ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ್ರಾ ಕಂಗನಾ ರಣಾವತ್ ? ಕ್ವೀನ್ ಬೆರಳಲ್ಲಿ ವಜ್ರದ ಉಂಗುರ
ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು.
ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ.

ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಇವರ ಸೋಶಿಯಲ್ ಮೀಡಿಯಾ ಮೇಲೆ ಒಂದು ವರ್ಗ ನಿಗಾ ವಹಿಸಿರುತ್ತೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಸದ್ಯ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಮತ್ತು ಚರ್ಚೆಗೀಡಾಗುತ್ತಿರುವ ಕಂಗನಾ ರಣಾವತ್ ಅವರ ನಿಶ್ಚಿತಾರ್ಥದ ಸುದ್ದಿ.
ಹೌದು, ಅಸಲಿಗೆ ಕಂಗನಾ ರಣಾವತ್ ಇತ್ತೀಚೆಗೆ ''ನ್ಯೂಸ್ 18 ರೈಸಿಂಗ್ ಭಾರತ್ ಸಮಿಟ್ 2026'' ಭಾಗವಹಿಸಿದ್ದರು. ಕೆಂಪು ಮತ್ತು ಹಳದಿ ಬಣ್ಣದ ಗುಜರಾತಿ ಪಟೋಲಾ ಸೀರೆಯಲ್ಲಿ ಮಿಂಚಿದ್ದರು. ಅವರ ರಾಜಕೀಯ ಜೀವನ ಮತ್ತು ಮುಂಬರುವ ಚಿತ್ರಗಳ ಕುರಿತು ಚರ್ಚೆಯನ್ನು ಮಾಡಲಾಯ್ತಾದರೂ ಈ ಸಮಯದಲ್ಲಿ ಹಲವರ ಕಣ್ಣು ಬಿದ್ದಿದ್ದು ಮಾತ್ರ ಅವರ ಎಡಗೈ ಕೈಬೆರಳಿನಲ್ಲಿ ಮಿನುಗುತ್ತಿದ್ದ ವಜ್ರದ ಮೇಲೆ.
ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲು ಇಷ್ಟೇ ಸಾಕಿತ್ತು. ಸದ್ಯ ಕಂಗನಾ ರಣಾವತ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿರಬಹುದಾ..? ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ಕೈ ಹಿಡಿಯುವ ಹುಡುಗ ಗುಜರಾತಿಯೇ ಇರಬೇಕು ಎಂದು ಅನುಮಾನ ವ್ಯಕ್ತಪಡಿಸಿರುವ ಒಬ್ಬರು, ಯಾರು ಅಂತ ಬಹುಬೇಗನೇ ಘೋಷಣೆ ಮಾಡಿಬಿಡು ತಾಯಿ ಎಂದು ಕಂಗನಾ ಅವರಲ್ಲಿ ಕೇಳಿದ್ದಾರೆ. ಮತ್ತೊಬ್ಬರು ನಿಜಕ್ಕೂ ಕಂಗನಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಹೇಗೆ..? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಹಾಗಂಥ ಎಲ್ಲರಿಗೂ ಈ ಅನುಮಾನ ಇಲ್ಲ. ಕೆಲವರು ಕಂಗನಾಗೆ ಬೇರೆ ಯಾರು ವಜ್ರದ ಉಂಗುರ ಕೊಡಬೇಕಿಲ್ಲ. ಅವರು ಸ್ವತಃ ಖರೀದಿ ಮಾಡಬಹುದು. ಆ ಶಕ್ತಿ ಅವರಿಗಿದೆ ಎಂಬ ವಾದವನ್ನು ಕೆಲವರು ಮಾಡುತ್ತಿದ್ಧಾರೆ. ಈಗೀಗ ಸೆಲೆಬ್ರೆಟಿಗಳು ವಜ್ರದ ಉಂಗುರ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ ಎನ್ನುತ್ತಿದ್ದಾರೆ. ಸದ್ಯ ಈ ವಿಚಾರ ರೆಡ್ಡಿಟ್‌ನಲ್ಲಿ ತೀವೃವಾದ ಚರ್ಚೆಗೆ ನಾಂದಿಯನ್ನು ಹಾಡಿದೆ.
ಅಂದ್ಹಾಗೇ ಈ ಹಿಂದೆ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಷ್ಮಿತಾ ಸೇನ್ ಬೆರಳಿನಲ್ಲಿ ಕೂಡ ಇದೇ ರೀತಿ ವಜ್ರದ ಹೊಳಪು ಕಂಡು ಬಂದಿತ್ತು. ಮಲ್ಲಿಕಾ ಶೆರಾವತ್ ಅವರ ಬೆರಳಿನಲ್ಲಿಯೂ ಇದ್ದ ವಜ್ರದ ಉಂಗುರ ಹಲವರ ಕಣ್ಣು ಕುಕ್ಕಿತ್ತು. ಆಗ ಇಬ್ಬರು ಸ್ಪಷ್ಟನೆಯನ್ನು ನೀಡಿದ್ದರು. ವಜ್ರದ ಉಂಗುರವನ್ನು ನಾವು ಖರೀದಿ ಮಾಡಬಹುದು, ಆ ಶಕ್ತಿ ನಮಗೆ ಇದೆ ಎಂದು ಹೇಳಿದ್ದರು. ವಜ್ರದ ಉಂಗುರ ಧರಿಸಿದ ಮಾತ್ರ ನಿಶ್ಚಿತಾರ್ಥವಾಗಿದೆ ಎಂದಲ್ಲ ಎಂದು ಹೇಳಿದ್ದರು.

ಸುಷ್ಮಿತಾ ಸೇನ್ ಮತ್ತು ಮಲ್ಲಿಕಾ ಶೆರಾವತ್ ಅವರಂತೆಯೇ ಬಾಲಿವುಡ್‌ನ ಕ್ವೀನ್ ಕಂಗನಾ ವಜ್ರದ ಉಂಗುರ ಖರೀದಿಸಿದ್ದಾರಾ..? ಅಥವಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ..? ಗೊತ್ತಿಲ್ಲ. ಆದರೆ ಈ ಕುರಿತು ಚರ್ಚೆಯಂತೂ ಸದ್ಯ ಜೋರಾಗಿ ನಡೆಯುತ್ತಿದೆ. ಸತ್ಯಾಂಶವೇನು..? ಎನ್ನುವುದನ್ನು ಕಂಗನಾ ರಣಾವತ್ ಹೇಳ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ವಜ್ರದ ಉಂಗುರದ ಕಥೆ ಕೇಳಲು ಕಂಗನಾ ಅವರ ಅಭಿಮಾನಿ ಬಳಗ ಕೂಡ ಕಾತುರವಾಗಿದೆ.
Kangana Ranaut was seen wearing a ring is she engaged
byu/SaltWillingness6647 inBollyBlindsNGossip


Click it and Unblock the Notifications











