ಕನ್ನಡದ 'ರಾಜಾಹುಲಿ'ಗಾಗಿ ಕಥೆ ಸಿದ್ಧಮಾಡಿದ್ದಾರಂತೆ ತೆಲುಗು ನಿರ್ದೇಶಕ.!

Recommended Video

ಯಶ್ ಪೂರಿ ಜಗನ್ನಾಥ್ ಸಿನಿಮಾದಲ್ಲಿ ಅಭಿನಯಿಸುವುದು ನಿಜಾನಾ? | FILMIBEAT KANNADA

'ಕೆಜಿಎಫ್' ಸಿನಿಮಾದಿಂದ ಯಶ್ ನ್ಯಾಷಿನಲ್ ಸ್ಟಾರ್ ಆಗಿದ್ದಾರೆ. ಭಾರತದ ದೊಡ್ಡ ದೊಡ್ಡ ನಿರ್ದೇಶಕರು ಅವರ ಜೊತೆಗೆ ಸಿನಿಮಾ ಮಾಡುವ ಆಸೆ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ರಾಕಿ ಬಾಯ್ ಜೊತೆ ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗಾಗಿ ಪೂರಿ ಜಗನ್ನಾಥ್ ಒಂದು ಕಥೆ ಮಾಡಿದ್ದರು. 'ಪೋಕರಿ' ಹಾಗೂ 'ಬಿಜಿನೆಸ್ ಮ್ಯಾನ್' ಚಿತ್ರಗಳ ಬಳಿಕ ಬರುತ್ತಿದ್ದ ಹ್ಯಾಟ್ರಿಕ್ ಸಿನಿಮಾ ಇದಾಗಿತ್ತು. ಆ ಸಿನಿಮಾಗೆ 'ಜನ ಗಣ ಮನ' ಎಂಬ ಶೀರ್ಷಿಕೆ ಇಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿತ್ತು. ಇಷ್ಟೆಲ್ಲ ಆದ ಮೇಲೆ ಆ ಸಿನಿಮಾ ನಿಂತಿದೆ.

ಮಹೇಶ್ ಬಾಬು ಬದಲು ಅದೇ ಕಥೆಗೆ ಯಶ್ ರನ್ನು ನಾಯಕರನ್ನಾಗಿ ಮಾಡುವ ಆಸೆಯಿಂದ ಮತ್ತೆ ಸ್ಯಾಂಡಲ್ ವುಡ್ ಕಡೆ ಪೂರಿ ಜಗನ್ನಾಥ್ ಮುಖ ಮಾಡಿದ್ದಾರೆ....

'ಜನ ಗಣ ಮನ' ಚಿತ್ರದಲ್ಲಿ ಯಶ್

'ಜನ ಗಣ ಮನ' ಚಿತ್ರದಲ್ಲಿ ಯಶ್

ಮಹೇಶ್ ಬಾಬು ಹಾಗೂ ಪೂರಿ ಜಗನ್ನಾಥ್ ಅವರ ಮೂರನೇ ಸಿನಮಾ ಎಂಬ ಕಾರಣಕ್ಕೆ 'ಜನ ಗಣ ಮನ' ಸಿನಿಮಾ ದೊಡ್ಡ ಸುದ್ದಿ ಮಾಡಿತ್ತು. ಆದರೆ, ಈ ಸಿನಿಮಾ ಈಗ ನಿಂತು ಹೋಗಿದೆ. ಯಾಕೆ ಎನ್ನುವ ಕಾರಣವನ್ನು ಇನ್ನು ಪೂರಿ ತಿಳಿಸಿಲ್ಲ. ಮಹೇಶ್ ಬಾಬು ಬಿಟ್ಟರೆ ಪೂರಿ ಜಗನ್ನಾಥ್ ಕಣ್ಣಿಗೆ ರಾಕಿಂಗ್ ಸ್ಟಾರ್ ಯಶ್ ಕಾಣಿಸಿದ್ದಾರೆ.

ಎರಡು ಬಾರಿ ಮಾತುಕತೆ ಆಗಿದೆ

ಎರಡು ಬಾರಿ ಮಾತುಕತೆ ಆಗಿದೆ

ಈಗಾಗಲೇ, ಬೆಂಗಳೂರಿಗೆ ಬಂದು ಎರಡು ಬಾರಿ ಯಶ್ ಜೊತೆಗೆ ಸಿನಿಮಾದ ಬಗ್ಗೆ ಪೂರಿ ಜಗನ್ನಾಥ್ ಚರ್ಚೆ ಮಾಡಿದ್ದಾರೆ. ಕಥೆಯನ್ನು ಯಶ್ ಗೆ ವಿವರಿಸಿದ್ದಾರೆ. ಆದರೆ, ಇನ್ನು ಸಿನಿಮಾ ಮಾಡುವ ಬಗ್ಗೆ ರಾಕಿ ಅಂತಿಮ ನಿರ್ಧಾರ ತಿಳಿಸಿಲ್ಲ. ಕಥೆ ಇಷ್ಟ ಆಗಿ, ಎಲ್ಲವೂ ಓಕೆ ಆದ್ರೆ, ಈ ಸಿನಿಮಾ ಆಗುತ್ತದೆ.

ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್ ಇಂಡಿಯಾ ಸಿನಿಮಾ

'ಜನ ಗಣ ಮನ' ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ನಿರ್ದೇಶಕ ಪೂರಿ ಜಗನ್ನಾಥ್ ಪ್ಲಾನ್ ಮಾಡಿದ್ದಾರೆ. 'ಕೆಜಿಎಫ್' ಚಿತ್ರದಿಂದ ದೇಶಾದ್ಯಂತ ಜನಪ್ರಿಯತೆ ಪಡೆದಿರುವ ಯಶ್ ಈ ಚಿತ್ರಕ್ಕೆ ಉತ್ತಮ ಆಯ್ಕೆ ಎಂದು ಅವರಿಗೆ ಅನಿಸಿದೆ. ದಕ್ಷಿಣ ಭಾರತದ ದೊಡ್ಡ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಹಣ ಹಾಕಲಿದೆ. ಕನ್ನಡ ಮತ್ತು ತೆಲುಗು ಚಿತ್ರೀಕರಣ ಮಾಡಿ, ಹಿಂದಿ ಮತ್ತು ತಮಿಳುಗೆ ಚಿತ್ರ ಡಬ್ ಆಗಲಿದೆ.

ಮತ್ತೆ ಕನ್ನಡ ನಟನ ಜೊತೆ ಪೂರಿ

ಮತ್ತೆ ಕನ್ನಡ ನಟನ ಜೊತೆ ಪೂರಿ

ಪುನೀತ್ ರಾಜ್ ಕುಮಾರ್ ಜೊತೆಗೆ 'ಅಪ್ಪು' ಶಿವರಾಜ್ ಕುಮಾರ್ ಜೊತೆಗೆ 'ಯುವರಾಜ' ಸಿನಿಮಾ ಮಾಡಿದ್ದ ಪೂರಿ ಜಗನ್ನಾಥ್ ವರ್ಷಗಳ ಹಿಂದೆ ಇಶಾನ್ ರನ್ನು ಲಾಂಚ್ ಮಾಡಿದ್ದರು. 'ರೋಗ್' ಚಿತ್ರ ನಿರ್ದೇಶನ ಮಾಡಿದ್ದ ಪೂರಿ ಈಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡುವ ನಿರ್ಧಾರ ಮಾಡಿದ್ದಾರೆ.

ಮುಂದಿನ ವರ್ಷ ಪ್ರಾರಂಭ ಆಗಬಹುದು

ಮುಂದಿನ ವರ್ಷ ಪ್ರಾರಂಭ ಆಗಬಹುದು

ಯಶ್ ಹಾಗೂ ಪೂರಿ ಜಗನ್ನಾಥ್ ನಡುವಿನ ಮಾತುಕತೆ ಯಶಸ್ವಿ ಆದರೂ, ಸಿನಿಮಾ ಈ ವರ್ಷ ಪ್ರಾರಂಭ ಆಗುವುದು ಅನುಮಾನ. ಸದ್ಯ, ಯಶ್ 'ಕೆಜಿಎಫ್ 2' ಸಿನಿಮಾದಲ್ಲಿ ತೊಡಗಿದ್ದಾರೆ. 'ಇಸ್ಮಾರ್ಟ್ ಶಂಕರ್' ಸಿನಿಮಾದ ಸಕ್ಸಸ್ ನಲ್ಲಿರುವ ಪೂರಿ ಜಗನ್ನಾಥ್ 'ಡಬಲ್ ಇಸ್ಮಾರ್ಟ್' ಸಿನಿಮಾ ಮಾಡುವ ಯೋಚನೆ ಮಾಡಿದ್ದಾರೆ. ಆ ಸಿನಿಮಾಗಳ ಬಳಿಕ ಈ ಚಿತ್ರ ಶುರು ಆಗಲಿದೆ.

More from Filmibeat

English summary
Is Kannada actor 'KGF' fame Yash will play lead role in director Puri Jagannadh's 'Jana Gana Mana' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X