯ ಕೊನೆಯ ಸಿನಿಮಾ ತೆಲುಗು ಚಿತ್ರದ ರೀಮೆಕ್ ಎನ್ನುವ ಗುಸುಗುಸು ಶುರುವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ರೀಮೆಕ್ ಚಿತ್ರಗಳ ಹಾವಳಿ ಕಮ್ಮಿ ಆಗಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಶುರುವಾದ ಮೇಲೆ ಸ್ಟಾರ್ ನಟರು ರೀಮೆಕ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ವಿಜಯ್ ತಮ್ಮ ಕೊನೆಯ ಚಿತ್ರಕ್ಕೆ ತೆಲುಗು ಚಿತ್ರದ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಇದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

Is Vijay starrer Thalapathy 69 remake of this telugu film

ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಇದೇ ಚಿತ್ರದಿಂದ ಪ್ರೇರಣೆಗೊಂದು ದಳಪತಿ 69 ಸಿನಿಮಾ ಮಾಡ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅನಿಲ್ ರಾವಿಪುಡಿ ನಿರ್ದೇನದ ಆಕ್ಷನ್ ಥ್ರಿಲ್ಲರ್ 'ಭಗವಂತ್ ಕೇಸರಿ' ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಬಾಲಕೃಷ್ಣ ಮಗಳ ಪಾತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ ನಟಿಸಿದ್ದರು. ಇದೇ ಚಿತ್ರದ ರೀಮೆಕ್ ಅಥವಾ ಆ ಕಥೆಯಿಂದ ಪ್ರೇರಣಗೊಂಡು ದಳಪತಿ 69 ಸಿನಿಮಾ ಮೂಡಿಬರ್ತಿದೆ ಎನ್ನಲಾಗ್ತಿದೆ.

ದಳಪತಿ 69 ತೆಲುಗಿನ 'ಭಗವಂತ್ ಕೇಸರಿ' ರೀಮೇಕಾ? ಎಂದು ವಿಜಯ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕೊನೆಯ ಚಿತ್ರಕ್ಕೆ ಬೇರೆ ಕಥೆ ಸಿಗಲಿಲ್ಲವೇ? ಎನ್ನುತ್ತಿದ್ದಾರೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದಳಪತಿ ತಮ್ಮ ಕೊನೆಯ ಚಿತ್ರಕ್ಕೆ ರೀಮೆಕ್ ಕಥೆ ಆಯ್ಕೆ ಮಾಡಿಕೊಳ್ಳಲ್ಲ, ಇದು ಕೇವಲ ಅಂತೆ ಕಂತೆ ಸುದ್ದಿ ಅಷ್ಟೇ ಎನ್ನುವ ಮಾತುಗಳು ಕೇಳಿಬರ್ತಿದೆ.

ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ದಳಪತಿ 69 ಸಿನಿಮಾ ನಿರ್ಮಾಣ ಆಗ್ತಿದೆ ಎಂದು ಹೇಳಲಾಗ್ತಿದೆ. ಇದರಲ್ಲಿ ವಿಜಯ್ ಸಂಭಾವನೆ 250 ಕೋಟಿ ರೂ. ಎನ್ನುವ ಚರ್ಚೆ ನಡೀತಿದೆ. ವಿಜಯ್ ತಮ್ಮ ಕೊನೆ ಚಿತ್ರವನ್ನು ರಾಜಕೀಯ ಪ್ರವೇಶಕ್ಕೆ ವೇದಿಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ 'ಭಗವಂತ್ ಕೇಸರಿ' ಚಿತ್ರದಲ್ಲಿ ಅಂತಹ ಅಂಶಗಳು ಇದ್ಯಾ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಪ್ರಿಯಾಮಣಿ, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ನರೇನ್ ಸೇರಿದಂತೆ ದೊಡ್ಡ ತಾರಾಗಣ ದಳಪತಿ 69 ಚಿತ್ರದಲ್ಲಿದೆ. ಮುಂದಿನ ವರ್ಷ ಅಕ್ಟೋಬರ್ 16ಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ದಳಪತಿ 69 ಯಾವುದೇ ಚಿತ್ರದ ರೀಮೆಕ್ ಅಲ್ಲ ಎಂದು ವಿಜಯ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Thalapathy 69 film story Inspired by this Telugu hit movie?
Read more about: tamil vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X