ಬಾಲಿವುಡ್ ರಾಮಾಯಣ ಚಿತ್ರದಲ್ಲಿ ರಾವಣನಾಗಿ ಯಶ್ ಲುಕ್ ಟೆಸ್ಟ್ ಫೋಟೊ ಲೀಕ್ ಆಯ್ತಾ?
'KGF' ಸರಣಿ ಬಳಿಕ ಯಶ್ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬ ಸಂದರ್ಭದಲ್ಲೂ ರಾಕಿಂಗ್ ಸ್ಟಾರ್ ಸಿನಿಮಾ ಕೆಲಸದ ಮೇಲೆ ವಿದೇಶಕ್ಕೆ ಭೇಟಿ ನೀಡಿದ್ದರು. 'ಟಾಕ್ಸಿಕ್' ಬಿಟ್ಟರೆ ಮತ್ಯಾವುದೇ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
'ಟಾಕ್ಸಿಕ್' ನಂತರ ಯಶ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಅಧಿಕೃತ ಮಾಹಿತಿ ಇಲ್ಲ. ಆದರೆ ಬಾಲಿವುಡ್‌ನಲ್ಲಿ ರಾಮಾಯಣ ಕಾವ್ಯ ಆಧರಿಸಿ ನಿತೇಶ್ ತಿವಾರಿ ಒಂದು ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಆದರೆ ಶೀಘ್ರದಲ್ಲೇ ಚಿತ್ರೀಕರಣ ನಡೆಯುತ್ತದೆ ಎನ್ನಲಾಗ್ತಿದೆ.

ಬಹಳ ಹಿಂದೆಯೇ ನಿತೇಶ್ ತಿವಾರಿ ನಿರ್ದೇಶನದಲ್ಲಿ ಯಶ್ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ವದಂತಿ ಹರಡಿತ್ತು. ರಾಕಿಂಗ್ ಸ್ಟಾರ್ ಸದ್ದಿಲ್ಲದೇ ಲುಕ್ ಟೆಸ್ಟ್ ಸಹ ಮುಗಿಸಿದ್ದಾರೆ ಎನ್ನಲಾಗಿತ್ತು. ಆದರೆ ಯಶ್ ನಾನು ಕನ್ನಡ ಬಿಟ್ಟು ಬೇರೆ ಕಡೆ ಹೋಗಲ್ಲ ಎಂದಿದ್ದರು. ಹಾಗಾಗಿ ಈ ಚಿತ್ರದಲ್ಲಿ ನಟಿಸ್ತಾರೆ ಅನ್ನೋದು ನಿಜಾನಾ? ಸುಳ್ಳಾ? ಎಂದು ಅಭಿಮಾನಿಗಳು ಗೊಂದಲದಲ್ಲಿದ್ದಾರೆ.
ಸದ್ಯ ರಾಮಾಯಣ ಚಿತ್ರದಲ್ಲಿ ರಾವಣನ ಗೆಟಪ್‌ನಲ್ಲಿ ಯಶ್ ಲುಕ್ ಅಂತ ಹೇಳಿ ಫೋಟೊವೊಂದು ವೈರಲ್ ಆಗುತ್ತಿದೆ. ದಟ್ಟವಾದ ಗಡ್ಡ, ಮೀಸೆಯಲ್ಲೇ ವಿಭೂತಿಧಾರಿ ರಾವಣನನ್ನು ನೆನಪಿಸುವ ಯಶ್ ಅದರಲ್ಲಿ ಕಾಣಬಹುದು. ಆದರೆ ನಿಜಕ್ಕೂ ಇದು ಚಿತ್ರಕ್ಕಾಗಿ ಯಶ್ ಲುಕ್ ಟೆಸ್ಟ್ ಫೋಟೊ ಹೌದೋ ಅಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ಫೋಟೊಗಳನ್ನು ವೈರಲ್ ಮಾಡುತ್ತಿದ್ದಾರೆ.
ಮಾರ್ಚ್‌ನಲ್ಲಿ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಚಿತ್ರೀಕರಣ ನಡೆಯುತ್ತದೆ ಎನ್ನಲಾಗ್ತಿದೆ. ಮೊದಲು ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದು ಬಳಿಕ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನುವ ಚರ್ಚೆ ಬಾಲಿವುಡ್‌ನಲ್ಲಿ ಶುರುವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರಾಮಾಯಣ ಕಾವ್ಯವನ್ನು ತೆರೆಮೇಲೆ ತರಲು ಸಿದ್ಧತೆ ನಡೀತಿದೆ.

ಕಳೆದ ವರ್ಷ 'ಆದಿಪುರುಷ್' ಚಿತ್ರದಲ್ಲಿ ರಾಮಾಯಣ ಕಾವ್ಯವನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಆದರೆ ಸಿನಿಮಾ ಹಲವು ಕಾರಣಗಳಿಂದ ಟೀಕೆಗೆ ಗುರಿಯಾಯಿತು. ಭಾರೀ ವಿವಾದ ಸೃಷ್ಟಿಸಿತು. ಹಾಗಾಗಿ ಈ ಬಾರಿ ನಿತೇಶ್ ತಿವಾರಿ ಯಾವ ರೀತಿ ಕಥೆ ಹೇಳುತ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಮಾರ್ಚ್ 22ರಿಂದ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎನ್ನುವ ವದಂತಿ ಹರಡಿದೆ.
ಯಶ್ ಬಾಲಿವುಡ್ ಚಿತ್ರದಲ್ಲಿ ನಟಿಸುವ ಬಗ್ಗೆ ಅಭಿಮಾನಿಗಳಿಗೆ ಇನ್ನು ಗೊಂದಲವಿದೆ. ಯಾಕಂದ್ರೆ ಈಗಾಗಲೇ ರಾಕಿಂಗ್ ಸ್ಟಾರ್ ಬೇರೆ ಭಾಷೆಗೆ ಹೋಗಲ್ಲ, ಅವರನ್ನೇ ಇಲ್ಲಿಗೆ ಕರೆಸುತ್ತೇನೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಹಾಗಾಗಿ ನಿತೇಶ್ ತಿವಾರಿ ಸಾರಥ್ಯದ ರಾಮಾಯಣ ಚಿತ್ರಕ್ಕೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಅನುಮಾನ ಎನ್ನಲಾಗ್ತಿದೆ. ಹಾಗಾದರೆ ಲುಕ್ ಟೆಸ್ಟ್ ನಡೆದಿರುವುದು ಸುಳ್ಳಾ? ಎನ್ನುವ ಗೊಂದಲ ಕೆಲವರದ್ದು.
'ಟಾಕ್ಸಿಕ್' ವಿಚಾರ ಹೇಳುವುದಾದರೆ ಗೀತು ಮೋಹನ್ ದಾಸ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್, ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಏಪ್ರಿ 10ಕ್ಕೆ ಸಿನಿಮಾ ರಿಲೀಸ್ ಎಂದು ಈಗಾಗಲೇ ಘೋಷಿಸಿದ್ದಾರೆ.


Click it and Unblock the Notifications











