James Day 3 Box office Collection:'ಜೇಮ್ಸ್' 3ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ವಿವರ
ಪುನೀತ್ ರಾಜ್‌ಕುಮಾರ್ ಇತ್ತೀಚಿನ ಬಿಡುಗಡೆ 'ಜೇಮ್ಸ್' ಬಾಕ್ಸಾಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಾ ಇದೆ. ಇದು ಪವರ್ ಸ್ಟಾರ್ ಚಿತ್ರ. ಅದರಲ್ಲೂ ಮುಖ್ಯವಾಗಿ ಇದು ಅವರ ಕೊನೆಯ ಚಿತ್ರ ಎಂಬ ಕಾರಣದಿಂದ ಈ ಚಿತ್ರಕ್ಕೆ ಜನ ಸಾಗರ ಹರಿದು ಬರುತ್ತಿದೆ. ಮಾರ್ಚ್ 17ರಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾ ರಿಲೀಸ್ ಆಗಿದೆ.
ಕರ್ನಾಟಕದಾದ್ಯಂತ ಗಲ್ಲಿ ಗಲ್ಲಿಗಳಲ್ಲಿ ಮತ್ತು ಥಿಯೇಟರ್‌ಗಳಲ್ಲಿ ಅಪ್ಪು ಬೃಹತ್ ಕಟೌಟ್‌ಗಳು, ಬ್ಯಾನರ್‌ಗಳನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಈ ಚಿತ್ರ ದಿವಂಗತ ನಟ ಅಪ್ಪು ಅಭಿಮಾನಿಗಳನ್ನು ಭಾವನಾತ್ಮಕ ಲೋಕದಲ್ಲಿ ಮುಳುಗಿಸಿತ್ತು. ಸಿನಿಮಾ ನೋಡಿದ ಅಭಿಮಾನಿಗಳು ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ.
ಅಪ್ಪು ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ಮೊದಲ ದಿನವಂತೂ ಮಧ್ಯರಾತ್ರಿ 1 ಗಂಟೆಯಿಂದಲೇ ಶೋಗಳು ಪ್ರಾರಂಭವಾಗಿದ್ದು, ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಮೊದಲ ದಿನವೇ ಕನ್ನಡ ಚಿತ್ರರಂಗದ ಹಲವು ದಾಖಲೆಗಳನ್ನು ಪುಡಿಗಟ್ಟಿದೆ 'ಜೇಮ್ಸ್'.

ಮೊದಲ ದಿನವೇ 30 ಕೋಟಿಯ ಗಡಿ ದಾಟಿದ 'ಜೇಮ್ಸ್'!
'ಜೇಮ್ಸ್' ಸಿನಿಮಾ ಮೊದಲ ದಿನವೇ ಕರ್ನಾಟಕ ಒಂದರಲ್ಲೇ ಸರಿ ಸುಮಾರು 35 ಕೋಟಿ ಗಳಿಸಿದೆ ಎಂದು ವರದಿ ಆಗಿತ್ತು. ಆದರೆ ಕರ್ನಾಟಕ ಹೊರತು ಪಡಿಸಿ, ವಿಶ್ವಾದ್ಯಂತ ಆಗಿರುವ ಕಲೆಕ್ಷನ್ ಎಲ್ಲವನ್ನೂ ಲೆಕ್ಕ ಹಾಕಿದರೆ ಇನ್ನೂ ಹೆಚ್ಚು ಹಣ 'ಜೇಮ್ಸ್' ಗಲ್ಲಾ ಪಟ್ಟೆಗೆ ಸೇರಿದೆ. ಮೊದಲ ದಿನವೇ 'ಜೇಮ್ಸ್' ಸಿನಿಮಾ ದಾಖಲೆ ಗಳಿಕೆ ಕಂಡಿರುವುದಂತೂ ಸತ್ಯ.

ಎರಡನೇ ದಿನಕ್ಕೆ 'ಜೇಮ್ಸ್' 100 ಕೋಟಿ!
ಇನ್ನು 'ಜೇಮ್ಸ್' ಚಿತ್ರದ ಅಬ್ಬರ ಎರಡನೇ ದಿನಕ್ಕೂ ಕಡಿಮೆ ಆಗಿರಲಿಲ್ಲ. ಎರಡನೇ ದಿನ ರಾಜ್ಯದಾದ್ಯಂತ 18 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ದಾಖಲೆಯೇ ಆಗಿದೆ. ಅಲ್ಲದೇ ಕರ್ನಾಟಕದ ಕಲೆಕ್ಷನ್ ಜೊತೆಗೆ ವಿಶ್ವಾದ್ಯಂತ 'ಜೇಮ್ಸ್' ಗಳಿಕೆಯ ಲೆಕ್ಕಾಚಾರವನ್ನು ಚಿತ್ರತಂಡ ಬಿಚ್ಚಿಟ್ಟಿಲ್ಲ. ಆದರೆ ಎರಡನೇ ದಿನಕ್ಕೇ 'ಜೇಮ್ಸ್' 100 ಕೋಟಿ ಕ್ಲಬ್ ಸೇರಿದೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ 'ಜೇಮ್' 3ನೇ ದಿನದ ಕಲೆಕ್ಷನ್!
ಮೊದಲೆರಡು ದಿನ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದ 'ಜೇಮ್ಸ್' ಚಿತ್ರತಂಡ, ಮೂರನೇ ದಿನಕ್ಕೂ ಅಬ್ಬರ ಮುಂದುವರೆದಿದೆ. ಕರ್ನಾಟಕದಲ್ಲಿ ಮೂರನೇ ದಿನದ ಕಲೆಕ್ಷನ್ 9 ಕೋಟಿ ಎನ್ನಲಾಗಿದೆ. ಇದರ ಜೊತೆಗೆ ಸ್ಯಾಟಲೈಟ್ ಹಕ್ಕು ಮಾರಾಟದ ಮೂಲಕವೂ ಭಾರಿ ಸದ್ದು ಮಾಡಿತು 'ಜೇಮ್ಸ್'.

'ಜೇಮ್ಸ್' ಚಿತ್ರದಲ್ಲಿ ಅಪ್ಪು ಜಾದು!
'ಜೇಮ್ಸ್' ಸಿನಿಮಾವು ಮಾರ್ಚ್ 17 ರಂದು ಬಿಡುಗಡೆ ಆಗಿದ್ದು ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದಾರೆ. ಡ್ರಗ್ಸ್ ವಿರುದ್ಧ ಹೋರಾಟದ ಕತೆಯನ್ನು ಈ ಸಿನಿಮಾದಲ್ಲಿ ತರಲಾಗಿದೆ. ಜೊತೆಗೆ ಸ್ನೇಹದ ಬಗ್ಗೆ ಸಂದೇಶವನ್ನೂ ಸಾರುತ್ತಿದೆ. ಸಿನಿಮಾದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಕಾಂತ್, ಶರತ್ ಕುಮಾರ್, ಆದಿತ್ಯ ಮೆನನ್ ಮುಖ್ಯ ವಿಲನ್‌ಗಳಾಗಿದ್ದಾರೆ. ರಂಗಾಯಣ ರಘು, ಅನು ಪ್ರಭಾಕರ್, ಚಿಕ್ಕಣ್ಣ, ತಿಲಕ್, ಶೈನ್ ಶೆಟ್ಟಿ, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಕಾಮಿಡಿ ಕಿಲಾಡಿಗಳು ನಯನ ಇನ್ನೂ ಹಲವಾರು ಮಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











