'KGF ಚಾಪ್ಟರ್ 2' ತೆಲುಗು ವರ್ಷನ್ ದಾಖಲೆ ಮೊತ್ತಕ್ಕೆ ಮಾರಾಟ?

Recommended Video

ತೆಲುಗು ನೆಲದಲ್ಲಿ ಕನ್ನಡದ ಯಾವ ಚಿತ್ರವೂ ಮಾಡಿರದ ದಾಖಲೆ ಮಾಡಿದ KGF 2 | KGF-2 | Rocking Star Yash

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ, ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾದಿಂದ ದೊಡ್ಡ ಬ್ರೇಕಿಂಗ್ ಸುದ್ದಿ ಕೇಳಿ ಬರುತ್ತಿದ್ದಂತೆ. ಇತ್ತೀಚಿಗಷ್ಟೆ ಬಾಲಿವುಡ್ ನಟಿ ರವೀನಾ ಡಂಟನ್ ಮತ್ತು ರಾವ್ ರಮೇಶ್ ಇಬ್ಬರು ಕೆಜಿಎಫ್-2 ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ.

ಇದರ ಬೆನ್ನಲ್ಲೆ ಈಗ ಮತ್ತೊಂದು ಭರ್ಜರಿ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಕೆಜಿಎಫ್-2 ಚಿತ್ರದ ತೆಲುಗು ವರ್ಷನ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಈಗಾಗಲೆ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಚಾಪ್ಟರ್-1 ಸಾಕಷ್ಟು ದಾಖಲೆಗಳನ್ನು ನಿರ್ಮಿಸಿತ್ತು. ಆದರೆ ಚಾಪ್ಟರ್-2 ಈ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಿ ಹೊಸ ದಾಖಲೆ ನಿರ್ಮಿಸುವಲ್ಲಿ ಯಾವುದೆ ಅನುಮಾನವಿಲ್ಲ.

 ತೆಲುಗು ವರ್ಷನ್ 40 ಕೋಟಿಗೆ ಮಾರಾಟ

ತೆಲುಗು ವರ್ಷನ್ 40 ಕೋಟಿಗೆ ಮಾರಾಟ

ಸದ್ಯ ಕೇಳಿಬರುತ್ತಿರುವ ಮಾಹಿತ ಪ್ರಕಾರ ತೆಲುಗು ವರ್ಷನ್ ಬರೊಬ್ಬರಿ 40 ಕೋಟಿಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಕೆಜಿಎಫ್-2 ತೆಲುಗು ವರ್ಷನ್ ಗೆ 30 ಕೋಟಿ ಆಫರ್ ಬಂದಿತ್ತಂತೆ. ಆದರೆ ನಿರ್ಮಾಪಕರು 40ಕೋಟಿಗೂ ಕಮ್ಮಿ ಸೇಲ್ ಮಾಡುದಿಲ್ಲ ಎಂದು ಪಟ್ಟು ಹಿಡಿದು 40 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 ದೊಡ್ಡ ಮೊತ್ತಕ್ಕೆ ಮಾರಾಟವಾದ ಕನ್ನಡದ ಮೊದಲ ಸಿನಿಮಾ

ದೊಡ್ಡ ಮೊತ್ತಕ್ಕೆ ಮಾರಾಟವಾದ ಕನ್ನಡದ ಮೊದಲ ಸಿನಿಮಾ

ಕನ್ನಡದ ಚಿತ್ರವೊಂದು ಇಷ್ಟು ದೊಡ್ಡ ಮೊತ್ತಕ್ಕೆ ಮರಾಟವಾಗಿರುವುದು ಇದೆ ಮೊದಲು. ಕನ್ನಡದ ಚಿತ್ರವೊಂದು ದಾಖಲೆಯ ಬೆಲೆಗೆ ಬೇಡಿಕೆ ಸೃಷ್ಟಿಕೊಂಡಿರುವುದು ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ಕಡೆ ಇರುವುದರಿಂದ ಕೆಜಿಎಫ್-2 ಬೇಡಿಕೆ ಗಗನಕ್ಕೇರಿದೆ.

 ರವೀನಾ ಟಂಡನ್, ಸಂಜಯ್ ದತ್

ರವೀನಾ ಟಂಡನ್, ಸಂಜಯ್ ದತ್

ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕೆಜಿಎಫ್-2 ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿದೆ. ಮೊದಲ ಭಾಗಕ್ಕಿಂತ ಚಿತ್ರದ ಎರಡನೆ ಭಾಗ ಮತ್ತಷ್ಟು ರೋಚಕವಾಗಿದೆ. ಸಂಜಯ್ ದತ್, ರವೀನಾ ಟಂಡನ್, ರಾವ್ ರಮೇಶ್ ಸೇರಿದಂತೆ ಪರಭಾಷೆಯ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರು ಕೆಜಿಎಫ್-2 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 ಯಾವಾಗ ಬಿಡುಗಡೆ?

ಯಾವಾಗ ಬಿಡುಗಡೆ?

ಕೆಜಿಎಫ್-2 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಉಸಿರು ಬಿಡಿಹಿಡಿದು ಕಾಯುತ್ತಿದ್ದಾರೆ. ಈ ಮೊದಲು ಚಿತ್ರವನ್ನು ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ತರುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದರೆ ಚಿತ್ರೀಕರಣ ತಡವಾದ ಕಾರಣ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Kannada Actor Yash starrer most Expected KGF-2 Telugu Version has been sold for 40 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X