'ಜಾಗ್ವಾರ್' ಬರೋ ಮುನ್ನವೇ 3 ತೆಲುಗು ಚಿತ್ರಕ್ಕೆ ನಿಖಿಲ್ ಬುಕ್ ಆಗಿದ್ದಾರಾ?

By Sonu

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರು ಚೊಚ್ಚಲ ಚಿತ್ರ 'ಜಾಗ್ವಾರ್' ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಭರದಿಂದ ಸಾಗಿದ್ದು, ಹಲವಾರು ವಿಶೇಷತೆಗಳನ್ನು 'ಜಾಗ್ವಾರ್' ಸಿನಿಮಾ ಹೊಂದಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಿನಿಮಾದ ಮೂಲಕ ಪರಿಚಯಗೊಳ್ಳುತ್ತಿರುವ ನಟ ನಿಖಿಲ್ ಕುಮಾರ್ ಅವರಿಗೆ ಈಗಲೇ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದಿವೆ.[ನಿಖಿಲ್ ಕುಮಾರ್ 'ಜಾಗ್ವಾರ್' ಚಿತ್ರಕ್ಕೆ ಹಾಲಿವುಡ್ ಟಚ್]

'Jaguar' actor Nikhil kumar to sign 3 telugu films

ಕನ್ನಡ ಚಿತ್ರದ ಮೂಲಕ ನಾಯಕ ನಟನಾಗಿ ಹೊರ ಹೊಮ್ಮುತ್ತಿರುವ ನಟ ನಿಖಿಲ್ ಕುಮಾರ್ ಅವರಿಗೆ ಸಿನಿಮಾ ಮಾಡಲು ತೆಲುಗಿನ ಮೂವರು ಘಟಾನುಘಟಿ ನಿರ್ದೇಶಕರು ಮುಂದೆ ಬಂದಿದ್ದಾರೆ.[ಸದ್ದಿಲ್ಲದೇ ಎಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ಹಾರಿದ್ದು ಯಾಕೆ?]

'Jaguar' actor Nikhil kumar to sign 3 telugu films

ತೆಲುಗಿನ 'ತುಳಸಿ', 'ಲೆಜೆಂಡ್' ಮತ್ತು 'ಸರೈನೋಡು' ಮುಂತಾದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಬೋಯಪಾಟಿ ಸ್ರೀನು, 'ರೇಸ್ ಗುರ್ರಂ', 'ಆತನೊಕ್ಕಡೆ', 'ಊಸರವಳ್ಳಿ', 'ಕಿಕ್' ಮೊದಲಾದ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಸುರೇಂದರ್ ರೆಡ್ಡಿ. ಹಾಗೂ 'ಬೃಂದಾವನಂ', 'ಮಿರ್ಚಿ' ಮತ್ತು 'ಶ್ರೀಮಂತುಡು' ಮುಂತಾದ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಕೊರಟಾಲ ಶಿವ ಈ ಮೂವರ ಮುಂದಿನ ಸಿನಿಮಾಗಳಲ್ಲಿ ನಿಖಿಲ್ ಕುಮಾರ್ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿದೆ.['ಜಾಗ್ವಾರ್' ತಂಡದಿಂದ ಯುಗಾದಿಗೆ ಸ್ಪೆಷಲ್ ಗಿಫ್ಟ್]

'Jaguar' actor Nikhil kumar to sign 3 telugu films

ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಡುವಾಗಲೇ ಬಿಗ್ ಬಜೆಟ್ ನ ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿರುವ ನಿಖಿಲ್ ಕುಮಾರ್ ಅವರು ಟಾಲಿವುಡ್ ಕ್ಷೇತ್ರದತ್ತ ತಮ್ಮ ನೋಟ ನೆಟ್ಟಿದ್ದಾರಾ? ಅನ್ನೋ ಅನುಮಾನ ಕಾಡುತ್ತದೆ.['ಜಾಗ್ವಾರ್' ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ ಕಿಕ್!]

ಅದಕ್ಕೆ ತಕ್ಕಂತೆ ದೊಡ್ಡ ಬ್ಯಾನರ್ ಪಿವಿಪಿಯಿಂದ ನಿರ್ಮಾಣವಾಗಲಿರುವ ಈ 3 ಖ್ಯಾತ ನಿರ್ದೇಶಕರ ಸಿನಿಮಾಗೆ ಬೇರೆ ಬುಕ್ಕ್ ಆಗಿದ್ದಾರೆ ಅಂತ ಸುದ್ದಿ ಹರಡಿದೆ. ಅಷ್ಟಕ್ಕೂ ಎಲ್ಲವೂ ಖಚಿತವಾಗಿ ಗೊತ್ತಾಗಬೇಕಾದರೆ ಸ್ವಲ್ಪ ದಿನ ಕಾಯಲೇಬೇಕು.

More from Filmibeat

English summary
Kannada Movie 'Jaguar' fame actor Nikhil Kumar to sign 3 telugu films directed by Boyapati Srinu, Koratala Siva and Surender Reddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X