ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಶಿವಣ್ಣನ ಸಿನಿಮಾ ಹೆಸರು!

ಕೇವಲ ಮೂರು ಸಿನಿಮಾಗಳಿಂದಲೇ ಪ್ರಶಾಂತ್ ನೀಲ್ ದೊಡ್ಡ ಮಟ್ಟದ ಹೆಸರು, ಖ್ಯಾತಿ ಗಳಿಸಿಕೊಂಡಿದ್ದಾರೆ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಪ್ರಶಾಂತ್ ನೀಲ್ ಈಗ ತೆಲುಗು ಸಿನಿಮಾಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

'ಕೆಜಿಎಫ್ 2' ಸಿನಿಮಾ ಮುಗಿದ ಕೂಡಲೇ ಪ್ರಭಾಸ್ ಜೊತೆ 'ಸಲಾರ್' ಚಿತ್ರೀಕರಣ ಪ್ರಾರಂಭ ಮಾಡಿರುವ ಪ್ರಶಾಂತ್ ನೀಲ್, ಸಿನಿಮಾದ ಚಿತ್ರೀಕರಣವನ್ನು ಸುಮಾರು 45% ಮುಗಿಸಿದ್ದಾರೆ.

'ಸಲಾರ್' ಸಿನಿಮಾ ಅರ್ಧ ಸಹ ಮುಗಿದಿಲ್ಲ ಅಷ್ಟರಲ್ಲೇ ತೆಲುಗಿನ ಮತ್ತೊಂದು ಸಿನಿಮಾ ಘೋಷಿಸಿದ್ದು, ಈ ಬಾರಿ ಜೂ ಎನ್‌ಟಿಆರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೂ ಎನ್‌ಟಿಆರ್ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ ಮಾಡುವ ಸುದ್ದಿ ಈ ಹಿಂದೆಯೇ ಹರಡಿತ್ತಾದರೂ ಕೆಲವು ದಿನಗಳ ಹಿಂದಷ್ಟೆ ಜೂ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಯ್ತು. ಇದೀಗ ಸಿನಿಮಾಕ್ಕೆ ಹೆಸರು ಸಹ ರಿಜಿಸ್ಟರ್ ಮಾಡಿದ್ದಾರಂತೆ ಪ್ರಶಾಂತ್ ನೀಲ್.

ಪೋಸ್ಟರ್ ಬಿಡುಗಡೆ ಮಾಡಿರುವ ನೀಲ್

ಪೋಸ್ಟರ್ ಬಿಡುಗಡೆ ಮಾಡಿರುವ ನೀಲ್

ಪ್ರಶಾಂತ್ ನೀಲ್ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಕಪ್ಪು ಬಣ್ಣದಲ್ಲಿ ಭಯಾನಕವಾಗಿ ಕಾಣುತ್ತಿದ್ದಾರೆ ಜೂ ಎನ್‌ಟಿಆರ್. ಪೋಸ್ಟರ್ ಬಿಡುಗಡೆ ಮಾಡಿದಂದು ಸಿನಿಮಾಕ್ಕೆ ಹೆಸರಿಟ್ಟಿರಲಿಲ್ಲ. ಪ್ರಸ್ತುತ ಈ ಸಿನಿಮಾವನ್ನು 'ಎನ್‌ಟಿಆರ್ 31' ಎಂದಷ್ಟೆ ಕರೆಯಲಾಗುತ್ತಿದೆ. ಆದರೆ ಈಗ ಪವರ್‌ಫುಲ್ ಹೆಸರೊಂದನ್ನು ಪ್ರಶಾಂತ್ ನೀಲ್ ನಿಶ್ಚಯಿಸಿ ರಿಜಿಸ್ಟರ್ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.

