»   » ವಾವ್! ಶಿವಣ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸ್ತಾರಂತೆ!

ವಾವ್! ಶಿವಣ್ಣ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸ್ತಾರಂತೆ!

Posted By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನ ಟಾಪ್ ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ಶಿವಣ್ಣ ಅವರು ಒಂದಾಗ್ತಾ ಇದ್ದಾರೆ. ಅಂತ ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ?.

ಹೌದು ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಕುಂಭಮೇಳ' ಎಂಬ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ ಅಂತ ಸುದ್ದಿಯಾಗಿತ್ತು.

ಇದೀಗ ನಟ-ನಿರ್ದೇಶಕ 'ಜೋಗಿ' ಪ್ರೇಮ್ ಅವರ ಹೊಸ ಪ್ರಾಜೆಕ್ಟ್ ನಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ನಟರಿಬ್ಬರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಅತ್ಯಂತ ದೊಡ್ಡ ಬಜೆಟ್ ನ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಿನಿಮಾದ ಹೆಸರು 'ಕುಂಭಮೇಳ' ಹೌದೋ ಅಲ್ವೋ ಅನ್ನೋದು ಇನ್ನು ಪಕ್ಕಾ ಆಗಿಲ್ಲ.[ಶಿವಣ್ಣ-ಸುದೀಪ್ ಬಗ್ಗೆ ಈಗ ಹರಡುತ್ತಿರುವ ಸುದ್ದಿ ನಿಜಾನಾ..? ]

Kannada actor Shiva Rajkumar-Kichcha Sudeep together in director Prem's Next

ನಿರ್ಮಾಪಕ ಸಿ ಆರ್ ಮನೋಹರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಅತ್ಯಂತ ದೊಡ್ಡ ಬಜೆಟ್ ನ ಪ್ರಾಜೆಕ್ಟ್ ಇದಾಗಿದ್ದು, ಸದ್ಯಕ್ಕೆ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ಮಾಪಕರು ಒದಗಿಸಿಲ್ಲ.

ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಚಿತ್ರೀಕರಣಕ್ಕೂ ಮುಂಚಿನ ಕಾರ್ಯಗಳು ಭರದಿಂದ ಸಾಗಿದ್ದು, ಸಿನಿಮಾದ ಶೂಟಿಂಗ್ ಜನವರಿ 2016 ರಿಂದ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.[ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

ಇನ್ನು ಈ ಹೊಸ ಪ್ರಾಜೆಕ್ಟ್ ಬಹುಭಾಷೆಯಲ್ಲಿ ಮೂಡಿಬರಲಿದ್ದು, ಕಿಚ್ಚ ಸುದೀಪ್ ಅವರು ಎಲ್ಲಾ ಭಾಷೆಗಳಲ್ಲಿ ಕಾಣಿಸಿಕೊಂಡರೆ, ಶಿವಣ್ಣ ಅವರು ಕನ್ನಡ ಅವತರಿಣಿಕೆಯಲ್ಲಿ ಮಾತ್ರ ಮಿಂಚಲಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ಇತರೇ ನಟರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.

Kannada actor Shiva Rajkumar-Kichcha Sudeep together in director Prem's Next

ಸದ್ಯಕ್ಕೆ ಶಿವಣ್ಣ ಅವರು 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಯ ಜೊತೆಗೆ 'ಕಬೀರ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾದರೆ, ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಹಾಗೂ ಕೆ.ಎಸ್ ರವಿಕುಮಾರ್ ಅವರ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.[ಶಿವಣ್ಣ, ಕಿಚ್ಚ ನಡುವೆ ತಂದಿಟ್ಟ ವಿಘ್ನ ಸಂತೋಷಿಗಳಾರು? ]

ಅದೇನೇ ಇರಲಿ, ಒಟ್ನಲ್ಲಿ ಇವರಿಬ್ಬರೂ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದರಿಂದ, ಇವರಿಬ್ಬರ ಜುಗಲ್ ಬಂದಿಗೆ ಅಭಿಮಾನಿಗಳಂತೂ ಫುಲ್ ಫಿದಾ ಆಗೋದು ಗ್ಯಾರಂಟಿ.

English summary
Kannada Director Prem seems to have pulled off an incredible coup. According to Gandhinagar buzz, the director has managed to bring two kannada superstars Shivarajkumar and Sudeep together for the first time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada