'ಫೈಟರ್' ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಜಾಹ್ನವಿ ಕಪೂರ್!

ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಸೌತ್ ಇಂಡಸ್ಟ್ರಿ ಕಡೆ ಬರ್ತಿದ್ದಾರೆ. 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಜಾಹ್ನವಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಪೂರಿ ಜಗನ್ನಾಥ್ ನಿರ್ದೇಶನದ 'ಫೈಟರ್' ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ಜಾಹ್ನವಿ ಕಪೂರ್ ಅವರನ್ನು ನಾಯಕಿಯನ್ನಾಗಿಸಲು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಪಾತ್ರವಿದೆ ಎಂಬ ಮಾತು ಸಿನಿನಗರಿಯಲ್ಲಿದೆ.

ಈ ಚಿತ್ರದಲ್ಲಿ ನಟಿಸಲು ಜಾಹ್ನವಿ ಕಪೂರ್ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಟಾಲಿವುಡ್ ಕ್ಯಾಂಪ್ ನಲ್ಲಿ ಸುದ್ದಿಯಾಗಿರುವಂತೆ ಫೈಟರ್ ಚಿತ್ರದಲ್ಲಿ ನಟಿಸಲು ಶ್ರೀದೇವಿ ಪುತ್ರಿ ಬರೋಬ್ಬರಿ 3.5 ಕೋಟಿ ಚಾರ್ಜ್ ಮಾಡ್ತಿದ್ದಾರಂತೆ.

Janhvi Kapoor Taking High Remuneration For Fighter

ಅಂದ್ಹಾಗೆ, 'ಫೈಟರ್' ಸಿನಿಮಾ ಜಾಹ್ನವಿ ಕಪೂರ್ ಪಾಲಿಗೆ ಮೊದಲ ಸೌತ್ ಸಿನಿಮಾ ಆಗಲಿದೆ. ಶ್ರೀದೇವಿ ಕೂಡ ಸೌತ್ ಇಂಡಸ್ಟ್ರಿಯಲ್ಲಿ ನಟಿಸಿ ಯಶಸ್ಸು ಕಂಡಿದ್ದರು.

ಸದ್ಯ, ವಿಜಯ್ ದೇವರಕೊಂಡ ವರ್ಲ್ಡ್ ಫೇಮಸ್ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ಬಳಿಕ ಫೈಟರ್ ಸಿನಿಮಾ ಆರಂಭಿಸಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಮುಂದಿನ ವರ್ಷದ ಮಧ್ಯದಲ್ಲಿ ಫೈಟರ್ ಗೆ ತೆರೆಗೆ ಬರಲಿದೆ.

More from Filmibeat

English summary
Sridevi daughter Jhanvi kapoor taking high remuneration for vijay devarakonda's Fighter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X