ಜ್ಯೂ. ಎನ್‌ಟಿಆರ್ ನಂತರ ತೆಲುಗಿನ ಮತ್ತೊಬ್ಬ ಸ್ಟಾರ್ ಕುಡಿ ಜೊತೆ ಜಾನ್ವಿ ರೊಮ್ಯಾನ್ಸ್?
ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಸಂಗತಿ ಗೊತ್ತೇಯಿದೆ. ಕೊರಟಾಲ ಶಿವ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಭಾಗಿ ಆಗಿದ್ದಾರೆ. ಇದೀಗ ಮತ್ತೊಂದು ತೆಲುಗು ಚಿತ್ರಕ್ಕೆ ಶ್ರೀದೇವಿ ಪುತ್ರಿ ಹೆಸರು ಕೇಳಿಬರ್ತಿದೆ. ಬಿಟೌನ್ ಬ್ಯೂಟಿ ಸೌತ್‌ನಲ್ಲೇ ಸೆಟ್ಲ್ ಆಗುವ ಸುಳಿವು ಸಿಕ್ತಿದೆ.
5 ವರ್ಷಗಳ ಹಿಂದೆ 'ಧಡಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಜಾನ್ವಿ ಎಂಟ್ರಿ ಕೊಟ್ಟರು. ಆದರೆ ಈವರೆಗೆ ದೊಡ್ಡ ಬ್ರೇಕ್ ಸಿಗಲಿಲ್ಲ. ಹಾಗಾಗಿ ನಿಧಾನವಾಗಿ ಸೌತ್ ಸಿನಿದುನಿಯಾ ಕಡೆ ಮುಖ ಮಾಡಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದ ಮೇಲೆ ಶ್ರೀದೇವಿ ಬಾಲಿವುಡ್ ಪ್ರವೇಶಿಸಿದ್ದರು. ಇದೀಗ ಜಾನ್ವಿ ಕೂಡ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. NTR30 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ. ಸೌತ್‌ನಲ್ಲಿ ಜಾನ್ವಿಗೆ ದೊಡ್ಡಗಾಗಿ ಸ್ವಾಗತ ಸಿಗುತ್ತಿದೆ.

ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಜೋಡಿಯಾಗಿ ಜಾನ್ವಿ ನಟಿಸ್ತಾರೆ ಎನ್ನುವ ಗುಸುಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ನಾಗ್ ಕಿರಿಯ ಪುತ್ರನ ಜೊತೆ ಕ್ರೇಜಿ ಪ್ರಾಜೆಕ್ಟ್ ಪ್ಲ್ಯಾನ್ ಮಾಡ್ತಿದೆ. ಇದಕ್ಕೆ 'ಧೀರ' ಅನ್ನುವ ಟೈಟಲ್ ಪರಿಶೀಲನೆಯಲ್ಲಿದೆ ಚಿತ್ರತಂಡ. 'ಧೀರ'ನ ರಾಣಿಯಾಗಿ ಶ್ರೀದೇವಿ ಪುತ್ರಿ ಆಯ್ಕೆ ಆಗುವ ಬಗ್ಗೆ ಮಾತುಗಳು ಕೇಳಿಬರ್ತಿದೆ. ಈ ಚಿತ್ರಕ್ಕೆ ಜಾನ್ವಿ ನಾಯಕಿ ಆಗುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ.

ರಾಮ್‌ಚರಣ್ ಮುಂದಿನ ಚಿತ್ರಕ್ಕೆ ಬುಚ್ಚಿಬಾಬು ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಈ ಚಿತ್ರಕ್ಕೂ ಕೂಡ ಜಾನ್ವಿ ಕಪೂರ್ ನಾಯಕಿ ಎನ್ನಲಾಗ್ತಿದೆ. ಒಟ್ನಲ್ಲಿ NTR30 ನಂತರ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ 'ಧಡಕ್' ಬೆಡಗಿ ಬ್ಯುಸಿಯಾಗುವ ಸಾಧ್ಯತೆಯಿದೆ. ಬಾಲಿವುಡ್‌ನಲ್ಲಿ ಆರಕ್ಕೇರದ ಮೂರಕ್ಕಿಳಿದ ಮಿಲಿ ಸೌತ್‌ನಲ್ಲಿ ಗೆಲ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ. ಬಹಳ ದಿನಗಳಿಂದ ಜಾನ್ವಿ ಸೌತ್ ಸಿನಿಮಾದಲ್ಲಿ ನಟಿಸೋ ಬಗ್ಗ ಚರ್ಚೆ ನಡೀತಿತ್ತು. NTR30 ಮೂಲಕ ಅದು ಪಕ್ಕಾ ಆಗ್ತಿದೆ.
ಅಖಿಲ್ ಅಕ್ಕಿನೇನಿ ಕೂಡ ಒಂದು ಸಿನಿಮಾ ಸಕ್ಸಸ್ ಇಲ್ಲದೇ ಸೋಲಿನ ಸುಳಿಗೆ ಸಿಲುಕಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ 'ಏಜೆಂಟ್' ಸಿನಿಮಾ ಹೀನಾಯವಾಗಿ ಮುಗ್ಗರಿಸಿತ್ತು. ಮೊದಲ ದಿನವೇ ನೆಗೆಟಿವ್ ಟಾಕ್ ಕೇಳಿ ಬಂದಿತ್ತು. ಸ್ವತಃ ನಿರ್ಮಾಪಕರು ಬಹಿರಂಗವಾಗಿ ಸಿನಿಮಾ ಸೋಲು ಒಪ್ಪಿಕೊಂಡಿದ್ದರು. ಪ್ರೇಕ್ಷಕರ ಕ್ಷಮೆ ಕೇಳಿದ್ದರು. ಮುಂದಿನ ಸಿನಿಮಾದಲ್ಲಿ ಅಖಿಲ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಧೀರ ಚಿತ್ರದಲ್ಲಿ ಇಬ್ಬರು ನಟಿಸಿ ಗೆಲ್ತಾರಾ ಕಾದು ನೋಡಬೇಕಿದೆ.
ಬಾಲಿವುಡ್‌ನಲ್ಲಿ 2 ಸಿನಿಮಾಗಳು ಸದ್ಯ ಜಾನ್ವಿ ಕೈಯಲ್ಲಿವೆ. 'ಬಾವಲ್' ಹಾಗೂ 'ಮಿ. & ಮಿ. ಮಾಹಿ' ಚಿತ್ರಗಳಲ್ಲಿ ಚೆಲುವೆ ಬಣ್ಣ ಹಚ್ಚಿದ್ದಾರೆ. NTR30 ಸೇರಿ ಒಟ್ಟು 3 ಸಿನಿಮಾಗಳಲ್ಲಿ ಚೆಲುವೆ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಕತ್ ಆಕ್ಟೀವ್ ಆಗಿರುವ ಚೆಲುವೆಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಸಿನಿಮಾಗಳು ಮಾತ್ರ ಗೆಲ್ಲುತ್ತಿಲ್ಲ. ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗೂ ಸಿನಿಮಾ ಸಕ್ಸಸ್‌ಗೂ ಸಂಬಂಧವಿಲ್ಲ ಅಂತ ಹಿಂದೆ ಸ್ವತಃ ಜಾನ್ವಿ ಸಂದರ್ಶನದಲ್ಲಿ ಹೇಳಿದ್ದರು.


Click it and Unblock the Notifications











