For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್ ವಿಲನ್?

  |

  ಮೇ 31 ರಂದು ಪ್ರಿನ್ಸ್ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಚಿತ್ರದ ಅಪ್‌ಡೇಟ್ ನೀಡಲಾಗುತ್ತದೆ, ಬಹುಶಃ ಟೀಸರ್ ರಿಲೀಸ್ ಮಾಡಬಹುದು ಎಂಬ ಸುದ್ದಿ ಚರ್ಚೆಯಲ್ಲಿತ್ತು. ಮಹೇಶ್ ಬಾಬು ತಂದೆ ಲೆಜೆಂಡ್ ಕಲಾವಿದ ಕೃಷ್ಣ ಅವರ ಹುಟ್ಟುಹಬ್ಬದ ವಿಶೇಷವಾಗಿ ಸರ್ಕಾರು ವಾರಿ ಪಾಟ ಚಿತ್ರತಂಡದಿಂದ ಸರ್ಪ್ರೈಸ್ ಸಿಗಲಿದೆ ಎಂದು ನಿರೀಕ್ಷೆ ಇತ್ತು.

  ಕೋವಿಡ್ ಕಾರಣದಿಂದ ಯಾವುದೇ ಅಪ್‌ಡೇಟ್ ಇಲ್ಲ ಎಂದು ಚಿತ್ರತಂಡ ಪ್ರಕಟಣೆ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತು. ಇದೀಗ, ಈ ಚಿತ್ರದ ಕುರಿತು ಭರ್ಜರಿ ಸುದ್ದಿಯೊಂದು ಟಾಕ್‌ನಲ್ಲಿದೆ. ಈ ಸುದ್ದಿ ನಿಜವೇ ಆದರೆ ಪ್ರಿನ್ಸ್ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಾಗಲಿದೆ. ಮುಂದೆ ಓದಿ...

  ಮಹೇಶ್ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ವಿಲನ್?

  ಮಹೇಶ್ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ವಿಲನ್?

  ಸರ್ಕಾರು ವಾರಿ ಪಾಟ ಚಿತ್ರದಲ್ಲಿ ಖಳನಾಯಕ ಪಾತ್ರ ಬಹಳ ಕುತೂಹಲ ಮೂಡಿಸಿದೆ. ಈ ಪಾತ್ರಕ್ಕಾಗಿ ತಮಿಳಿನ ಇಬ್ಬರು ಸ್ಟಾರ್ ನಟರ ಹೆಸರು ಚರ್ಚೆಗೆ ಬಂದಿತ್ತು. ಅದ್ಯಾವುದು ಖಚಿತವಾಗಿಲ್ಲ. ಇದೀಗ, ಕನ್ನಡದ ಸೂಪರ್ ಸ್ಟಾರ್ ಕಲಾವಿದನ ಹೆಸರು ಕೇಳಿ ಬರುತ್ತಿದೆ.

  ಆ ನಟ ನಿರಾಕರಿಸಿದ, ಸಿನಿಮಾ ಮಾಡಿ ಕೈ ಸುಟ್ಟುಕೊಂಡ ಮಹೇಶ್ ಬಾಬುಆ ನಟ ನಿರಾಕರಿಸಿದ, ಸಿನಿಮಾ ಮಾಡಿ ಕೈ ಸುಟ್ಟುಕೊಂಡ ಮಹೇಶ್ ಬಾಬು

  ಪ್ರಿನ್ಸ್ ಎದುರು ಅರ್ಜುನ್ ಸರ್ಜಾ?

  ಪ್ರಿನ್ಸ್ ಎದುರು ಅರ್ಜುನ್ ಸರ್ಜಾ?

