For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ'ನ ಜೊತೆ ಹೆಜ್ಜೆ ಹಾಕಲು ದುಬಾರಿ ಸಂಭಾವನೆ ಪಡೆದ ಜಾಕ್ವೆಲಿನ್!

  |

  ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ಜುಲೈ 10 ರಿಂದ ಪುನಃ ಪ್ರಾರಂಭವಾಗುತ್ತಿದ್ದು, ಹಾಡುಗಳ ಚಿತ್ರೀಕರಣವಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ.

  ಸಿನಿಮಾದ ವಿಶೇಷ ಹಾಡಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಕರೆತರಲಾಗುತ್ತಿದ್ದು, ಐದು ನಿಮಿಷದ ಹಾಡಿಗಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಜಾಕ್ವೆಲಿನ್‌ಗೆ ಸಹ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತಿದೆ.

  ಬೆಂಗಳೂರಿನಲ್ಲಿ ವಿಶೇಷ ಹಾಡಿನ ಚಿತ್ರೀಕರಣ ನಡೆಯಲಿದ್ದು, ಹಾಡಿಗಾಗಿಯೇ ಸುಮಾರು 3 ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ. ಈ ಒಂದು ಹಾಡಿಗಾಗಿಯೇ ಜಾಕ್ವೆಲಿನ್ ಸಹ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

  ಜಾಕ್ವೆಲಿನ್ ಫರ್ನಾಂಡೀಸ್ ಕಳೆದ ಮೇ ತಿಂಗಳಲ್ಲಿಯೇ ಹಾಡಿಗೆ ನರ್ತಿಸಲು ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ಲಾಕ್‌ಡೌನ್ ಆದ ಕಾರಣ ಜಾಕ್ವೆಲಿನ್ ಬರಲಾಗಲಿಲ್ಲ. ಈಗ ಮುಹೂರ್ತ ಕೂಡಿಬಂದಿದೆ.

  ಜಾಕ್ವೆಲಿನ್ ಮೈ ಬಳುಕಿಸುತ್ತಿರುವ ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದು, ಈ ಹಾಡು ಸಿನಿಮಾದ ವಿಶೇಷಗಳಲ್ಲಿ ಒಂದಾಗಿರಲಿದೆ.

  'ವಿಕ್ರಾಂತ್ ರೋಣ' ಸಿನಿಮಾವನ್ನು 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಿರೂಪ್ ಭಂಡಾರಿ ಸಹ ಮುಖ್ಯ ಪಾತ್ರದಲ್ಲಿದ್ದಾರೆ. ನಾಯಕಿಯರಾಗಿ ಶ್ರದ್ಧಾ ಶ್ರೀನಾಥ್ ಹಾಗೂ ನೀತಾ ಅಶೋಕ್ ಇದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ಸುದೀಪ್ ಆಪ್ತ ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ.

  English summary
  Jacqueline Fernandez song shoot in Sudeep's Vikrant Rona starts from July 10 at Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X