»   » ಮತ್ತೆ ಲಿಪ್ ಲಾಕ್ ಮಾಡಿ ಸಿಕ್ಕಿ ಬಿದ್ದ ಕರಿಯ

ಮತ್ತೆ ಲಿಪ್ ಲಾಕ್ ಮಾಡಿ ಸಿಕ್ಕಿ ಬಿದ್ದ ಕರಿಯ

By: ಸೋನು
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಬ್ಲ್ಯಾಕ್ ಕೋಬ್ರಾ ಅಂತಾನೇ ಹೆಸರು ಗಳಿಸಿಕೊಂಡಿರುವ ದುನಿಯಾ ವಿಜಯ್ ಸದ್ಯಕ್ಕೆ ಸಿಲ್ವರ್ ಸ್ಕ್ರೀನ್ ನಲ್ಲಿ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿರುವ ನಟ. ಆದರೆ ಇದೀಗ ಅದೇ ಕರಿಯನ ಕಡೆಯಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ.

ವಿಷಯ ಏನಪ್ಪಾ ಅಂದ್ರೆ ದುನಿಯಾ ವಿಜಯ್ ಅವರು ಇದೀಗ ಲಿಪ್ ಲಾಕ್ ಮಾಡುವ ಮೂಲಕ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡ್ತಾ ಇದ್ದಾರೆ. ವಿಜಯ್ ಹೊಸ ಚಿತ್ರ ಆರ್.ಎಕ್ಸ್ ಸೂರಿ ಚಿತ್ರದಲ್ಲಿ ನಟಿ ಆಕಾಂಕ್ಷ ಜೊತೆ ಮುತ್ತಿನ ವಿಷಯದಲ್ಲಿ ಸುದ್ದಿಯಾಗಿದ್ದಾರೆ.[''ಥೂ....'ದನ ಕಾಯೋ' ದುನಿಯಾ ವಿಜಿನ ತಂದು'']

Kannada actor Duniya Vijay's hot kissing photo leaked

ಸದ್ಯಕ್ಕೆ ವಿಜಯ್ ಹಾಗೂ ಆಕಾಂಕ್ಷ ಲಿಪ್ ಲಾಕ್ ಪೋಟೋಗಳು ಸೋರಿಕೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಭಾರಿ ಅಲೆ ಎಬ್ಬಿಸುತ್ತಿದೆ. ಈಗಾಗಲೇ ಸೋರಿಕೆಯಾಗಿರುವ ಫೋಟೋಗಳ ಕುರಿತು ಗಾಂಧಿನಗರದಲ್ಲಿ ನಾನಾ ಕತೆಗಳು ಹುಟ್ಟಿಕೊಳ್ಳುತ್ತಿದೆ.['RX ಸೂರಿ' ಟ್ರೈಲರ್ ; ಲಾಂಗು-ಮಚ್ಚುಗಳ ಅಬ್ಬರ]

ದುನಿಯಾ ವಿಜಯ್ ಈ ಮೊದಲು 'ಅವ್ವ' ಚಿತ್ರದ ಬಿಡುಗಡೆಯ ಸಂದರ್ಭದಲ್ಲೂ ಇಂತಹದೇ ಸುದ್ದಿ ಮಾಡಿದ್ದರು, ಇದೀಗ ಮತ್ತೆ ಆರ್.ಎಕ್ಸ್.ಸೂರಿ ಚಿತ್ರದ ಮೂಲಕ ಸುದ್ದಿ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಈ ಚಿತ್ರ 'ಆರ್.ಎಕ್ಸ್.ಸೂರಿ' ಮತ್ತು ಪೆರಿಟಾಲ ರವಿ ನಡುವಿನ ಕಥೆಯಾಗಿದ್ದು, ಜಾಸ್ತಿ ಆಕ್ಷನ್ ಇರಬೇಕು ಆದರೆ ಇಲ್ಲಿ ಲಿಪ್ ಲಾಕ್ ಸೀನ್ ಎಲ್ಲಿಂದ ಬರಬೇಕು ಅನ್ನೋದು ಗಾಂಧಿನಗರದ ಮಂದಿಯ ಪ್ರಶ್ನೆ.

Kannada actor Duniya Vijay's hot kissing photo leaked

ಆದರೆ ಈ ಎಲ್ಲಾ ಅನುಮಾನಗಳಿಗೆ ಉತ್ತರಿಸಲು ವಿಜಯ್ ಮಾತಿಗೆ ಸಿಗದೆ ನಾಪತ್ತೆಯಾಗಿದ್ದಾರೆ. ಯಾವುದೋ ಬೇರೆ ಸಿನೆಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ ಅಂತ ಮಾಹಿತಿ.[ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ರಿಲೀಸ್ಗೆ ರೆಡಿ]

ಈ ಕುರಿತು ನಿರ್ಮಾಪಕರು ಹೇಳುವುದೇನೆಂದರೆ, ಲಿಪ್ ಲಾಕ್ ಬಗ್ಗೆ ಹರಿದಾಡುತ್ತಿರುವ ಸುದ್ದಿ ಕೇವಲ ಕಲ್ಪನೆ ಅಷ್ಟೇ ಬಿಟ್ಟರೆ, ನಾವು ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದೇವೆ ಅದರಲ್ಲಿ ಕಿಸ್ಸಿಂಗ್ ಸೀನ್ ಇದ್ದರೂ ಅದು ಅಷ್ಟೊಂದು ವಲ್ಗರ್ ಏನೂ ಇಲ್ಲ ಟ್ರೈಲರ್ ಸೆನ್ಸಾರ್ ಕೂಡ ಆಗಿದೆ ಎಂದಿದ್ದಾರೆ.

ಏನೋ ಇವರೇ ಹೀಗಂದರೆ ಮತ್ತೆ ಆ ಫೋಟೋ ಎಲ್ಲಿಂದ ಬಂತು ಅನ್ನೋದು ಈಗ ಸ್ಯಾಂಡಲ್ ವುಡ್ ಮಂದಿಗಿರೋ ಪ್ರಶ್ನೆ. ಇದರಲ್ಲಿ ಯಾವುದು ಸುಳ್ಳು ಯಾವುದು ಸತ್ಯ ಅನ್ನೋದು ವಿಜಯ್ ಅವರೇ ಉತ್ತರಿಸಬೇಕಿದೆ ತಪ್ಪಿದರೆ ಇನ್ನೂ ಚಿತ್ರ ತೆರೆ ಕಂಡ ಮೇಲೆ ಗೊತ್ತಾಗಬೇಕಿದೆ.

English summary
Kannada actor Duniya Vijay's hot kissing photo leaked, Duniya Vijay Kissing with Kannada Actress Akanksha in Kannada movie RX Suri. The movie is directed by Sri Jai.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada