For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ, ದೀಪಿಕಾ ಬಳಿಕ ಮತ್ತೊಬ್ಬ ಬಾಲಿವುಡ್‌ ನಟಿ ಹಾಲಿವುಡ್‌ಗೆ

  |

  ಬಾಲಿವುಡ್‌ನ ನಟಿಯರು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಡಿಂಪಲ್ ಕಪಾಡಿಯಾ ಹೀಗೆ ಹಲವು ಬಾಲಿವುಡ್‌ ನಟಿಯರು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಇದೀಗ ಮತ್ತೊಬ್ಬ ಬಾಲಿವುಡ್‌ ನಟಿ ಹಾಲಿವುಡ್‌ಗೆ ಹಾರಲು ಸಕಲ ಸಜ್ಜಾಗಿದ್ದಾರೆ. ವಿಶೇಷವೆಂದರೆ ಈ ನಟಿ ಕನ್ನಡದ ಸಿನಿಮಾ ಒಂದರಲ್ಲಿಯೂ ನಟಿಸಲಿದ್ದಾರೆ!

  ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್, ಶೀಘ್ರದಲ್ಲಿಯೇ ಹಾಲಿವುಡ್‌ ಹಾರಲಿದ್ದಾರೆ. ಹಾಲಿವುಡ್‌ನ ದೊಡ್ಡ ಬಜೆಟ್‌ನ ಆಕ್ಷನ್ ಸಿನಿಮಾ ಒಂದಕ್ಕೆ ಜಾಕ್ವಲಿನ್ ಆಯ್ಕೆ ಆಗಿದ್ದು. ಸಿನಿಮಾಕ್ಕಾಗಿ ತಯಾರಿಗಳನ್ನು ಸಹ ಆರಂಭಿಸಿದ್ದಾರೆ.

  ಜಾಕ್ವಿಲಿನ್ ನಟಿಸುತ್ತಿರುವ ಹಾಲಿವುಡ್‌ ಸಿನಿಮಾವು 'ಮಹಿಳಾ ಪ್ರಧಾನ' ಸಿನಿಮಾ ಆಗಿದೆ. ಆರು ಭಿನ್ನ ಕತೆಗಳುಳ್ಳ 'ಅಂತಾಲಜಿ' ಸಿನಿಮಾ ಇದಾಗಿರಲಿದ್ದು, ನಟಿಯರು ಭರ್ಜರಿ ಆಕ್ಷನ್ ಮೂಲಕ ರಂಜಿಸಲಿದ್ದಾರೆ. ಅದರಲ್ಲಿ ಜಾಕ್ವಲಿನ್ ಫರ್ನಾಂಡೀಸ್ ಸಹ ಒಬ್ಬರು.

  ಆಕ್ಷನ್ ಸಿನಿಮಾಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಜಾಕ್ವಲಿನ್. ಮೊದಲೇ ಸಣ್ಣಗಿದ್ದ ಈ ನಟಿ ಇನ್ನಷ್ಟು ಸಣ್ಣಗಾಗಿದ್ದಾರೆ. ಜೊತೆಗೆ ಆಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಳ್ಳಲು ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ.

  ನಟಿ ಜಾಕ್ವಲಿನ್ ಫರ್ನಾಂಡೀಸ್ ಅವರು ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ನರ್ತಿಸಲಿದ್ದಾರೆ. ಹಾಡಿನ ಚಿತ್ರೀಕರಣ ಇನ್ನಷ್ಟೆ ಆಗಬೇಕಿದೆ.

  Read more about: bollywood hollywood movie
  English summary
  Bollywood actress Jacqueline Fernandez will act in a hollywood action movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X