»   » ತಮಿಳು ಸ್ಟಾರ್ ವಿಜಯ್ ಹಿಂದೆ ಬಿದ್ದ ಗಾಡ್ ಫಾದರ್ ಮಂಜು

ತಮಿಳು ಸ್ಟಾರ್ ವಿಜಯ್ ಹಿಂದೆ ಬಿದ್ದ ಗಾಡ್ ಫಾದರ್ ಮಂಜು

Posted By:
Subscribe to Filmibeat Kannada
Vijay K Manju
ಕೆ ಮಂಜು ನಿರ್ಮಾಣದ 'ಗಾಡ್ ಫಾದರ್' ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ನಿರ್ಮಾಣ ಮಾಡಿ ವಿತರಕ ಪ್ರಸಾದ್ ಕೈಗೆ ತಮ್ಮ ಗಾಡ್ ಫಾದರ್ ಚಿತ್ರವನ್ನು ಕೊಟ್ಟಿರುವ ನಿರ್ಮಾಪಕ ಕೆ ಮಂಜು ಈಗ ನಿರಾಳವಾಗಿದ್ದಾರೆ. ಸೂಪರ್ ಸ್ಟಾರ್ ಉಪೇಂದ್ರ ನಟನೆಯ ಗಾಡ್ ಫಾದರ್ 'ಬಾಕ್ಸ್ ಆಫೀಸ್'ನಲ್ಲಿ ಸದ್ದು ಮಾಡುತ್ತಿದ್ದರೆ ಅದರ ನಿರ್ಮಾಪಕ ತಮಿಳು ನಟ ವಿಜಯ್ ಸಿನಿಮಾ ಮಾಡಲು ಓಡಾಡುತ್ತಿರುವ ಸುದ್ದಿ ಬಂದಿದೆ.

ಮಂಜು ನಿರ್ಮಾಣದ ಗಾಡ್ ಫಾದರ್ ಚಿತ್ರವು ಮೊದಲ ವಾರದಲ್ಲಿ ಉತ್ತಮ ಎನ್ನಬಹುದಾದ ರು. 4.5 ಕೋಟಿ ಗಳಿಸಿದೆ. ಎರಡು ವಾರಗಳಲ್ಲಿ ಒಟ್ಟೂ ರು. 7 ಕೋಟಿ ಗಳಿಸಿದೆ ಎಂದು ನಿರ್ಮಾಪಕ ಕೆ ಮಂಜು ತಿಳಿಸಿದ್ದಾರೆ. ಆದರೆ ಚಿತ್ರವನ್ನು ತೆಗೆದುಕೊಂಡಿರುವ ಪ್ರಸಾದ್ ಕಡೆಯಿಂದ ಈ ವಿಷಯ ಇನ್ನಷ್ಟೇ ಪಕ್ಕಾ ಆಗಬೇಕಿದೆ. ಒಟ್ಟಿನಲ್ಲಿ ಗಾಡ್ ಫಾದರ್ ಯಶಸ್ವಿಯಾಗಿ ಓಡುತ್ತಿರುವುದಂತೂ ಸತ್ಯ.

ಈ ಸಂದರ್ಭದಲ್ಲಿ ಕೆ ಮಂಜು ತಮಿಳು ನಟ ವಿಜಯ್ ಹಿಂದೆ ಬಿದ್ದಿದ್ದಾರೆ. ಕೆ ಮಂಜುವಿಗೂ ತಮಿಳು ನಟ ವಿಜಯ್ ಗೂ ಈ ಹಿಂದೆಯೇ ಭಾರಿ ಬಾಂಧವ್ಯವಿದೆ. ಈ ಹಿಂದೆ ಬಿಡುಗಡೆಯಾಗಿರುವ ವಿಜಯ್ 'ವೇಲಾಯುಧಂ' ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಇದೇ ಮಂಜು ತೆಗೆದುಕೊಂಡಿದ್ದರು. ಆಗ ವಿಜಯ್ ಮಂಜುರ ಜೊತೆಯಲ್ಲಿ ಇಡೀ ಬೆಂಗಳೂರು ಸಂಚರಿಸಿದ್ದರು. ಹೀಗಾಗಿ ಮಂಜು ಈಗ ವಿಜಯ್ ನಾಯಕತ್ವದ ತಮಿಳು ಸಿನಿಮಾ ಮಾಡಲು ಯೋಚಿಸಿ ಕಾರ್ಯೋನ್ಮುಖರಾಗಿದ್ದಾರೆ. 

ಅಷ್ಟೇ ಅಲ್ಲ, ಸುದ್ದಿ ಮೂಲಗಳ ಪ್ರಕಾರ ಕೆ ಮಂಜು ತಮಿಳು ಚಿತ್ರಕ್ಕೆ ವಿಜಯ್ ನಾಯಕರಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ವಿಜಯ್ ಚಿತ್ರ ನಿರ್ಮಾಣದ ಮೂಲಕ ಕನ್ನಡ ಚಿತ್ರಗಳ ನಿರ್ಮಾಪಕ ಮಂಜು, ನೆರೆಯ ತಮಿಳು ಚಿತ್ರಂಗಕ್ಕೂ ಕಾಲಿಡುವುದು ಪಕ್ಕಾ ಆದಂತಾಗಿದೆ. ಸದ್ಯಕ್ಕೆ ಕನ್ನಡದಲ್ಲಿ ಮಂಜು ನಿರ್ಮಾಣದ ಗಾಡ್ ಫಾದರ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಜನಿಕಾಂತ್ ಚಿತ್ರೀಕರಣ ಮುಗಿಸಿದೆ. ರಾಗಿಣಿ ಐಪಿಎಸ್ ಚಿತ್ರೀಕರಣ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)

English summary
Kannada film Producer K Manju to produces Tamil Movie soon. Tamil Star Vijay will be the Hero. as news sources are revealed. At present, K Manju produced Godfather Kannada movie is screening Successfully. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada