For Quick Alerts
  ALLOW NOTIFICATIONS  
  For Daily Alerts

  'ಸರ್ಕಾರು ವಾರಿ ಪಾಟ' ಹಿಂದಿಯಲ್ಲಿ ರಿಲೀಸ್ ಆಗ್ತಿಲ್ಲ: ಅದಕ್ಕೆ ಕಾರಣ ರಾಜಮೌಳಿ?

  |

  ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು 'ಸಿನಿಮಾ ಸರ್ಕಾರು ವಾರಿ ಪಾಟ' ನಾಳೆ (ಮೇ 12) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಶೂಟಿಂಗ್ ಆರಂಭ ಆದಲ್ಲಿಂದ 'ಸರ್ಕಾರು ವಾರಿ ಪಾಟ' ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ ಟೀಸರ್, ಟ್ರೈಲರ್ ರಿಲೀಸ್ ಆದ್ಮೇಲಂತೂ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.

  ಈ ಮಧ್ಯೆ ಸೂಪರ್‌ಸ್ಟಾರ್ ಸಿನಿಮಾಗಳೆಲ್ಲಾ ಹಿಂದಿ ಭಾಷೆಗೆ ಡಬ್ ಆಗುತ್ತಿದ್ದು, 'ಸರ್ಕಾರು ವಾರಿ ಪಾಟ' ಮಾತ್ರ ರಿಲೀಸ್ ಆಗುತ್ತಿಲ್ಲ. ಈ ಬಗ್ಗೆ ಮಹೇಶ್ ಬಾಬು ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಅಷ್ಟಕ್ಕೂ 'ಸರ್ಕಾರು ವಾರಿ ಪಾಟ' ಸಿನಿಮಾ ಹಿಂದಿಗ್ಯಾಕೆ ಡಬ್ ಆಗುತ್ತಿಲ್ಲ? ಹಿಂದಿ ವಿತರಕರೇ ಬಂದು ಕೇಳಿದರೂ, ಯಾಕೆ ರೈಟ್ಸ್ ಕೊಟ್ಟಿಲ್ಲ? ಅನ್ನೋ ಗೊಂದಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಅದಕ್ಕೆ ಕಾರಣ ರಾಜಮೌಳಿ ಅಂತೆ.

  ಹಿಂದಿಯಲ್ಲಿ ರಿಲೀಸ್ ಆಗುತ್ತಿಲ್ಲ 'ಸರ್ಕಾರು ವಾರಿ ಪಾಟ'

  ಆರಂಭದಲ್ಲಿ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಹಿಂದಿ ಡಬ್ ಆಗಬೇಕು ಅಂತ ನಿರ್ಧಾರ ಮಾಡಲಾಗಿತ್ತು. ತೆಲುಗು ವರ್ಷನ್ ರಿಲೀಸ್ ಮಾಡುವಾಗಳೇ ಹಿಂದಿ ಅವತರಣಿಕೆಯನ್ನೂ ಬಿಡುಗಡೆ ಮಾಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ನಿರ್ಧಾರದಿಂದ ಹಿಂದೆ ಸರಿಯಾಗಿದೆ.

  ಮಹೇಶ್ ಬಾಬು ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಬಾಲಿವುಡ್ ವಿತರಕರು ತುದಿಗಾಲಲ್ಲಿ ನಿಂತಿದ್ದಾರೆ. ಒಂದು ಸಮಯದಲ್ಲಿ ಸಿನಿಮಾ ಕೆಲವು ಭಾಗವನ್ನು ಹಿಂದಿಗೆ ಡಬ್ ಕೂಡ ಮಾಡಲಾಗಿತ್ತಂತೆ. ಇದನ್ನು ಸಿನಿಮಾ ನಿರ್ಮಾಪಕರೂ ಕೂಡ ಪರಿಶೀಲನೆ ಮಾಡಿದ್ದರು. ಆದರೆ, ಹಿಂದಿ ವಿತರಕರು ಕೂಡ ಹಿಂದಿಯಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆ ಮಾಡಲು ಮುಂದೆ ಬಂದಿದ್ದರು. ದಿಢೀರನೇ ಈ ಪ್ಲ್ಯಾನ್‌ನಿಂದ ಹಿಂದೆ ಸರಿಯಲಾಗಿದೆ.

  ಹಿಂದಿ ಡಬ್ ಮಾಡದಿರಲು ಕಾರಣ ರಾಜಮೌಳಿ

  ಟಾಲಿವುಡ್ ಮೂಲಗಳ ಪ್ರಕಾರ, 'ಸರ್ಕಾರು ವಾರಿ ಪಾಟ' ಹಿಂದಿಯಲ್ಲಿ ರಿಲೀಸ್ ಆಗದೆ ಇರಲು ಕಾರಣ ಎಸ್‌ ಎಸ್‌ ರಾಜಮೌಳಿ ಅಂತೆ. ಹೌದು, ಸ್ವತ: ರಾಜಮೌಳಿ 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡುವುದನ್ನು ನಿಲ್ಲಿಸುವಂತೆ ಮಹೇಶ್ ಬಾಬುಗೆ ಹೇಳಿದ್ದರಂತೆ. ಮಹೇಶ್‌ ಬಾಬುರನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಲಾಂಚ್ ಮಾಡುವುದೇ ಇದಕ್ಕೆ ಕಾರಣ.

  Its Rajamouli Suggestion To Mahesh Babu Not To Release Sarkaru Vaari Paata in Hindi

  'ಸರ್ಕಾರು ವಾರಿ ಪಾಟ' ಸಿನಿಮಾ ಹಿಂದಿ ಏರಿಯಾಗಳಲ್ಲಿ ಕ್ರೇಜ್ ಕಮ್ಮಿಯಿದೆ. ಈ ಕಾರಣಕ್ಕೆ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡದೆ ಇರುವಂತೆ ಕೇಳಿಕೊಂಡಿದ್ದರಂತೆ. ಇದರಿಂದ ಇಬ್ಬರ ಸಿನಿಮಾಗೆ ತೊಂದರೆಯಾಗುತ್ತೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಹೇಶ್ ಬಾಬುರನ್ನು ಲಾಂಚ್ ಮಾಡಲು ಹಿನ್ನೆಡೆಯಾಗುತ್ತೆ ಎಂದು ಹೇಳಿದ್ದರಂತೆ. ಈ ಕಾರಣಕ್ಕೆ ಹಿಂದಿ ಡಬ್ ಮಾಡುವ ಐಡಿಯಾವನ್ನು ನಿಲ್ಲಿಸುವಂತೆ ಮಹೇಶ್ ಬಾಬು ನಿರ್ಮಾಪಕರಿಗೆ ಹೇಳಿದ್ದರು ಎನ್ನಲಾಗಿದೆ.

  English summary
  Its Rajamouli Suggestion To Mahesh Babu Not To Release Sarkaru Vaari Paata in Hindi, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion