»   » ಗಾಂಧಿನಗರದಲ್ಲಿ ಜಗ್ಗೇಶ್ 'ಗುರು' ರೀಮೇಕ್ ಗುಲ್ಲು

ಗಾಂಧಿನಗರದಲ್ಲಿ ಜಗ್ಗೇಶ್ 'ಗುರು' ರೀಮೇಕ್ ಗುಲ್ಲು

Posted By:
Subscribe to Filmibeat Kannada
ಜಗ್ಗೇಶ್ ತಮ್ಮ ಮಗ ಗುರುರಾಜ್ ಅವರನ್ನೇ ನಾಯಕರನ್ನಾಗಿಸಿ 'ಗುರು' ಎಂಬ ಹೆಸರನ್ನಿಟ್ಟು ಸಿನಿಮಾ ನಿರ್ದೇಶನ ಮಾಡಲು ಹೊರಟಿರುವ ಸುದ್ದಿ ಹೊಸದೇನಲ್ಲ. ಆದರೆ ಆ ಚಿತ್ರ ರೀಮೇಕ್ ಅಥವಾ ಸ್ವಮೇಕ್ ಎಂಬ ಬಗ್ಗೆ ಜಗ್ಗೇಶ್ ಏನನ್ನೂ ಹೇಳಿರಲಿಲ್ಲ. ಗಾಂಧಿನಗರದಿಂದ ಬಂದ ಮಾಹಿತಿ ಪ್ರಕಾರ, ಜಗ್ಗೇಶ್ ನಿರ್ದೇಶನದ ಈ ಚಿತ್ರ ರೀಮೇಕ್.

"ನನ್ನ ಮಗನನ್ನು ಹಾಕಿಕೊಂಡು ಹಲವರು ಸಿನಿಮಾ ಮಾಡಿದರು. ಆದರೆ ಯಾರಿಂದಲೂ ಅವನನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇನ್ನೂ ನಾನು ಸುಮ್ಮನಿದ್ದರೆ ಸರಿಯಲ್ಲ, ನಾನೇ ಚಿತ್ರ ನಿರ್ದೇಶಿಸಲಿದ್ದೇನೆ" ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು ನವರಸ ನಾಯಕ ಜಗ್ಗೇಶ್.

ಜಗ್ಗೇಶ್ ಹೀಗೆ ಹೇಳಿದವರೇ ತಕ್ಷಣ 'ಗುರು' ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮುಖ್ಯಮಂತ್ರಿ ಸದಾನಂದ ಗೌಡರನ್ನೂ ಕರೆಸಿ ಭರ್ಜರಿಯಾಗೇ ಮುಹೂರ್ತ ಮಾಡಿದ್ದಾರೆ. ಆಂಧ್ರಪ್ರದೇಶ ರಶ್ಮಿ ಗೌತಮ್ ಅವರನ್ನು ಗುರುರಾಜ್ ಅವರಿಗೆ ನಾಯಕಿಯಾಗಿ ಆಯ್ಕೆ ಮಾಡಿರುವ ಅವರು, ಚಿತ್ರಕಥೆ ಹಾಗೂ ನಿರ್ದೇಶನ ತಮ್ಮದೆಂದು ಹೇಳಿದ್ದರು. ಆದರೆ ಕಥೆಯ ಬಗ್ಗೆ ಏನೂ ಹೇಳಿರಲಿಲ್ಲ.

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ, ಜಗ್ಗೇಶ್ ನಿರ್ದೇಶಿಸಲಿರುವ ಗುರು ಸಿನಿಮಾ ಸ್ವಮೇಕ್ ಅಲ್ಲ, ರೀಮೇಕ್. ಈ ಚಿತ್ರ ತಮಿಳಿನ 'ಒರು ಕಲ್ ಒರು ಕನ್ನಾಡಿ' (ಒಂದು ಕಲ್ಲು, ಒಂದು ಕನ್ನಡಿ) ಆಗಿದ್ದು ಇದನ್ನು ಕನ್ನಡಕ್ಕೆ ಭಟ್ಟಿ ಇಳಿಸುತ್ತಿದ್ದಾರೆ ಜಗ್ಗೇಶ್. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮೊಮ್ಮಗ ಉದಯನಿಧಿ ಸ್ಟಾಲಿನ್ ನಾಯಕರಾಗಿದ್ದ ಚಿತ್ರದ ರೀಮೇಕ್ ಕನ್ನಡದ ಗುರು ಎಂಬುದು ಲೇಟೆಸ್ಟ್ ನ್ಯೂಸ್.

ಹಂಸಿಕಾ ಮೊಟ್ವಾನಿ ನಾಯಕಿಯಾಗಿದ್ದ 'ಒರು ಕಲ್ ಒರು ಕನ್ನಾಡಿ' ಚಿತ್ರವನ್ನು ಎಂ ರಾಜೇಶ್ ನಿರ್ದೇಶಿಸಿದ್ದರು. ಇದು ತಮಿಳಿನಲ್ಲಿ ಸೂಪರ್ ಹಿಟ್ ಆಗಿ ಮೆರೆದಿತ್ತು. ಈ ಚಿತ್ರವನ್ನೇ ಗುರು ಹೆಸರಿನಲ್ಲಿ ಜಗ್ಗೇಶ್ ಕನ್ನಡಕ್ಕೆ ತರುತ್ತಿದ್ದಾರೆ ಎಂಬುದನ್ನು ತುಂಬಾ ಮಂದಿ ಒಪ್ಪುತ್ತಿಲ್ಲ. ಕಾರಣ ಜಗ್ಗೇಶ್ ಅವರಿಗಿರುವ ಕನ್ನಡಾಭಿಮಾನ. ಅವರು ನಿರ್ದೇಶಿಸಲಿರುವ ಮೊಟ್ಟಮೊದಲ ಚಿತ್ರ ರೀಮೇಕ್ ಆಗಿರಲಿಕ್ಕಿಲ್ಲ ಎಂಬುದು ಅವರನ್ನು ಬಲ್ಲವರ ವಾದ.

ಬಂದ ಮಾಹಿತಿ ಪ್ರಕಾರ, ಜಗ್ಗೇಶ್ ನಿರ್ದೇಶಿಸಲಿರುವ ಈ ಚಿತ್ರ ರಿಮೇಕ್ ಆದರೂ ಇದರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮೂಲ ಚಿತ್ರ ತಮಿಳಿನಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ ಕನ್ನಡಕ್ಕೆ ಮಾಡಿರುವ ಕಥೆಯಲ್ಲಿ 'ಆಕ್ಷನ್‌'ಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂಬ ಮಾಹಿತಿಯಿದೆ.

ವಿಷಯವೇನೇ ಇರಲಿ, ಹೆಚ್ಚೆಂದರೆ ಚಿತ್ರ ಬಿಡುಗಡೆ ಆಗುವರೆಗೆ ಇದು ಗುಟ್ಟಾಗಿರಬಹುದಷ್ಟೇ. ನಂತರ ಯಾವುದು ಯಾವುದರ ರೀಮೇಕ್ ಎಂಬುದು ಸ್ಪಷ್ಟವಾಗಲೇಬೇಕು. ಅಷ್ಟಕ್ಕೂ, ಜಗ್ಗೇಶ್ ಎಲ್ಲೂ ತಾವು ನಿರ್ದೇಶಿಸಲಿರುವ ಚಿತ್ರ ಸ್ವಮೇಕ್ ಎಂದೇನೂ ಹೇಳಿಲ್ಲ. ರೀಮೇಕ್ ಆಗಿರಬಹುದು, ಅಲ್ಲದೆಯೂ ಇರಬಹುದು. ಎಲ್ಲವೂ ತಿಳಿಯುವವರೆಗೆ ರಹಸ್ಯ ಅಷ್ಟೇ! (ಒನ್ ಇಂಡಿಯಾ ಕನ್ನಡ)

English summary
There is a news buzz that Jaggesh Direction upcoming movie titled Guru is the Remake of Oru Kal Oru Kannadi Tamil Movie. Jaggesh Son Gururaj acts in this movie and Jaggesh directs this as first movie in his movie carrier. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada