ಕಿಸ್ಸಿಂಗು, ಬಿಕಿನಿಗೆ ಓಕೆ ಎಂದ ಲಕ್ಸ್ ಸುಂದರಿ ಕಾಜಲ್
ಈಗ ಈಕೆ ಇವೆರಡೂ ಓಕೆ ಎಂದಿದ್ದಾರೆ. ಅಂದರೆ ಬಿಕಿನಿ ತೊಡಕ್ಕೂ ರೆಡಿ ಕಿಸ್ಸಿಗೂ ಸೈ ಎನ್ನುತ್ತಿದ್ದಾರೆ. ಚಿತ್ರಕತೆ ಇವೆರಡನ್ನೂ ಬಯಸುವುದಾದರೆ ತಾವು ತುಟಿ ಕೊಡಲು ಬಿಕಿನಿ ತೊಡಲು ಸಿದ್ಧ ಎಂದಿದ್ದಾರೆ. ಆದರೆ ಚಿತ್ರಕತೆ ಮಾತ್ರ ಪಕ್ಕಾ ಬಿಕಿನಿ ಬಯಸಬೇಕಂತೆ.
ಬಿಕಿನಿ ತೊಡುತ್ತೇನೆ, ಲಿಪ್ ಲಾಕ್ ಚುಂಬನ ಸನ್ನಿವೇಶದಲ್ಲೂ ಅಭಿನಯಿಸುತ್ತೇನೆ. ಆದರೆ ಸೌಂದರ್ಯದ ಗಡಿ ದಾಟಲ್ಲ, ಅಶ್ಲೀಲತೆಯ ಎಲ್ಲೆ ಮೀರಲ್ಲ ಎಂಬ ಚೌಕಟ್ಟನ್ನು ಹಾಕಿಕೊಂಡಿದ್ದಾರಂತೆ. ಸದ್ಯಕ್ಕೆ ಈಕೆ ತೆಲುಗು, ತಮಿಳು ಮಿಂಚುತ್ತಿದ್ದಾರೆ. ಈ ಹಿಂದೊಮ್ಮೆ ಕನ್ನಡಕ್ಕೂ ಬರುವ ಸುದ್ದಿ ಇತ್ತು.
ಈ ಹಿಂದೊಮ್ಮೆ ಕಾಜಲ್ ಅಗರವಾಲ್ ಪುರುಷರ ನಿಯತಕಾಲಿಕೆ ಎಫ್ಎಚ್ ಎಂಗಾಗಿ ಕಾಮೋತ್ತೇಜಕ ಫೋಟೋಗಳಲ್ಲಿ ದರ್ಶನ ನೀಡಿದ್ದರು. ಬಳಿಕ ಅಯ್ಯೋ ನಾನು ಹಂಗೆ ಮಾಡೇ ಇಲ್ಲ. ಯಾರದೋ ದೇಹಕ್ಕೆ ನನ್ನ ತಲೆ ಅಂಟಿಸಿದ್ದಾರೆ ಎಂದು ಕಾಜಲ್ ಸಿಡಿಮಿಡಿಗೊಂಡಿದ್ದರು.
ಈ ಹಿಂದೆ ಕಾಜಲ್ ಅಗರವಾಲ್ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಆ ಸುದ್ದಿ ನಿಜವಾಗುವಷ್ಟರಲ್ಲಿ ಈಕೆ ಬಾಲಿವುಡ್‌ಗೆ ಹಾರಿದ್ದಾರೆ. 'ಎಕೆ 97' ಮತ್ತು 'ತಥಾಸ್ತು' ಎಂಬ ಕನ್ನಡ ಚಿತ್ರಗಳಲ್ಲಿ ಕಾಜಲ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇನ್ನೂ ಜೀವಂತವಾಗಿದೆ. (ಏಜೆನ್ಸೀಸ್)


Click it and Unblock the Notifications