ಶಿವರಾಜ್ ಕುಮಾರ್ ಸಿನಿಮಾದ ಹೆಸರು

ಶಿವರಾಜ್ ಕುಮಾರ್ ಸಿನಿಮಾದ ಹೆಸರು

ಜೂ ಎನ್‌ಟಿಆರ್ ಸಿನಿಮಾಕ್ಕೆ 'ಅಸುರ' ಎಂಬ ಹೆಸರು ರಿಜಿಸ್ಟರ್ ಮಾಡಿಸಿದ್ದಾರೆ ಪ್ರಶಾಂತ್ ನೀಲ್ ಎನ್ನಲಾಗುತ್ತಿದೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್‌ಗೂ 'ಅಸುರ' ಹೆಸರಿಗೂ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಅಲ್ಲದೆ, ಇದೇ ಹೆಸರಿನಲ್ಲಿ ಶಿವರಾಜ್ ಕುಮಾರ್ ಸಿನಿಮಾ ಒಂದನ್ನು ಸಹ ಮಾಡಿದ್ದರು. 2001 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಇದೇ ಹೆಸರು ಇಟ್ಟುಕೊಂಡು ಪ್ರಶಾಂತ್ ನೀಲ್ ಹಾಗೂ ಜೂ ಎನ್‌ಟಿಆರ್ ಸಿನಿಮಾ ಮಾಡುತ್ತಿದ್ದಾರೆ.

'ಅಸುರನ್' ಸಿನಿಮಾದ ರೀಮೇಕ್ ಅಲ್ಲ

'ಅಸುರನ್' ಸಿನಿಮಾದ ರೀಮೇಕ್ ಅಲ್ಲ

'ಅಸುರ' ಹೆಸರು ಹಾಗೂ ಪ್ರಶಾಂತ್ ನೀಲ್ ಬಿಡುಗಡೆ ಮಾಡಿರುವ ಪೋಸ್ಟರ್ ನೋಡಿ ಕೆಲವರು ಇದು ತಮಿಳಿನ 'ಅಸುರನ್' ಸಿನಿಮಾದ ರೀಮೇಕ್ಕಿರಬಹುದಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದು ರೀಮೇಕ್ ಸಿನಿಮಾ ಅಲ್ಲ. ತಮಿಳಿನ 'ಅಸುರನ್' ಸಿನಿಮಾವನ್ನು ತೆಲುಗಿನಲ್ಲಿ ಈಗಾಗಲೇ ವೆಂಕಟೇಶ್ ರೀಮೇಕ್ ಮಾಡಿದ್ದಾರೆ. ಆ ಸಿನಿಮಾಕ್ಕೆ 'ನಾರಪ್ಪ' ಎಂದು ಹೆಸರಿಡಲಾಗಿದೆ. ಆ ಸಿನಿಮಾದಲ್ಲಿ ಕನ್ನಡತಿ ಪ್ರಿಯಾಮಣಿ ಸಹ ನಟಿಸಿದ್ದಾರೆ.

ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟನೆ

ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟನೆ

ಇನ್ನು ನಟ ಜೂ ಎನ್‌ಟಿಆರ್ ಪ್ರಸ್ತುತ ತಮ್ಮ ಮುವತ್ತನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್‌ಟಿಆರ್ ನಟನೆಯ ಮೂವತ್ತನೇಯ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿದ್ದು, ಸಮುದ್ರದ ಮಧ್ಯೆ ರಕ್ತ ಮೆತ್ತಿದ ಮಚ್ಚು ಹಿಡಿದು ನಿಂತ ಎನ್‌ಟಿಆರ್ ಚಿತ್ರ ಪೋಸ್ಟರ್‌ನಲ್ಲಿದೆ. ಈ ಸಿನಿಮಾದ ಚಿತ್ರೀಕರಣದ ಬಳಿಕ ನೀಲ್‌ ಜೊತೆ ಸಿನಿಮಾ ಮಾಡಲಿದ್ದಾರೆ ಜೂ ಎನ್‌ಟಿಆರ್.

More from Filmibeat

English summary
Jr Ntr Prashanth Neel movie named as Asura. Gossip spreading that Prashanth Neel registered Asura name for the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X