For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡನಿಗೆ ನಾಯಕಿ ಆಗಲು ಒಪ್ಪಿದ ಜಾಹ್ನವಿ ಕಪೂರ್!

  |

  ತೆಲುಗು ನಟ ವಿಜಯ್‌ ದೇವರಕೊಂಡ ಅವರ ಗ್ರಾಫ್ ಈಗ ಹೆಚ್ಚಾಗಿದೆ. ಸದ್ಯ ವಿಜಯ್ ದೇವರಕೊಂಡ ಬಾಲಿವುಡ್‌ನಲ್ಲಿ ತಮ್ಮ ಛಾಪು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ವಿಜಯ್‌ ದೇವಕೊಂಡ ಅವರ 'ಲೈಗರ್' ಸಿನಿಮಾ ತೆಲುಗು ಮತ್ತು ಹಿಂದಿಯಲ್ಲಿ ತೆರೆಗೆ ಬರ್ತಿದೆ. ಈ ಚಿತ್ರಕ್ಕೆ ಬಾಲಿವುಡ್‌ ನಿರ್ದೇಶಕ ಕರಣ್ ಜೋಹರ್ ಕೂಡ ಸಾಥ್ ನೀಡಿದ್ದಾರೆ.

  ಈಗ ವಿಜಯ್ ದೇವರಕೊಂಡನಿಗಾಗಿ ಬಾಲಿವುಡ್‌ನ ಸ್ಟಾರ್‌ ನಟಿ ಬರ್ತಿದ್ದಾರೆ. ಹೌದು ವಿಜಯ್‌ ದೇವರಕೊಂಡ ಅವರ ಜೊತೆಗೆ ಅಭಿನಯಿಸಲು ನಟಿ ಜಾಹ್ನವಿ ಕಪೂರ್ ಒಪ್ಪಿಕೊಂಡಿದ್ದಾರೆ ಎನ್ನಾಗುತ್ತಿದೆ. ಈ ಮೂಲಕ ದೇವರಕೊಂಡ ಬಾಲಿವುಡ್‌ನಲ್ಲಿ ಮತ್ತಷ್ಟು ಖ್ಯಾತಿ ಪಡೆಯಲು ಮುಂದಾಗಿದ್ದಾರೆ.

  ಅತಿಲೋಕ ಸುಂದರಿ ಅಂತಲೇ ಕರೆಸಿಕೊಳ್ಳುವ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಶ್ರೀದೇವಿ ನಿಧನದ ಬಳಿಕ ಶ್ರೀದೇವಿ, ಬೋನಿ ಕಪೂರ್ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಈಗ ವಿಜಯ್‌ ದೇವರ ಕೊಂಡನ ಜೊತೆಗೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.

  ಸೌತ್ ನಟನೊಂದಿಗೆ ಅದೃಷ್ಟ ಪರೀಕ್ಷೆಗಿಳಿಯಲಿರುವ ಜಾಹ್ನವಿ ಕಪೂರ್!

  ಸೌತ್ ನಟನೊಂದಿಗೆ ಅದೃಷ್ಟ ಪರೀಕ್ಷೆಗಿಳಿಯಲಿರುವ ಜಾಹ್ನವಿ ಕಪೂರ್!

  ನಟಿ ಜಾಹ್ನವಿ ಕಪೂರ್ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾತ್ರ ಮಾಡಿದ್ದಾರೆ. 'ಧಡಕ್' ಚಿತ್ರದ ಮೂಲಕ ನಾಯಕಿ ಆಗಿ ಜಾಹ್ನವಿ ಬಾಲಿವುಡ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅವರ ಮೊದಲ ಸಿನಿಮಾ ಅಂದುಕೊಂಡ ಮಟ್ಟಿಗೆ ಅಷ್ಟೇನು ದೊಡ್ಡ ಯಶಸ್ಸು ಕಂಡಿಲ್ಲ. ನಂತರ 'ಗುಂಜನ್ ಸಕ್ಸೇನ', 'ರೂಹಿ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರಗಳು ಕೂಡ, ಜಾಹ್ನವಿಗೆ ದೊಡ್ಡ ಹೆಸರು ತಂದುಕೊಡುವಲ್ಲಿ ಸೋತಿವೆ. ಹಾಗಾಗಿ ಜಾಹ್ನವಿ ಉತ್ತಮ ಸಿನಿಮಾಗಾಗಿ ಕಾಯುತ್ತಿದ್ದಾರೆ. ಈಗ ವಿಜಯ್‌ ದೇವರಕೊಂಡ ಜೊತೆಗೆ ಅದೃಷ್ಟ ಪರೀಕ್ಷೆಗಿಳಿಯಲು ಮುಂದಾಗಿದ್ದಾರಂತೆ.

  ಎರಡನೇ ಪ್ರಯತ್ನದಲ್ಲಿ ವಿಜಯ್‌ಗೆ ಸಿಕ್ಕಳು ಜಾಹ್ನವಿ!

  ಎರಡನೇ ಪ್ರಯತ್ನದಲ್ಲಿ ವಿಜಯ್‌ಗೆ ಸಿಕ್ಕಳು ಜಾಹ್ನವಿ!

  ಅಷ್ಟಕ್ಕೂ ವಿಜಯ್ ದೇವರಕೊಂಡ ಸಿನಿಮಾ ಜಾಹ್ನವಿಯನ್ನು ಹುಡುಕಿಕೊಂಡು ಬಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆ 'ಲೈಗರ್' ಸಿನಿಮಾಗಾಗಿ ಜಾಹ್ನವಿ ಕಾಲ್ ಶೀಟ್ ಕೇಳಲಾಗಿತ್ತು. ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಇಬ್ಬರೂ 'ಲೈಗರ್' ಸಿನಿಮಾಗೆ ಜಾಹ್ನವಿಯನ್ನು ನಾಯಕಿಯಾಗಿ ತರಲು ಹರಸಾಹಸ ಪಟ್ಟಿದ್ದರು. ಆದರೆ ಅದು ಸಾಧ್ಯ ಆಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ವಿಜಯ್ ಜೊತೆಗೆ ಜಾಹ್ನವಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

  ಒಂದೇ ಚಿತ್ರಕ್ಕಾಗಿ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ, ಜಾಹ್ನವಿ ಕಪೂರ್!

  ಒಂದೇ ಚಿತ್ರಕ್ಕಾಗಿ ಪುರಿ ಜಗನ್ನಾಥ್, ವಿಜಯ್ ದೇವರಕೊಂಡ, ಜಾಹ್ನವಿ ಕಪೂರ್!

  ಸದ್ಯ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಕೂಡ 'ಲೈಗರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಜಾಹ್ನವಿ ಸಿಗದೇ ಇದ್ದಾಗ, ಅನನ್ಯ ಪಾಂಡೆ ನಾಯಕಿ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದ ಬಳಿಕ ವಿಜಯ್ ದೇವರಕೊಂಡ ಜೊತೆಗೆ ಮತ್ತೊಂದು ಸಿನಿಮಾ ಮಾಡಿಲಿದ್ದಾರೆ ಪುರಿ ಜಗನ್ನಾಥ್. ಆ ಚಿತ್ರಕ್ಕಾಗಿ ಜಾಹ್ನವಿಯ ಕಾಲ್ ಶೀಟ್ ಕೇಳಲಾಗಿದೆ. ನಿರ್ಮಾಪಕ ಕರಣ್ ಜೋಹರ್ ಮಧ್ಯಸ್ಥಿಕೆಯಲ್ಲಿ ಜಾಹ್ನವಿ ಕಪೂರ್ ವಿಜಯ್ ಮುಂದಿನ ಚಿತ್ರಕ್ಕೆ ನಾಯಕಿ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.

  ಹಿಟ್ ಫೇರ್ ಆಗುತ್ತಾ ಜಾಹ್ನವಿ ಕಪೂರ್, ವಿಜಯ್ ದೇವರಕೊಂಡ ಜೋಡಿ!

  ಹಿಟ್ ಫೇರ್ ಆಗುತ್ತಾ ಜಾಹ್ನವಿ ಕಪೂರ್, ವಿಜಯ್ ದೇವರಕೊಂಡ ಜೋಡಿ!

  ಇನ್ನು ವಿಜಯ್ ದೇವರಕೊಂಡ ಈಗಾಗಲೇ ಹಿಟ್‌ ನಟ ಎನಿಸಿಕೊಳ್ಳುವುದರ ಜೊತೆಗೆ, ಸ್ಟಾರ್ ನಟರ ಲಿಸ್ಟ್ ಕೂಡ ಸೇರಿದ್ದಾರೆ. ಇತ್ತ ಜಾಹ್ನವಿ ಕಪೂರ್ ಸೂಪರ್ ಹಿಟ್ ಸಿನಿಮಾ ಕೊಡದಿದ್ದರೂ, ಆಕೆಗೆ ಅಪಾರ ಅಭಿಮಾನಿ ಬಳಗ ಇದೆ. ಅಷ್ಟೇ ಬೇಡಿಕೆ ಕೂಡ ಇದೆ. ಈ ಜೋಡಿ ಈಗ ಸಿನಿಮಾ ಮಾಡುತ್ತದೆ ಎನ್ನುವ ವಿಚಾರವೇ ಕುತೂಹಲಕ್ಕೆ ಕಾರಣ ಆಗಿದೆ. ಇದು ಸಿನಿಮಾರಂಗದ ಹಿಟ್ ಜೋಡಿ ಅನಿಸಿಕೊಳ್ಳುತ್ತದೆಯಾ ಎನ್ನುವ ಚರ್ಚೆಗಳು ಕೂಡ ಅದಾಗಲೇ ಹುಟ್ಟಿಕೊಂಡಿವೆ. ಈ ಚಿತ್ರದ ಬಗ್ಗೆ 'ಲೈಗರ್' ರಿಲೀಸ್ ಬಳಿಕ ಹೆಚ್ಚಿನ ಮಾಹಿತಿ ನೀಡಲಿದೆಯಂತೆ ಸಿನಿಮಾ ತಂಡ.

  English summary
  Finally Janhvi Kapoor Say Yes To Act With Vijay Devarakonda And Puri Jagannadh Next Film,
  Thursday, January 27, 2022, 13:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X