»   » ಮತ್ತೆ ನಿರ್ದೇಶನದತ್ತ ಗೋಲ್ಡನ್ ಸ್ಟಾರ್‌ ಗಣೇಶ್ ಚಿತ್ತ

ಮತ್ತೆ ನಿರ್ದೇಶನದತ್ತ ಗೋಲ್ಡನ್ ಸ್ಟಾರ್‌ ಗಣೇಶ್ ಚಿತ್ತ

Posted By:
Subscribe to Filmibeat Kannada

'ಬುಗುರಿ' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ 25 ರನ್ ಬಾರಿಸಿ ಗೋಲ್ಡನ್ ಸ್ಟಾರ್ ಗಣೇಶ್ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿದ್ದಾರೆ. ಕೈಯಲ್ಲಿನ್ನೂ 'ZOOಮ್', 'ಸ್ಟೈಲ್ ಕಿಂಗ್', 'ಪಟಾಕಿ' ಮತ್ತು 'ಮುಂಗಾರು ಮಳೆ-2' ಚಿತ್ರಗಳಿವೆ.

ನಟನೆಯಲ್ಲಿ ಬಿಜಿಯಾಗಿದ್ದರೂ, ಗಣೇಶ್ ಗೆ ನಿರ್ದೇಶನ ಮಾಡುವ ಮನಸ್ಸಾಗಿದೆ. ಉತ್ತಮ ಸ್ಕ್ರಿಪ್ಟ್ ಹುಡುಕಾಟದಲ್ಲಿರುವ ಗಣೇಶ್, ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ದೇಶಿಸುವ ತವಕದಲ್ಲಿದ್ದಾರೆ. [ಗಣೇಶ್ 'ಬುಗುರಿ' ಆಟ ನೋಡಿ ವಿಮರ್ಶಕರು ಏನಂದ್ರು?]

ganesh

ಹಾಗ್ನೋಡಿದರೆ, ಗಣೇಶ್ ಡೈರೆಕ್ಟರ್ ಕ್ಯಾಪ್ ತೊಟ್ಟು ಬರೋಬ್ಬರಿ 5 ವರ್ಷಗಳಾಗಿವೆ. 'ಕೂಲ್...ಸಖತ್ ಹಾಟ್ ಮಗಾ' ಚಿತ್ರದ ನಂತರ ನಟನೆಯಲ್ಲೇ ಗಣೇಶ್ ತೊಡಗಿಕೊಂಡಿದ್ದರು. [ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?]

ಇದೀಗ ಲಾಂಗ್ ಗ್ಯಾಪ್ ನಂತರ ಉತ್ತಮ ಚಿತ್ರ ನಿರ್ದೇಶಿಸಬೇಕು ಅನ್ನುವ ಆಸೆ ಅವರಿಗಿದೆ. ಆದರೆ, ಅದು ಈಡೇರೋಕೆ ಕನಿಷ್ಟ ಅಂದರೂ ಒಂದು ವರ್ಷ ಬೇಕು. ಈಗಿನ ಎಲ್ಲಾ ಕಮಿಟ್ಮೆಂಟ್ಸ್ ಮುಗಿದ ಬಳಿಕವಷ್ಟೆ ಗಣೇಶ್ ಆಕ್ಷನ್ ಕಟ್ ಹೇಳೋಕೆ ಸಾಧ್ಯ.

English summary
Being a busiest Actor, Golden Star Ganesh is all set to direct a movie after a gap of 5 long years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada