ನಟ ಸುದೀಪ್ ಇನ್ಮುಂದೆ ಹಾಲಿವುಡ್‌ ಹೀರೋ ಆಗಲಿದ್ದಾರೆ!

ಇತ್ತೀಚೆಗೆ ಸಿನಿಮಾ ಟ್ರೆಂಡ್ ಸಂಪೂರ್ಣ ಬದಲಾಗಿದೆ. ಸಿನಿಮಾರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಇದಕ್ಕೆ ಭಾರತೀಯ ಸಿನಿಮಾರಂಗ ಸಾಕ್ಷಿ ಆಗುತ್ತಿದೆ. ಈಗ ಸಿನಿಮಾ ಎನ್ನುವುದು ಒಂದು ಭಾಷೆಗೆ ಮಾತ್ರ ಸೀಮಿತ ಆಗಿಲ್ಲ. ಈಗೇನಿದ್ದರೂ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್. ಸದ್ಯ ಸೆಟ್ಟೇರುತ್ತಲಿರುವ ಸಿನಿಮಾಗಳೆಲ್ಲವೂ ಪ್ಯಾನ್ ಇಂಡಿಯಾ ಸಿನಿಮಾ ಆಗಿಯೇ ಹೊರ ಹೊಮ್ಮುತ್ತಿವೆ.

Recommended Video

KGF 2 ಹಾದಿಯಲ್ಲೇ ಸಾಗ್ತಿದೆ ವಿಕ್ರಾಂತ್ ರೋಣ

ಮೊದಲೆಲ್ಲಾ ಸಿನಿಮಾಗಳು ಒಂದು ಭಾಷೆಯಲ್ಲಿ ತಯಾರಾಗಿ ರಿಲೀಸ್ ಆದ ಬಳಿಕ, ನಂತರ ಬೇರೆ ಭಾಷೆಗೆ ಡಬ್ ಆಗಿ ಕಿರುತೆರೆಯಲ್ಲಿ ತೆರೆ ಕಾಣುತ್ತಿದ್ದವು. ಆದರೆ ಈಗ ಒಟ್ಟಿಗೆ ಭಾರತೀಯ ಹಲವು ಭಾಷೆಗಳಲ್ಲಿ ರಿಲೀಸ್ ಆಗುವ ಮೂಲಕ ಹೆಚ್ಚು ಜನರನ್ನು ತಲುಪುವುದಷ್ಟೇ ಅಲ್ಲ, ಪ್ಯಾನ್‌ ಇಂಡಿಯಾ ಸಿನಿಮಾ ಅಂತಲೂ ಕರೆಸಿಕೊಳ್ಳುತ್ತಿವೆ.

ಅದರಲ್ಲೂ ಸೌತ್ ಸಿನಿಮಾಗಳ ಬಗ್ಗೆ ನಾರ್ತ್‌ನಲ್ಲಿ ಎಷ್ಟರ ಮಟ್ಟಿಗೆ ಕ್ರೇಜ್ ಇದೆ ಎನ್ನುವುದು ಕೂಡ ಈ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದ ಮೇಲೆ ಗೊತ್ತಾಗಿದೆ. 'ಕೆಜಿಎಫ್' ಮತ್ತು 'ಪುಷ್ಪ' ಅಂತಹ ಸಿನಿಮಾಗಳು ಅದನ್ನು ಸಾಬೀತು ಮಾಡಿ ತೋರಿಸಿವೆ. ಈಗ ಪ್ಯಾನ್ ವರ್ಲ್ಡ್‌ನತ್ತ ಸಿನಿಮಾ ಮಂದಿ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾಗಳು ಇಂಗ್ಲಿಷ್‌ನಲ್ಲಿ ತೆರೆ ಕಾಣುವ ಮೂಲಕ ಹಾಲಿವುಡ್‌ ಸಿನಿಮಾ ಲಿಸ್ಟ್ ಕೂಡ ಸೇರಿಕೊಳ್ಳುತ್ತಿವೆ.

ಇಂಗ್ಲಿಷ್‌ಗೆ ಡಬ್ ಆದ 'ವಿಕ್ರಾಂತ್ ರೋಣ'!

ಇಂಗ್ಲಿಷ್‌ಗೆ ಡಬ್ ಆದ 'ವಿಕ್ರಾಂತ್ ರೋಣ'!

ನಟ ಕಿಚ್ಚ ಸುದೀಪ್ ಅಭಿನಯದ ಕನ್ನಡದ 'ವಿಕ್ರಾಂತ್ ರೋಣ' ಸಿನಿಮಾ ಇಂಗ್ಲಿಷ್‌ನಲ್ಲಿ ತೆರೆಕಾಣಲಿದೆ. ಈ ಮೂಲಕ ನಟ ಕಿಚ್ಚ ಸುದೀಪ್ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ದಾಖಲೆಯನ್ನು ಮಾಡಿದ್ದಾರೆ. ಈಗಾಗಲೇ ಸುದೀಪ್‌ ಅವರು ಚಿತ್ರದ ಇಂಗ್ಲೀಷ್ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಹಾಗಾಗಿ ಈ ಚಿತ್ರವನ್ನು ಪ್ಯಾನ್ ವರ್ಲ್ಡ್ ಸಿನಿಮಾ ಅಂತಲೇ ಕರೆಯಲಾಗುತ್ತಿದೆ. ಇಂಗ್ಲಿಷ್‌ನಲ್ಲಿ ಡಬ್ ಮಾಡಿದ್ದರ ಬಗ್ಗೆ ಒಂದು ಸಣ್ಣ ವಿಡಿಯೋವನ್ನು ಕೂಡ ಚಿತ್ರತಂಡ ಹರಿ ಬಿಟ್ಟಿತ್ತು.

ಕಿಚ್ಚನ ಮುಂದಿನ ಚಿತ್ರಗಳು ಇಂಗ್ಲಿಷ್‌ನಲ್ಲೂ ರಿಲೀಸ್!

ಕಿಚ್ಚನ ಮುಂದಿನ ಚಿತ್ರಗಳು ಇಂಗ್ಲಿಷ್‌ನಲ್ಲೂ ರಿಲೀಸ್!

ಸದ್ಯಕ್ಕೆ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರ ಭಾರತೀಯ ಹಲವು ಭಾಷೆಗಳ ಜೊತೆಗೆ, ಇಂಗ್ಲಿಷ್‌ನಲ್ಲೂ ಕೂಡ ತೆರೆಗೆ ಬರ್ತಿದೆ. ಆದರೆ ಇದೊಂದೇ ಸಿನಿಮಾ ಅಲ್ಲಾ, ಕಿಚ್ಚನ ಮುಂದಿನ ಎಲ್ಲಾ ಸಿನಿಮಾಗಳು ಕೂಡ ಪ್ಯಾನ್‌ ಇಂಡಿಯಾ ಜೊತೆಗೆ ಇಂಗ್ಲಿಷ್‌ನಲ್ಲೂ ಕೂಡ ರಿಲೀಸ್ ಆಗಲಿವೆಯಂತೆ. ಹಾಗಾಗಿ ಸುದೀಪ್ ಇಂಡಿಯನ್ ಮಾತ್ರ ಅಲ್ಲ, ಹಾಲಿವುಡ್ ನಟ ಎನಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಲಿದೆ. ಆದರೆ 'ವಿಕ್ರಾಂತ್ ರೋಣ' ಹೇಗೆ ಮೂಡಿ ಬರಲಿದೆ ಎನ್ನುವುದನ್ನು ನೋಡಬೇಕಿದೆ.

'ಬಿಲ್ಲ ರಂಗ ಭಾಷಾ', 'ಅಶ್ವತ್ಥಾಮ' ಚಿತ್ರಗಳು ಇಂಗ್ಲಿಷ್‌ನಲ್ಲಿ ರಿಲೀಸ್!

'ಬಿಲ್ಲ ರಂಗ ಭಾಷಾ', 'ಅಶ್ವತ್ಥಾಮ' ಚಿತ್ರಗಳು ಇಂಗ್ಲಿಷ್‌ನಲ್ಲಿ ರಿಲೀಸ್!

ನಟ ಸುದೀಪ್ ಅಭಿನಯ ಮುಂದಿನ ಚಿತ್ರಗಳು, 'ಬಿಲ್ಲ ರಂಗ ಭಾಷಾ', 'ಅಶ್ವತ್ಥಾಮ'. ಈ ಎರಡೂ ಚಿತ್ರಗಳೂ ಕೂಡ ಇಂಗ್ಲಿಷ್‌ನಲ್ಲಿ ತೆರೆಕಾಣಲಿವೆಯಂತೆ. 'ವಿಕ್ರಾಂತ್ ರೋಣ' ಸಿನಿಮಾ ಮಾಡಿದ್ದ, ಅನುಪ್ ಭಂಡಾರಿ ಈ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸುದೀಪ್ ಮತ್ತು ಇವರ ಕಾಂಬಿನೇಷನ್‌ನ ಸಿನಿಮಾಗಳು ಇಂಗ್ಲಿಷ್‌ನಲ್ಲಿ ರಿಲೀಸ್ ಅಗಲಿವೆಯಂತೆ. ಅಷ್ಟೇ ಅಲ್ಲ ಇನ್ನು ಮುಂದೆ ಕಿಚ್ಚ ಸುದೀಪ್ ಮಾಡುವ ಸಿನಿಮಾಗಳೆಲ್ಲವೂ ಇಂಗ್ಲಿಷ್‌ಗೆ ಡಬ್ ಆಗಲಿವೆಯಂತೆ.

ಥ್ರಿಲ್ಲರ್ ಕಥೆಯ 'ವಿಕ್ರಾಂತ್ ರೋಣ'!

ಥ್ರಿಲ್ಲರ್ ಕಥೆಯ 'ವಿಕ್ರಾಂತ್ ರೋಣ'!

'ವಿಕ್ರಾಂತ್ ರೋಣ' ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ರವಿಶಂಕರ್, ನೀತಾ ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಇನ್ನೂ ಕಲಾವಿದರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿತ್ತು. ಆದರೆ ಕೊರೊನಾ ಮತ್ತು ಲಾಕ್‌ಡೌನ್ ಕಾರಣಕ್ಕೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ಚಿತ್ರ ಯಾವಾಗ ರಿಲೀಸ್ ಆಗುತ್ತೆ ಎನ್ನುವುದನ್ನು ನೋಡಬೇಕು.

More from Filmibeat

English summary
Kannada Actor Kichcha Sudeep Is Become Hollywood Hero, Further All His Movies To Be Release In English Also,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X