  ಮಹೇಶ್ ಬಾಬು ಚಿತ್ರದಲ್ಲಿ ಕನ್ನಡದ ಖ್ಯಾತ ಕಲಾವಿದ ಅರ್ಜುನ್ ಸರ್ಜಾ ವಿಲನ್ ಆಗಬಹುದು ಎಂಬ ಸುದ್ದಿ ಟಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ ಪಾತ್ರದ ಬಗ್ಗೆ ಚರ್ಚೆ ಸಹ ಆಗಿದೆ. ಕಥೆ ಕೇಳಿ ಇಷ್ಟಪಟ್ಟಿರುವ ಸರ್ಜಾ ಅಧಿಕೃತವಾಗಿ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ.

  ಆರ್‌ ಮಾಧವನ್-ಅರವಿಂದ್ ಸ್ವಾಮಿ

  ಆರ್‌ ಮಾಧವನ್-ಅರವಿಂದ್ ಸ್ವಾಮಿ

  ಅರ್ಜುನ್ ಸರ್ಜಾಗೂ ಮುಂಚೆ ಖಳನಾಯಕನ ಪಾತ್ರಕ್ಕೆ ಆರ್ ಮಾಧವನ್ ಮತ್ತು ತಮಿಳಿನ ಮತ್ತೊಬ್ಬ ಖ್ಯಾತ ನಟ ಅರವಿಂದ್ ಸ್ವಾಮಿ ಹೆಸರು ವರದಿಯಾಗಿತ್ತು. ಆಮೇಲೆ ಈ ಹೆಸರು ನಿಜ ಆಗಲಿಲ್ಲ. ಈಗ ಅರ್ಜುನ್ ಸರ್ಜಾ ಹೆಸರು ಮುನ್ನೆಲೆಗೆ ಬಂದಿದೆ.

  ಪ್ರಿನ್ಸ್ ಮಹೇಶ್ ಬಾಬುಗೆ ಆಂಟಿ ಆಗ್ತಾರಾ ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ?ಪ್ರಿನ್ಸ್ ಮಹೇಶ್ ಬಾಬುಗೆ ಆಂಟಿ ಆಗ್ತಾರಾ ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ?

  ಕಾಂಬಿನೇಷನ್ ಸಕ್ಸಸ್ ಆಗುವ ಲೆಕ್ಕಾಚಾರ

  ಕಾಂಬಿನೇಷನ್ ಸಕ್ಸಸ್ ಆಗುವ ಲೆಕ್ಕಾಚಾರ

  ಅರ್ಜುನ್ ಸರ್ಜಾ ಈ ಹಿಂದೆ ಹಲವು ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದೀಗ, ಪ್ರಿನ್ಸ್ ಚಿತ್ರದಲ್ಲಿ ಸರ್ಜಾ ಖಚಿತವಾದರೆ ಬಹುಶಃ ಈ ಕಾಂಬಿನೇಷನ್ ಸಕ್ಸಸ್ ಆಗಬಹುದು ಎಂದು ಇಂಡಸ್ಟ್ರಿ ಮಂದಿಯ ಅಭಿಪ್ರಾಯ.

  Ambareesh ಗೆ 69ನೇ ಹುಟ್ಟುಹಬ್ಬ: ಅಂಬಿಯ ನೆನಪು ಹಂಚಿಕೊಂಡ ದಚ್ಚು,Kichcha | Filmibeat Kannada
  ಪರುಶುರಾಮ್ ನಿರ್ದೇಶನ

  ಪರುಶುರಾಮ್ ನಿರ್ದೇಶನ

  ಅಂದ್ಹಾಗೆ, ಈ ಚಿತ್ರವನ್ನು ಪರುಶುರಾಮ್ ನಿರ್ದೇಶಿಸುತ್ತಿದ್ದಾರೆ. ಮೊಟ್ಟ ಮೊದಲ ಸಲ ಕೀರ್ತಿ ಸುರೇಶ್ ಪ್ರಿನ್ಸ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು 2022ರ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರುವ ಸಿದ್ದತೆಯಲ್ಲಿದೆ ಚಿತ್ರತಂಡ.

  English summary
  Action King Arjun Sarja might play main villain role in Mahesh babu's Sarkaru vaari paata film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X