12 ವರ್ಷದ ವಿರಹ ವೇದನೆ ಅಂತ್ಯ ; ಸಿಂಗಾಪುರದ ಉದ್ಯಮಿ ಜೊತೆ 2ನೇ ಮದುವೆಗೆ ರೆಡಿಯಾದ 41 ವರ್ಷದ ಖ್ಯಾತ ನಟಿ ?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.

ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ.

Jennifer Winget s Second Marriage The Truth Behind Her Rumored Singaporean Groom

ಹೀಗಾಗಿ ಇವರ ವೈಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಯಾರದಾದರೂ ಜೊತೆ ಚೂರು ಆತ್ಮೀಯವಾಗಿ ವರ್ತಿಸಿದರೆ ಸಾಕು, ಸಂಬಂಧ ಕಲ್ಪಿಸಿ ಬಿಡುತ್ತಾರೆ. ಮದುವೆಯನ್ನು ಕೂಡ ಮಾಡಿಸಲು ಮುಂದಾಗುತ್ತಾರೆ, ಉದಾಹರಣೆಗೆ ಜೆನ್ನಿಫರ್ ವಿಂಗೆಟ್ ಅವರ ವೈಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.

ಹೌದು, ಜೆನ್ನಿಫರ್ ವಿಂಗೆಟ್..ಹಿಂದಿ ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ಹೆಸರು. ''ಶಕಲಕ ಬೂಮ್ ಬೂಮ್''.. ''ಕಸೌತಿ ಜಿಂದಗಿ ಕೇ''.. ''ಕ್ಯಾ ಹೋಗಾ ನಿಮ್ಮೋ ಕಾ''.. ''ಕಹೀ ತೋ ಹೋಗಾ''.. ''ಸರಸ್ವತಿ ಚಂದ್ರ''.. ''ಬೇಹದ್''...

ಹೀಗೆ ಹಲವಾರು ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಜೆನ್ನಿಫರ್ ವಿಂಗೆಟ್, ''ಕೋಡ್ ಎಂ''..ಸೇರಿ ಕೆಲ ವೆಬ್ ಸರಣಿಗಳನ್ನು ಕೂಡ ಮಾಡಿದ್ದಾರೆ. ಇನ್ನು ಕಲೆ ಇವರಿಗೆ ಬಾಲ್ಯದಲ್ಲಿಯೇ ಒಲಿದಿತ್ತು. ''ಅಕೇಲೆ ಹಮ್ ಅಕೇಲೆ ತುಮ್''.. ''ರಾಜಾ ಕೀ ಆಯೇಗಿ ಬಾರಾತ್''.. ''ರಾಜಾ ಕೋ ರಾಣಿ ಸೇ ಪ್ಯಾರ್ ಹೋ ಗಯಾ''.. ಬಾಲನಟಿಯಾಗಿ ಇವರು ಅಭಿನಯಿಸಿರುವ ಕೆಲ ಜನಪ್ರಿಯ ಚಿತ್ರಗಳು.

ಇಂಥಾ ಜೆನ್ನಿಫರ್ ವಿಂಗೆಟ್ ಅವರ ದಾಂಪತ್ಯ ಜೀವನ ಮುರಿದು ಬಿದ್ದು ಹನ್ನೆರಡು ವರ್ಷಗಳಾಗಿವೆ. ಸದ್ಯ ಜೆನ್ನಿಫರ್ ಗೆ 41 ವರ್ಷ. ಮೊದಲ ಪ್ರೇಮ.. ಮದುವೆ ಮತ್ತು ನೋವು ಮರೆತು ಜೆನ್ನಿಫರ್ ಸದ್ಯ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮಗ್ನರಾಗಿದ್ದಾರೆ.

Jennifer Winget s Second Marriage The Truth Behind Her Rumored Singaporean Groom

ಆದರೆ ಇದೇ ವೇಳೆ ಇವರ ಎರಡನೇ ಮದುವೆ ಕುರಿತು ಚರ್ಚೆ ಶುರುವಾಗಿದ್ದು, ಸಿಂಗಾಪೂರದ ಉದ್ಯಮಿ ಜೊತೆ ಜೆನ್ನಿಫರ್ ಶೀಘ್ರದಲ್ಲಿಯೇ ಮದುವೆಯಾಗಲಿದ್ಧಾರೆ ಎನ್ನುವ ಸುದ್ದಿ ಸದ್ಯ ಸದ್ದು ಮಾಡುತ್ತಿದೆ.

''ಹಿಂದೂಸ್ತಾನ್ ಟೈಮ್ಸ್'' ಈ ಕುರಿತು ವರದಿಯನ್ನು ಮಾಡಿದ್ದು, ಜೆನ್ನಿಫರ್ ಶೀಘ್ರದಲ್ಲಿಯೇ ಸಿಂಗಾಪೂರ್ ಮೂಲದ ಉದ್ಯಮಿ ವಿಲಿಯಂ ಇಷ್ಮಾಯೆಲ್ ಅವರ ಜೊತೆ ಎರಡನೇ ಮದುವೆಯಾಗಲಿದ್ದಾರೆ ಎಂದು ಹೇಳಿದೆ.

ಆ ಪ್ರಕಾರ ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅಥವಾ ಡಿಸೆಂಬರ್ ಇಲ್ಲವಾದಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಜೆನ್ನಿಫರ್ ಮತ್ತು ವಿಲಿಯಂ ಕ್ರಿಶ್ಚಿಯನ್ ಸಂಪ್ರದಾಯದಂತೆ ಹೊಸ ಬದುಕಿಗೆ ಮುನ್ನುಡಿಯನ್ನು ಬರೆಯಲಿದ್ಧಾರೆ.

