ಬಾಲಿವುಡ್ ಬ್ಯೂಟಿ ಅಲ್ಲ, 'ಪುಷ್ಪ'- 2 ಐಟಂ ಸಾಂಗ್‌ನಲ್ಲಿ ಕುಣಿಯೋದು ಆ 'ಲೋಕಲ್' ಹುಡುಗಿ?
ಸೂಪರ್ ಹಿಟ್ 'ಪುಷ್ಪ' ಸೀಕ್ವೆಲ್‌ಗೆ ಭರ್ಜರಿ ತಯಾರಿ ನಡೀತಿದೆ. ಈಗಾಗಲೇ ಸಿನಿಮಾ ಮುಹೂರ್ತ ಕೂಡ ನೆರವೇರಿದ್ದು ಮುಂದಿನ ವಾರವೇ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ. ಈ ನಡುವೆ ಚಿತ್ರದ ಐಟಂ ಸಾಂಗ್‌ನಲ್ಲಿ ಕುಣಿಯೋಕೆ ಮತ್ತೊಬ್ಬ ನಟಿಯ ಹೆಸರು ಕೇಳಿಬಂದಿದೆ. ಆಕೆ ಬಾಲಿವುಡ್ ಬ್ಯೂಟಿ ಅಲ್ಲ 'ಪಕ್ಕಾ ಲೋಕಲ್' ಹುಡುಗಿ ಎನ್ನಲಾಗ್ತಿದೆ.
ಸುಕುಮಾರ್ ನಿರ್ದೇಶನದ 'ಪುಷ್ಪ' ದಿ ರೈಸ್ ಚಿತ್ರದಲ್ಲಿ ಸಮಂತಾ ಐಟಂ ಸಾಂಗ್‌ಗೆ ಕುಣಿದು ರಂಗೇರಿಸಿದ್ದರು. ಇಂದಿಗೂ 'ಹೂಂ ಅಂಟಾವ' ಸಾಂಗ್ ಕ್ರೇಜ್ ಕಮ್ಮಿ ಆಗಿಲ್ಲ. ನಾಗಚೈತನ್ಯಾ ಡೈವೋರ್ಸ್ ಕೊಟ್ಟು ದೂರಾದ ಕೆಲವೇ ದಿನಗಳಲ್ಲಿ ಸ್ಯಾಮ್ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಡ್ಯಾನ್ಸ್ ಮಾಡಿ ಹುಬ್ಬೇರಿಸಿದ್ದರು. ದೇವಿಶ್ರೀ ಪ್ರಸಾದ್ ಟ್ಯೂನ್, ಮಂಗ್ಲಿ ಸಹೋದರಿ ಇಂದ್ರಾವತಿ ಚೌಹಾಣ್ ವಾಯ್ಸ್‌ನಲ್ಲಿ ಸಾಂಗ್ ಕೊಟ್ಟ ಕಿಕ್ ಅಷ್ಟಿಷ್ಟಲ್ಲ. ಗಣೇಶ್ ಆಚಾರ್ಯ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಮಂತಾ ಸ್ಟೆಪ್ಸ್ ಧೂಳೆಬ್ಬಿಸಿತ್ತು.

'ಪುಷ್ಪ' ಹೇಳಿಕೇಳಿ ಮಾಸ್ ಮಸಾಲಾ ಸಿನಿಮಾ. ಇದರ ಸೀಕ್ವೆಲ್ ಕೂಡ ಅಷ್ಟೇ ಮಜವಾಗಿ ಕಟ್ಟಿಕೊಡಲಾಗ್ತಿದೆ. ಅದಕ್ಕೆ ತಕ್ಕಂತೆ ಈ ಚಿತ್ರದಲ್ಲೂ ಒಂದು ಐಟಂ ಸಾಂಗ್ ಪ್ಲ್ಯಾನ್ ಮಾಡ್ತಿದೆ ಚಿತ್ರತಂಡ. ಸ್ಪೆಷಲ್ ಸಾಂಗ್ ಕಂಪೋಸ್ ಮಾಡೋದು ಸರಿ. ಡ್ಯಾನ್ಸ್ ಮಾಡೋದು ಯಾರು ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ. ಈ ಹಿಂದಿ ಬಾಲಿವುಡ್ ನಟಿಯರು ಡ್ಯಾನ್ಸ್ ಮಾಡುತ್ತಾರೆ ಎನ್ನುವು ಗುಸುಗುಸು ಕೇಳಿಬರ್ತಿತ್ತು. ಆದರೆ ಈಗ ಕಾಜಲ್ ಅಗರ್‌ವಾಲ್ ಹೆಸರು ಚಾಲ್ತಿಗೆ ಬಂದಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.
4 ತಿಂಗಳ ಹಿಂದೆಯಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದ ಕಾಜಲ್ ಅಗರ್‌ವಾಲ್ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ನಟಿ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಶಂಕರ್ ನಿರ್ದೇಶನದ 'ಇಂಡಿಯನ್- 2' ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ನಟಿಸ್ತಿದ್ದಾರೆ. ಪಾತ್ರಕ್ಕಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಯುತ್ತಿದ್ದಾರೆ. 'ಪುಷ್ಪ'- 2 ಚಿತ್ರದ ಐಟಂ ಸಾಂಗ್‌ಗೆ ಮಿತ್ರಾವಿಂದ ಹೆಜ್ಜೆ ಹಾಕ್ತಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರ್ತಿದೆ. ಈ ಹಿಂದೆ 'ಜನತಾ ಗ್ಯಾರೇಜ್' ಚಿತ್ರದಲ್ಲಿ 'ನೇನು ಪಕ್ಕಾ ಲೋಕಲ್' ಎಂದು ಡ್ಯಾನ್ಸಿಂಗ್ ನಂಬರ್‌ಗೆ ಕುಣಿದಿದ್ದರು.

ಕಾಜಲ್ ಅಗರ್‌ವಾಲ್ ಅದ್ಭುತ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಗ್ಲಾಮರ್ ಡಾಲ್ ಆಗಿ ಮಾತ್ರ ಕಾಣಿಸಿಕೊಳ್ಳದೇ ಒಳ್ಳೆ ಸ್ಕೋಪ್ ಇರುವಂತಹ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ. 'ಜನತಾ ಗ್ಯಾರೇಜ್' ಚಿತ್ರದ ಐಟಂ ಸಾಂಗ್‌ಗೆ ಕುಣಿತಾರೆ ಎಂದು ಗೊತ್ತಾದಾಗ ಅಭಿಮಾನಿಗಳು ಅಚ್ಚರಿಗೊಂಡಿದ್ದರು. 'ಹೂಂ ಅಂಟಾವಾ' ಸಾಂಗ್ ಸಮಂತಾಗೆ ಯಾವ ಪಾಟಿ ಕ್ರೇಜ್ ತಂದುಕೊಡ್ತು ಎನ್ನುವುದು ಗೊತ್ತೇಯಿದೆ. ಕಾಜಲ್ ಕೂಡ ಮತ್ತೆ ಐಟಂ ಗರ್ಲ್ ಆಗೋಕೆ ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.


Click it and Unblock the Notifications











