ಕೋಟಿ, ಕೋಟಿ ಆಫರ್ ಬಿಟ್ಟ 'ಜೇಮ್ಸ್' ನಿರ್ಮಾಪಕ!

ಮಾರ್ಚ್ ಬಂದಾಗಿದೆ, ಎಲ್ಲೆಲ್ಲೂ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ಜೊತೆಗೆ, 'ಜೇಮ್ಸ್' ಜಾತ್ರೆ ಕೂಡ ನಡೆಯಲಿದೆ. ಹಾಗಾಗಿ ಅಪ್ಪು ಅಭಿಮಾನಿಗಳು, ಸಿನಿಮಾ ಪ್ರೇಕ್ಷಕರು ದಿನಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ 'ಜೇಮ್ಸ್' ಅಬ್ಬರ, ಸಮುದ್ರ ಅಲೆಯಂತೆ ಸಪ್ಪಳ ಮಾಡುತ್ತದೆ.

ಈಗಾಗಲೇ ಜೇಮ್ಸ್ ಚಿತ್ರದ ಥಿಯೇಟರ್‌ ಲಿಸ್ಟ್ ಹೊರ ಬಂದಿದೆ. 'ಜೇಮ್ಸ್' ಸಿನಿಮಾ ಯಾವೆಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನುವ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಅವರಿಂದಲೇ 'ಜೇಮ್ಸ್' ಚಿತ್ರದ ತೂಕ ಮತ್ತಷ್ಟು ಹೆಚ್ಚಿದೆ. ಹಾಗಾಗಿ 'ಜೇಮ್ಸ್' ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದು ಬಿಟ್ಟಿದೆ.

ಸಿನಿಮಾ ವಿತರಕರು ಹೆಚ್ಚಿನ ಹಣ ನೀಡಿ 'ಜೇಮ್ಸ್' ಸಿನಿಮಾ ದಕ್ಕಿಸಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಸಿನಿಮಾ ತಂಡ ಅಷ್ಟು ಸುಲಭಕ್ಕೆ ಚಿತ್ರವನ್ನು ಸೇಲ್ ಮಾಡುತ್ತಿಲ್ಲ. ಯಾಕೆಂದರೆ 'ಜೇಮ್ಸ್' ಸಿನಿಮಾ ರಿಲೀಸ್ ಬಳಿಕ ಎಷ್ಟು ಗಳಿಕೆ ಮಾಡಬಹುದು. ಎಷ್ಟು ಮಂದಿ ಚಿತ್ರವನ್ನು ನೋಡಬಹುದು ಎನ್ನುವ ಅಂದಾಜು ಸಿಕ್ಕಿದೆ.

BKTಗಾಗಿ 'ಜೇಮ್ಸ್' ಚಿತ್ರಕ್ಕೆ 12 ಕೋಟಿ ಬೇಡಿಕೆ!

BKTಗಾಗಿ 'ಜೇಮ್ಸ್' ಚಿತ್ರಕ್ಕೆ 12 ಕೋಟಿ ಬೇಡಿಕೆ!

ಮಾರ್ಚ್ 17ಕ್ಕೆ 'ಜೇಮ್ಸ್' ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ವಿತರಕರು ಸಿನಿಮಾಗಾಗಿ ಮುಗಿ ಬಿದ್ದಿದ್ದಾರೆ. ಆದರೆ ಬಂದಿರುವ ದೊಡ್ಡ ಆಫರ್ ತಿರಸ್ಕರಿಸುತ್ತಿದ್ದಾರೆ ಚಿತ್ರದ ನಿರ್ಮಾಪಕ ಕಿಶೋರ್ ಎನ್ನುವ ಮಾತು ಕೇಳಿ ಬಂದಿದೆ. ಹೌದು BKT ಬರೋಬ್ಬರಿ 12 ಕೋಟಿಯ ಆಫರ್ ನೀಡಲಾಗಿತ್ತಂತೆ. ಅಂದರೆ ಇದು ಬೆಂಗಳೂರು, ತುಮಕೂರು ಮತ್ತು ಕೋಲಾರ ಮಾತ್ರ. ಈ ಮೂರು ಪ್ರದೇಶಗಳ ವಿತರಣೆ ಸೇರಿ 12 ಕೋಟಿ ಆಫರ್ ಮಾಡಲಾಗಿದೆಯಂತೆ. ಆದರೆ ಅದನ್ನು ಚಿತ್ರತಂಡ ತಿರಸ್ಕರಿಸಿದೆಯಂತೆ.

'ಜೇಮ್ಸ್‌'ಗೆ ಹೆಚ್ಚಿದ ಬೇಡಿಕೆ!

'ಜೇಮ್ಸ್‌'ಗೆ ಹೆಚ್ಚಿದ ಬೇಡಿಕೆ!