ಇನ್ನು ಕೆಲ ದಿನಗಳ ಹಿಂದೆ ಜೆನ್ನಿಫರ್ ಫಾರಿನ್ ಪ್ರವಾಸಕ್ಕೆ ಹೋದಾಗ, ವಿಲಿಯಂ ಇಶ್ಮಾಯೆಲ್ ಜೆನ್ನಿಫರ್ ಅವರ ಎದುರು ಮಂಡಿಯೂರಿ ಪ್ರಪೋಸ್ ಮಾಡಿದ್ದು, ಇಬ್ಬರು ಅಲ್ಲಿಯೇ ತಮ್ಮ ಆಪ್ತರ ಎದುರು ಸರಳವಾಗಿ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದಾರೆ ಎಂದು ''ಹಿಂದೂಸ್ತಾನ್ ಟೈಮ್ಸ್'' ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ತಮ್ಮ ನಿಶ್ಚಿತಾರ್ಥ ಮತ್ತು ಮದುವೆಯ ಕುರಿತು ಹಬ್ಬಿರುವ ಈ ಸುದ್ದಿಗೆ ಜೆನ್ನಿಫರ್ ಅವರಾಗಲಿ ಅಥವಾ ವಿಲಿಯಂ ಆಗಲಿ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ಹಲವರು ಜೆನ್ನಿಫರ್ ವಿಂಗೆಟ್ ಅವರಿಗೆ ಶುಭಾಶಯ ಕೋರುತ್ತಿದ್ದು, ಇದೇ ಸಮಯದಲ್ಲಿ ಕೆಲವರು ಜೆನ್ನಿಫರ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ಧಾರೆ. ಒಮ್ಮೆ ಪ್ರೀತಿಯಲ್ಲಿ ಮೋಸ ಹೋದ ಜೆನ್ನಿಫರ್ ಗೆ ವಿಲಿಯಂ ಸೂಕ್ತವಾದ ವ್ಯಕ್ತಿಯಲ್ಲ, ಬದಲಿಗೆ ಕಿರುತೆರೆಯ ಖ್ಯಾತ ನಟ ಕರಣ್ ವಾಹಿ ಅವರ ಜೊತೆ ಜೆನ್ನಿಫರ್ ಮದುವೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಈ ಮೂಲಕ ತಮ್ಮ ನೆಚ್ಚಿನ ರೀಲ್ ಜೋಡಿಯನ್ನು ರಿಯಲ್‌ ಆಗಿ ನೋಡುವ ಹಂಬಲವನ್ನು ವ್ಯಕ್ತಪಡಿಸುತ್ತಿದ್ಧಾರೆ.

ಅಂದ್ಹಾಗೇ ಜೆನ್ನಿಫರ್ ವಿಂಗೇಟ್ ಈ ಹಿಂದೆ ಕರಣ್ ಸಿಂಗ್ ಗ್ರೋವರ್ ಜೊತೆ ಮದುವೆಯಾಗಿದ್ದರು. ಒಂದು -ಒಂದೂವರೆ ದಶಕದ ಹಿಂದೆ ನಡೆದ ಈ ಮದುವೆ ಕೇವಲ ಹತ್ತೇ ತಿಂಗಳಿಗೆ ಮುರಿದು ಬಿದ್ದಿತ್ತು. ಕರಣ್ ಸಿಂಗ್ ಗ್ರೋವರ್ ಗೆ ಇದು ಎರಡನೇ ಮದುವೆಯಾಗಿತ್ತು. ಆ ನಂತರ ಇವರು ಮೂರನೇ ಮದುವೆಯಾದರು. ಇವರ ಮೂರನೇ ಪತ್ನಿ ಬೇರೆ ಯಾರು ಅಲ್ಲ ಬದಲಿಗೆ ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಪಾಶಾ ಬಸು ಅನ್ನುವುದು ವಿಶೇಷ. ಇವರಿಬ್ಬರ ದಾಂಪತ್ಯಕ್ಕೆ ಈಗ 09 ವರ್ಷಗಳಾಗಿದ್ದು ಇಬ್ಬರಿಗೆ ದೇವಿ ಎಂಬ ಮುದ್ದಾದ ಹೆಣ್ಣುಮಗಳಿದ್ದಾಳೆ.

ಇತ್ತ ಕರಣ್ ಸಿಂಗ್ ಗ್ರೋವರ್‌ ಅವರಿಂದ ದೂರವಾದ ಜೆನ್ನಿಫರ್ ಮದ್ವೆಯಾಗದೇ ಇಲ್ಲಿಯವರೆಗೆ ಒಂಟಿ ಜೀವನ ನಡೆಸುತ್ತಿದ್ದರು. ಆದರೆ ಈಗ ವಿಚ್ಚೇದನ ಪಡೆದು ಹನ್ನೆರಡು ವರ್ಷಗಳಾದ ನಂತರ ಸಿಂಗಾಪೂರ್ ಉದ್ಯಮಿ ಜೊತೆ ಎರಡನೇ ಮದುವೆಯಾಗುವ ಮನಸು ಮಾಡಿದ್ದಾರೆ. ತಮ್ಮ ಮದುವೆಯ ಈ ಸುದ್ದಿಗೆ ಜೆನ್ನಿಫರ್ ಪ್ರತಿಕ್ರಿಯಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
Jennifer Winget sparks massive second marriage rumors. Get all the details on her reported relationship with Singapore's William Ishmael.
Read more about: rumours ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X