For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್ ಪೀಸ್' ಯಶ್ ಗೆ ಡೆಡ್ಲಿ ಆದಿತ್ಯ ವಿಲನ್.?

  By Harshitha
  |

  ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಹನ್ನೊಂದು ವರ್ಷಗಳಾದ್ರೂ, ನಟ ಆದಿತ್ಯಗೆ ಒಂದೊಳ್ಳೆ ಬ್ರೇಕ್ ಸಿಗ್ಲಿಲ್ಲ. 'ಡೆಡ್ಲಿ ಸೋಮ' ಚಿತ್ರವೊಂದನ್ನ ಬಿಟ್ಟರೆ, ನಟ ಆದಿತ್ಯ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಕಡಿಮೆ.

  ಸಾಲು ಸಾಲು ಸೋಲಿನ ನಡುವೆ ಆದಿತ್ಯ ನಟನೆಯ, ಅಪ್ಪ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ರೆಬೆಲ್' ಸಿನಿಮಾ ರಿಲೀಸ್ ಆಯ್ತೋ, ಇಲ್ವೋ..ಗೊತ್ತೇ ಆಗ್ಲಿಲ್ಲ. ಹೀಗಿರುವಾಗಲೇ, ಸೈಲೆಂಟ್ ಆಗಿ ಕಾಲಿವುಡ್ ಕದ ತಟ್ಟಿ ಬಂದ್ರು ನಟ ಆದಿತ್ಯ.

  ತಮಿಳಿನಲ್ಲಿ ವಿಲನ್ ಆಗಿ ಗುರುತಿಸಿಕೊಂಡಿರುವ ಆದಿತ್ಯ, ಇದೀಗ ಕನ್ನಡದಲ್ಲೂ ಖೇಡಿ ಆಗಿ ಮಿಂಚಲಿದ್ದಾರಂತೆ. ಮೂಲಗಳ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಆದಿತ್ಯ ವಿಲನ್ ಆಗಿ ಅಭಿನಯಿಸಲಿದ್ದಾರೆ. ಅವರ ಪಾತ್ರದ ಡೀಟೈಲ್ಸ್ ಇನ್ನಷ್ಟೆ ಹೊರಬರಬೇಕಿದೆ.[ತಮಿಳಿನಲ್ಲಿ ಡೆಡ್ಲಿ ಆದಿತ್ಯನ ಹೊಸ ಅವತಾರ]

  ಅಲ್ಲಿಗೆ, 'ಮಾಸ್ಟರ್ ಪೀಸ್'ನಲ್ಲಿ ಯಶ್-ಆದಿತ್ಯ ಜುಗಲ್ಬಂದಿ ಮಸ್ತ್ ಆಗಿರುವುದರಲ್ಲಿ ಅನುಮಾನ ಬೇಡ. 'ಮಾಸ್ಟರ್ ಪೀಸ್' ಚಿತ್ರಕ್ಕೆ ಮಂಜು ಮಾಂಡವ್ಯ ನಿರ್ದೇಶನ ಮಾಡುತ್ತಿದ್ದಾರೆ. ಯಶ್ ಜೊತೆ ಶಾನ್ವಿ ಶ್ರೀವತ್ಸ ಜೋಡಿಯಾಗಿ ನಟಿಸುತ್ತಿದ್ದಾರೆ.

  English summary
  According to the latest gossip, Kannada Actor Aditya will be sharing onscreen space with Yash in upcoming Kannada Movie 'Masterpiece' and he has been chosen to play a baddie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X