»   » ಡಿಕೆಶಿಯನ್ನ 'ಡಿ.ಕೆ' ಸಾಹೇಬ ಪ್ರೇಮ್ ಭೇಟಿ ಮಾಡಿದ್ದೇಕೆ?

ಡಿಕೆಶಿಯನ್ನ 'ಡಿ.ಕೆ' ಸಾಹೇಬ ಪ್ರೇಮ್ ಭೇಟಿ ಮಾಡಿದ್ದೇಕೆ?

By: ಹರಾ
Subscribe to Filmibeat Kannada

ಗಿಮಿಕ್ ಮಾಡುವುದರಲ್ಲಿ 'ಜೋಗಿ' ಪ್ರೇಮ್ ನಂಬರ್ ಒನ್ ಅಂತ ಎಲ್ಲರಿಗೂ ಗೊತ್ತು. ರಿಲೀಸ್ ಗೂ ಮುನ್ನ ಭರ್ಜರಿ ಪ್ರಚಾರ ಪಡೆಯುವ ಪ್ರೇಮ್ ಪಬ್ಲಿಸಿಟಿ ಸ್ಟ್ರಾಟೆಜಿನೇ ಇದಕ್ಕೆ ಕಾರಣ. 'ಜೋಗಿ', 'ಜೋಗಯ್ಯ', 'ಪ್ರೀತಿ ಏಕೆ ಭೂಮಿ ಮೇಲಿದೆ', 'ಪ್ರೇಮ್ ಅಡ್ಡ' ಚಿತ್ರಕ್ಕಿಂತ ಬೇರೆ ಉದಾಹರಣೆಗಳು ಇದಕ್ಕೆ ಬೇಕಾ ಹೇಳಿ.

ಇದೀಗ ರಿಲೀಸ್ ಗೆ ಸಿದ್ಧವಾಗಿರುವ 'ಡಿ.ಕೆ' ಚಿತ್ರ ಕೂಡ ಗಾಂಧಿನಗರ ಅಂಗಳದಿಂದ ಹಿಡಿದು ವಿಧಾನಸೌಧದ ವರೆಗೂ ಅಲುಗಾಡಿಸುತ್ತಿದೆ. 'ಡಿ.ಕೆ' ಅಂತ ಹೆಸರಿಟ್ಟು, ಅದಕ್ಕೆ 'ರಾ..ಲವ್ ಸ್ಟೋರಿ' ಅಂತ ಟ್ಯಾಗ್ ಲೈನ್ ಇಟ್ಟಿರುವ ಪ್ರೇಮ್ ಗೆ ನಿನ್ನೆ ಇದ್ದಕ್ಕಿದ್ದಂತೆ ಡಿಕೆಶಿ ಸಾಹೇಬರಿಂದ ಫೋನ್ ಬಂದಿದೆ.


ಆಗಷ್ಟೇ ಸೆನ್ಸಾರ್ ಪತ್ರ ಪಡೆದ ಖುಷಿಯಲ್ಲಿದ್ದ ಪ್ರೇಮ್ ಗೆ ಡಿಕೆಶಿ ಕಡೆಯಿಂದ ಬಂದ ಬುಲಾವ್ ನೋಡಿ ಬೆವತು ಹೋಗಿದ್ದಾರೆ. ತಕ್ಷಣ ಡಿಕೆಶಿ ಮನೆಗೆ ಓಡಿದ ಪ್ರೇಮ್, ತಮ್ಮ 'ಡಿ.ಕೆ' ಚಿತ್ರದ ಬಗ್ಗೆ ವಿವರಣೆ ನೀಡಿದ್ದಾರಂತೆ. ['ಡಿಕೆ' ಸಾಹೇಬ ಬರ್ತಿದ್ದಾನೆ ಬಾಗಿಲು ತೆಗೆಯೇ ಸೇಸಮ್ಮ]


Jogi Prem briefs about his movie 'D.K' to Minister D.K.Shivakumar

''ತಮ್ಮ ಸ್ಟೋರಿ ಚಿತ್ರದಲ್ಲಿದ್ಯಾ'' ಅಂತ ಡಿಕೆಶಿ ಕೇಳಿದ್ದಕ್ಕೆ ''ಖಂಡಿತ ಇಲ್ಲ, ಕಥೆಗೂ ನಿಮಗೂ ಸಂಬಂಧ ಇಲ್ಲ. ನಿಮ್ಮ ಸ್ಟೈಲ್ ನ ಮಾತ್ರ ಚಿತ್ರದಲ್ಲಿ ಅಳವಡಿಸಿಕೊಂಡಿದ್ದೀವಿ'' ಅಂತ ಪ್ರೇಮ್ ಹೇಳಿದ್ದಾರಂತೆ. ['ಡಿ.ಕೆ' ಅಡ್ಡಾದಲ್ಲಿ ಜಯಾ, ಕರುಣಾನಿಧಿ ಟಪಾಂಗುಚಿ]


ಪ್ರೇಮ್ 'ಅಡ್ಡ'ದಿಂದ ಬಂದಿರುವ ಮತ್ತೊಂದು ಖಾಸ್ ಖಬರ್ ಪ್ರಕಾರ, ಚಿತ್ರದ 'ಡಿ.ಕೆ. ಸಾಹೇಬ' ಹಾಡಿನ ಟೀಸರ್ ಬಿಡುಗಡೆ ಮಾಡುವುದಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರಂತೆ.


ಹೀಗಂತ ಅಂತೆ ಕಂತೆಗಳು ಸದ್ಯ ಗಾಂಧಿನಗರದಲ್ಲಿ ರೆಕ್ಕೆ ಬಿಚ್ಚಿ ಹರಿದಾಡುತ್ತಿದೆ. ಇದು ಸತ್ಯವೋ...ಇಲ್ಲಾ ಪ್ರೇಮ್ ರವರ ಮತ್ತೊಂದು 'ಭಂ ಭಂ ಭೋಲೇನಾಥ್' ಸ್ಟೈಲೋ ಅವರೇ ಬಾಯಿ ಬಿಟ್ಟು ಹೇಳಬೇಕು. (ಏಜೆನ್ಸೀಸ್)

English summary
Director 'Jogi' Prem has briefed about his upcoming movie 'D.K' to Minister D.K.Shivakumar. Prem has clarified that 'D.K' is not about the life of D.K.Shivakumar and the movie has got nothing to do with him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada