ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ ಎರಡನೇ ಮದುವೆ?
ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ ಸುತ್ತ ಈ ನಡುವೆ ಹಲವು ವಿವಾದಗಳು, ಕೆಲವು ಆಸಕ್ತಿಕರ ಸಂಗತಿಗಳು ಕೇಳಿಬರುತ್ತಿವೆ. ಇದೀಗ ತಾಜಾ ಸಮಾಚಾರ ಏನೆಂದರೆ ಜ್ವಾಲಾ ಅವರು ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಹಿಂದೆ ಜ್ವಾಲಾ ಅವರಿಗೆ ತನ್ನ ಸಹ ಆಟಗಾರ ಚೇತನ್ ಆನಂದ್ ಜೊತೆ ಮದುವೆಯಾಗಿ ವಿಚ್ಛೇದನವೂ ಆಗಿದೆ. ಶೀಘ್ರದಲ್ಲೇ ಮತ್ತೆ ಹಸೆಮಣೆ ಏರುವ ಸಿದ್ಧತೆಯಲ್ಲಿ ಜ್ವಾಲಾ ಇದ್ದಾರೆ ಎನ್ನುತ್ತವೆ ಮೂಲಗಳು. ಅವರು ಇಷ್ಟಕ್ಕೂ ಮದುವೆಯಾಗುತ್ತಿರುವ ಗಂಡು ತೆಲುಗು ಚಿತ್ರರಂಗದ ನಟ ಹರ್ಷವರ್ಧನ್ ರಾಣೆ.

ಇತ್ತೀಚೆಗೆ ಟಿವಿ ವಾಹಿನಿಯಲ್ಲಿ ಈ ಬಗ್ಗೆ ಜ್ವಾಲಾ ಅವರನ್ನು ನೇರವಾಗಿ ಕೇಳಲಾಯಿತು. ಈ ಬಗ್ಗೆ ಉತ್ತರಿಸಿದ ಜ್ವಾಲಾ, ತಮ್ಮಿಬ್ಬರ ನಡುವೆ ಯಾವ ರೀತಿಯ ಸಂಬಂಧ ಇದೆ ಎಂಬುದು ನಮ್ಮ ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಯಾರಿಗೂ ಹೇಳುವ ಅವಶ್ಯಕತೆ ಇಲ್ಲ ಎಂದು ಸ್ವಲ್ಪ ನಾಚಿಕೆಯಿಂದಲೇ ಹೇಳಿದ್ದಾರೆ.
ಈ ಘಟನೆಗಳ ಹಿನ್ನೆಲೆಯಲ್ಲಿ ಇಬ್ಬರೂ ಮದುವೆಯಾಗುವುದು ಗ್ಯಾರಂಟಿ ಎಂಬ ಸುದ್ದಿ ಇದೆ. ಸದ್ಯಕ್ಕೆ ತನ್ನ ಗಮನವೆಲ್ಲ ಬ್ಯಾಡ್ಮಿಂಟನ್ ಮೇಲೆ. ಮದುವೆಯಾಗುವುದಾಗಿ ತಿಳಿಸಿದ್ದಾರೆ. ಆದರೆ ಯಾರನ್ನು ಕೈಹಿಡಿಯುತ್ತಿದ್ದಾರೆ ಎಂಬ ಬಗ್ಗೆ ಮಾತ್ರ ಬಾಯಿ ಬಿಡುತ್ತಿಲ್ಲ.


Click it and Unblock the Notifications











