ಮೊದಲ ಸಿನಿಮಾ ಆಯ್ತು, ಜಾಹ್ನವಿ ಎರಡನೇ ಸಿನಿಮಾ ಯಾವುದು.?
ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಡಕ್' ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ವೈಯಕ್ತಿಕವಾಗಿ ಜಾಹ್ನವಿ ಅಭಿನಯದ ಬಗ್ಗೆ ಮೆಚ್ಚುಗೆ ಬಂದರೂ, ಸಿನಿಮಾ ಅಷ್ಟಾಗಿ ಮ್ಯಾಜಿಕ್ ಮಾಡಲಿಲ್ಲ ಎನ್ನುವುದು ವಾಸ್ತವ.
ಅಮ್ಮನ ಅಗಲಿಕೆಯ ನಡುವೆಯೂ ಜಾಹ್ನವಿ ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಎವರ್ ಗ್ರೀನ್ ನಟಿಯ ಮಗಳಿಗೆ ಬಿಟೌನ್ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿದೆ.
ಈಗ, ಜಾಹ್ನವಿ ಮೊದಲ ಸಿನಿಮಾ ಆಯ್ತು, ಇನ್ನೇನಿದ್ರೂ ಶ್ರೀದೇವಿ ಪುತ್ರಿಯ ಎರಡನೇ ಚಿತ್ರ ಯಾವುದು ಎಂಬುದು. ಈ ಮಧ್ಯೆ ಜಾಹ್ನವಿ ಅವರ ತಂದೆ ಬೋನಿ ಕಪೂರ್ ಸರ್ಪ್ರೈಸ್ ಸುದ್ದಿಯೊಂದನ್ನ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ.....

ತಂದೆಯ ನಿರ್ಮಾಣದಲ್ಲಿ ಪುತ್ರಿ
ಮೊದಲ ಹೆಜ್ಜೆ ಇಟ್ಟ ಜಾಹ್ನವಿ ಕಪೂರ್ ತನ್ನ ಮುಂದಿನ ಚಿತ್ರವನ್ನ ತಮ್ಮದೇ ಬ್ಯಾನರ್ ನಲ್ಲಿ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಅಧಿಕೃತವಾಗಿಲ್ಲವಾದರೂ ಇಂತಹ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಎಂಬ ವಿಷ್ಯ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ.

ಬೋನಿ ಆಸೆ ಅದೇ ಆಗಿತ್ತು
ಅಂದ್ಹಾಗೆ, ಬೋನಿ ಕಪೂರ್ ಅವರ ಆಸೆಯೂ ಅದೇ ಆಗಿತ್ತು. ಮಗಳು ಜಾಹ್ನವಿಯನ್ನ ತಮ್ಮದೇ ಬ್ಯಾನರ್ ಮೂಲಕ ಬಾಲಿವುಡ್ ಗೆ ಪರಿಚಯಿಸಬೇಕು ಎಂಬ ಉದ್ದೇಶ ಹೊಂದಿದ್ದರು. ಆದ್ರೆ, ಶ್ರೀದೇವಿ ನಿರಾಕರಿಸಿದ ಹಿನ್ನೆಲೆ ಕರಣ್ ಜೋಹರ್ ಗೆ ಅವಕಾಶ ಸಿಕ್ತು.

ಶ್ರೀದೇವಿ ಬೇಡವೆನ್ನಲು ಕಾರಣ
ಅಂದ್ಹಾಗೆ, ಶ್ರೀದೇವಿಗೆ ಮಗಳು ಸಿನಿಮಾ ಮಾಡುವುದು ಇಷ್ಟವೇ ಇರಲಿಲ್ಲ. ಆದ್ರೂ, ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ ತಾಯಿ, ತಮ್ಮ ಮಗಳನ್ನ ತಾವೇ ಪರಿಚಯಿಸಬಾರದು, ಹೊರಗಿನ ಸಂಸ್ಥೆಯಿಂದ ಮೊದಲ ಸಿನಿಮಾ ಮಾಡಲಿ ಎಂದು ಶ್ರೀದೇವಿ ನಿರ್ಧರಿಸಿದ್ದರಂತೆ. ಅದರಂತೆ ದಡಕ್ ಸಿನಿಮಾ ಮಾಡಲಾಯಿತು.

ಗ್ಲಾಮರ್ ಪಾತ್ರದಲ್ಲಿ ನಟಿ
'ದಡಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪಾತ್ರಕ್ಕಿಂತ ವಿಭಿನ್ನವಾಗಿ ಹಾಗೂ ವಿರುದ್ಧವಾಗಿ ಮುಂದಿನ ಚಿತ್ರದಲ್ಲಿ ಜಾಹ್ನವಿ ನಟಿಸಲಿದ್ದಾರಂತೆ. ಇನ್ನು ಬೋನಿ ಕಪೂರ್ ನಿರ್ಮಾಣ ಅಂದ್ಮೇಲೆ ಹೇಳಬೇಕಾ. ನೀರಿನ ರೀತಿಯಲ್ಲಿ ಹಣ ಖರ್ಚು ಮಾಡ್ತಾರೆ. ಹಾಗಾಗಿ, ಜಾಹ್ನವಿಯ ಮುಂದಿನ ಸಿನಿಮಾ ದೊಡ್ಡ ಬಜೆಟ್ ಹಾಗೂ ಗ್ಲಾಮರ್ ಪಾತ್ರದಲ್ಲಿ ಮಿಂಚಬಹುದು ಎನ್ನಲಾಗಿದೆ.


Click it and Unblock the Notifications