ಅಪ್ಪು ಇಲ್ಲ ಆದರೆ, ಅಪ್ಪು ಅರ್ಧಕ್ಕೆ ಬಿಟ್ಟು ಹೋದ ಜೇಮ್ಸ್ ಚಿತ್ರಕ್ಕೆ ಯಾವುದೇ ಮೋಸ ಆಗೋದಿಲ್ಲ. ಈ ಚಿತ್ರದ ಬೆನ್ನಿಗೂ ಕೂಡ ಅಪ್ಪು ನಿಂತಿದ್ದಾರೆ. ಅಪ್ಪು ಅವರನ್ನು ಕಳೆದುಕೊಂಡ ಕರುನಾಡು 'ಜೇಮ್ಸ್' ಚಿತ್ರದ ಮೂಲಕ ಅವರನ್ನು ನೋಡಲು ಕಾತರದಿಂದ ಕಾಯುತ್ತಿದೆ. ಸಹಸ್ರಾರು ಕನ್ನಡಿಗರ ಮನಸ್ಸು 'ಜೇಮ್ಸ್' ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್ ಅವರನ್ನು ನೋಡಬೇಕು ಎಂದು ಮಿಡಿಯುತ್ತಿದೆ. ಹಾಗಾಗಿ 'ಜೇಮ್ಸ್' ಸಿನಿಮಾವನ್ನು ಅತಿ ಹೆಚ್ಚು ಮಂದಿ ನೋಡೇ, ನೋಡುತ್ತಾರೆ ಎನ್ನುವ ಭರವಸೆ ಇದೆ. ಕೇವಲ ಕನ್ನಡಿಗರು, ಕರ್ನಾಟಕ ಮಾತ್ರವಲ್ಲ. ವಿಶ್ವದಾದ್ಯಂತ 'ಜೇಮ್ಸ್' ಸಿನಿಮಾವನ್ನು ಜನ ನೋಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಇದೆ.

ಕರ್ನಾಟಕದ ಮೂಲೆ, ಮೂಲೆಯಲ್ಲೂ 'ಜೇಮ್ಸ್' ಅಬ್ಬರ!

ಕರ್ನಾಟಕದ ಮೂಲೆ, ಮೂಲೆಯಲ್ಲೂ 'ಜೇಮ್ಸ್' ಅಬ್ಬರ!

'ಜೇಮ್ಸ್' ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಬಿಟ್ಟು, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರು ಸೇರಿದಂತೆ ಹೊಸಪೇಟೆ, ಬಳ್ಳಾರಿಯಿಂದ ಹಿಡಿದು ಚಿತ್ರದುರ್ಗ, ಉತ್ತರ ಕರ್ನಾಟಕ, ಶಿವಮೊಗ್ಗ, ಸೇರಿದಂತೆ ತಾಲೂಕು ಸೆಂಟರ್‌ಗಳಲ್ಲೂ 'ಜೇಮ್ಸ್' ರಿಲೀಸ್ ಆಗಲಿದೆ. ಆದರೆ ಇಷ್ಟೇ ಅಲ್ಲಾ ಮತ್ತಷ್ಟು ಥಿಯೇಟರ್‌ಗಳ ಸಂಖ್ಯೆ ಹೆಚ್ಚಾಗಲಿದೆ.

'ಜೇಮ್ಸ್' ಚಿತ್ರಕ್ಕೆ ಇಲ್ಲ ಪೈಪೋಟಿ!

'ಜೇಮ್ಸ್' ಚಿತ್ರಕ್ಕೆ ಇಲ್ಲ ಪೈಪೋಟಿ!

'ಜೇಮ್ಸ್' ಸಿನಿಮಾಗೆ ಪೈಪೋಟಿ ನೀಡುವ ಸಿನಿಮಾ ಇಲ್ಲ. ಮಾರ್ಚ್ 17 ಮತ್ತು ಆ ವಾರದಲ್ಲಿ ಬೇರೆ ಯಾವ ಚಿತ್ರವೂ ಬಿಡುಗಡೆ ಆಗುತ್ತಿಲ್ಲ. 'ಜೇಮ್ಸ್' ಸಿನಿಮಾ ಬಿಡುಗಡೆಗೆ ಒಂದು ವಾರ ಮುನ್ನ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಬಿಡುಗಡೆಯಾಗುತ್ತಿದೆ. 'ಜೇಮ್ಸ್' ತೆರೆಕಂಡ ಒಂದು ವಾರದ ಬಳಿಕ ರಾಜಮೌಳಿ ನಿರ್ದೇಶನದ RRR ರಿಲೀಸ್ ಆಗುತ್ತಿದೆ. ಹೀಗಾಗಿ ಎರಡು ದೊಡ್ಡ ಸಿನಿಮಾಗಳು 'ಜೇಮ್ಸ್' ಅಕ್ಕಪಕ್ಕನೇ ಬಿಡುಗಡೆಯಾದರೂ, ಒಟ್ಟಿಗೆ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಮೊದಲ ವಾರ 'ಜೇಮ್ಸ್' ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ. ಹಾಗಾಗಿ 'ಜೇಮ್ಸ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

More from Filmibeat

English summary
James Producer Reject 12 Crore Offer For BKT
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X